ಚೆನ್ನೈ: ಜನಪ್ರಿಯ ರೆಸ್ಟೋರೆಂಟ್‍ನಲ್ಲಿ ಆರ್ಡರ್ ಮಾಡಿದ್ದ ಊಟದಲ್ಲಿ ಹುಳುಗಳು ಕಂಡು ಬಂದಿದೆ ಎಂದು ಆರೋಪಿಸಿ ಮಹಿಳೆಯೊಬ್ಬರು ರೆಸ್ಟೋರೆಂಟ್ ವಿರುದ್ಧ ದೂರು ದಾಖಲಿಸಿದ್ದಾರೆ.
ತಮಿಳುನಾಡಿನ ರಾಜಧಾನಿ ಚೆನ್ನೈನಲ್ಲಿ ಸೋಮವಾರ ಈ ಘಟನೆ ನಡೆದಿದ್ದು, ಮಹಿಳೆಯನ್ನು ಅಶೋಕ್ ನಗರದ ನಿವಾಸಿ ರಾಣಿ ಎಂದು ಗುರುತಿಸಲಾಗಿದೆ. ಮಹಿಳೆ ತಮ್ಮ ಮಗನೊಂದಿಗೆ ಮಾಲ್‍ಗೆ ಹೋಗಿದ್ದರು. ಈ ವೇಳೆ ಮಾಲ್‍ನಲ್ಲಿದ್ದ ‘ನಮ್ಮ ವಿದ್ಯಾ ಎಂಬ ಹೆಸರಿನ ರೆಸ್ಟೋರೆಂಟ್‍ಗೆ ತೆರಳಿದರು. ಅಲ್ಲಿ ಮಗನ ಇಚ್ಛೆಯಂತೆ ಚೋಲಾ ಪೂರಿ ಆರ್ಡರ್ ಮಾಡಿದರು. ಆದರೆ ಊಟ ಬಂದ ನಂತರ ಆಹಾರದಲ್ಲಿ ಹುಳು ಹರಿದಾಡುತ್ತಿರುವುದನ್ನು ಗಮನಿಸಿ ಕಿರುಚಾಡಿದ್ದಾರೆ.
Advertisement
Advertisement
Advertisement
ವಸಂತ ಭವನ ರೆಸ್ಟೊರೆಂಟ್ ಚೆನ್ನೈನ ಕೊಯಾಂಬೆಡು ಪ್ರದೇಶದಲ್ಲಿರುವ ಫೇಮಸ್ ಸಸ್ಯಾಹಾರಿ ರೆಸ್ಟೋರೆಂಟ್ ಆಗಿದ್ದು, ಈ ಬಗ್ಗೆ ಮಹಿಳೆ ಆಹಾರ ಸುರಕ್ಷತಾ ಇಲಾಖೆಗೆ ದೂರು ನೀಡಿದ್ದಾರೆ. ಸದ್ಯ ಈ ಸುದ್ದಿ ಸೋಶಿಯಲ್ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಇದನ್ನೂ ಓದಿ: Exclusive: ಮುಖಕ್ಕೆ ಮಾಸ್ಕ್ ಧರಿಸಿ ಕಲ್ಲು ಹೊಡೆಯಿರಿ – ಶಿವಮೊಗ್ಗ ಗಲಾಟೆಯ ಪ್ಲ್ಯಾನ್ ವೀಡಿಯೋ ಔಟ್
Advertisement
ಇದೀಗ ಆಹಾರ ಸುರಕ್ಷತಾ ಅಧಿಕಾರಿಗಳು ರೆಸ್ಟೋರೆಂಟ್ ಮತ್ತು ಕಿಚನ್ ಕೆಲಸದ ಮೇಲೆ ತಾತ್ಕಾಲಿಕವಾಗಿ ನಿಷೇಧವನ್ನು ವಿಧಿಸಿದ್ದಾರೆ ಮತ್ತು ಆಹಾರ ಸುರಕ್ಷತಾ ಕಾಯ್ದೆಗೆ ಅನುಗುಣವಾಗಿ ಅದರ ಮಾಲೀಕರಿಗೆ ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. ಇದನ್ನೂ ಓದಿ: ನಾನು ನಿತೀಶ್ ಕುಮಾರ್‌ಗೆ ಬೆಂಬಲ ನೀಡುತ್ತೇನೆ: ಪ್ರಶಾಂತ್ ಕಿಶೋರ್
ಕಳೆದ ತಿಂಗಳು ದೆಹಲಿಯ ಜನಪ್ರಿಯ ಉಪಾಹಾರ ಗೃಹದ ಊಟವೊಂದರಲ್ಲಿ ಹಲ್ಲಿ ಪತ್ತೆಯಾಗಿತ್ತು. ಕೆಫೆಗೆ ಭೇಟಿ ನೀಡಿದ ವ್ಯಕ್ತಿಯೊಬ್ಬರು ತಮ್ಮ ಇನ್‍ಸ್ಟಾಗ್ರಾಮ್ ಹ್ಯಾಂಡಲ್‍ನಲ್ಲಿ ಈ ಘಟನೆಯನ್ನು ಪೋಸ್ಟ್ ಮಾಡಿಕೊಳ್ಳುವ ಮೂಲಕ ತಮ್ಮ ಅಭಿಪ್ರಾಯವನ್ನು ಹಂಚಿಕೊಂಡಿದ್ದರು.