ಭೋಪಾಲ್: ಕುನೋ ಪಾರ್ಕ್‌ನ (Kuno Park) ಚಿರತೆಯೊಂದು (Cheetah)ಶಿಯೋಪುರ್ ರಸ್ತೆಯಲ್ಲಿ ಓಡಾಡುತ್ತಿರುವ ವೀಡಿಯೋವೊಂದು ವೈರಲ್ ಆಗುತ್ತಿದ್ದು, ಸ್ಥಳೀಯರಲ್ಲಿ ಆತಂಕ ಮೂಡಿಸಿದೆ.
ಮಧ್ಯಪ್ರದೇಶದ (Madhya Pradesh) ಕುನೋ ರಾಷ್ಟ್ರೀಯ ಉದ್ಯಾನವನದ (Kuno National Park) ಚಿರತೆ ಶಿಯೋಪುರ್ (Sheopur) ರಸ್ತೆಯಲ್ಲಿ ಓಡಾಡುತ್ತಿರುವ ವೀಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದರಿಂದಾಗಿ ಶಿಯೋಪುರ್ ನಿವಾಸಿಗಳು ಭಯಭೀತರಾಗಿದ್ದಾರೆ. ರಾತ್ರಿ ಹೊತ್ತಲ್ಲಿ ಖಾಲಿ ರಸ್ತೆಯಲ್ಲಿ ನಿಧಾನಗತಿಯಲ್ಲಿ ನಡೆದುಕೊಂಡು ಹೋಗುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ವೈರಲ್ ಆದ ವೀಡಿಯೋದಲ್ಲಿ ಚಿರತೆ ಬೀದಿ ನಾಯಿಯ ಮೇಲೆ ದಾಳಿ ಮಾಡಿದೆ.ಇದನ್ನೂ ಓದಿ: ಕಿಲಾಡಿ ಲೇಡಿಯಿಂದ ಕಂಟ್ರಾಕ್ಟರ್ ಸುಲಿಗೆ – ಟೀ ಕುಡಿಯಲು ಕರೆದು ದರೋಡೆ ಮಾಡಿಸಿದ ಸುಂದರಿ..!
Advertisement
Advertisement
2023ರ ಫೆಬ್ರವರಿಯಲ್ಲಿ ದಕ್ಷಿಣ ಆಫ್ರಿಕಾದಿಂದ ಎರಡು ಗಂಡು ಚಿರತೆಗಳನ್ನು ತರಲಾಗಿತ್ತು. ಆ ಪೈಕಿ ಒಂದು ಚಿರತೆ ವಾಯು (ಚಿರತೆಯ ಹೆಸರು) ಡಿ.4 ರಂದು ಕುನೋಸ್ ಪಾಲ್ಪುರ್ ಅರಣ್ಯಕ್ಕೆ ಬಿಡಲಾಯಿತು. ಕಳೆದ ಕೆಲವು ದಿನಗಳಿಂದ, ಶಿಯೋಪುರ್‌ದ ಸ್ಥಳೀಯರು ಶಾಲೆಗಳು ಹಾಗೂ ವಿವಿಧ ಜಾಗಗಳಲ್ಲಿ ಚಿರತೆ ಓಡಾಡಿರುವ ಕುರಿತು ವರದಿ ಮಾಡಿದ್ದಾರೆ.
Advertisement
ಈ ಕುರಿತು ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಉತ್ತಮ್ ಶರ್ಮಾ ಮಾತನಾಡಿ, ವಾಯು ಈಗ ಶಿಯೋಪುರ್ ನಗರದಿಂದ ಬೇರೆ ಕಡೆ ಸ್ಥಳಾಂತರಗೊಂಡಿದೆ ಎಂದು ಖಚಿತಪಡಿಸಿದ್ದಾರೆ. ನಾವು ಚಿರತೆಯ ಸ್ಥಳವನ್ನು ಬಹಿರಂಗಪಡಿಸಲು ಸಾಧ್ಯವಿಲ್ಲ, ಆದರೆ ಇನ್ನೂ ಮುಂದೆ ಶಿಯೋಪುರ ನಗರದಲ್ಲಿ ಚಿರತೆಯ ಭಯ ಬೇಡ. ಸಾರ್ವಜನಿಕರ ಸುರಕ್ಷತೆಗಾಗಿ ಅರಣ್ಯ ಅಧಿಕಾರಿಗಳು ಚಿರತೆಯ ಮೇಲೆ ನಿಗಾ ಇರಿಸಿದ್ದಾರೆ ಎಂದು ತಿಳಿಸಿದರು.ಇದನ್ನೂ ಓದಿ: ಅಕ್ರಮವಾಗಿ ಸಾಗಿಸುತ್ತಿದ್ದ 8 ಲಕ್ಷಕ್ಕೂ ಅಧಿಕ ಮೌಲ್ಯದ ವಸ್ತು ಜಪ್ತಿ – ಐವರು ಅರೆಸ್ಟ್