ಚಂಡೀಗಢ: ಪಂಜಾಬ್ ಲೋಕ ಕಾಂಗ್ರೆಸ್ ವರಿಷ್ಠ ಕ್ಯಾಪ್ಟನ್ ಅಮರಿಂದರ್ ಸಿಂಗ್ ಭಾನುವಾರ ಫೆಬ್ರವರಿ 20 ತಮ್ಮ ಮಾಜಿ ಸಹೋದ್ಯೋಗಿಗಳಾದ ನವಜೋತ್ ಸಿಂಗ್ ಸಿಧು ಮತ್ತು ಚರಂಜಿತ್ ಸಿಂಗ್ ಚನ್ನಿ ಅವರನ್ನು ದೂರಿದ್ದಾರೆ. ವಿಧಾನಸಭಾ ಚುನಾವಣೆಯಲ್ಲಿ ಪಂಜಾಬ್‍ನಲ್ಲಿ ಕಾಂಗ್ರೆಸ್ ನಿರ್ನಾಮವಾಗಲಿದೆ ಎಂದು ಹೇಳಿದ್ದಾರೆ.
ಚುನಾವಣೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಪಟಿಯಾಲದಿಂದ ಸ್ಪರ್ಧಿಸಿರುವ ಪಂಜಾಬ್ ಮಾಜಿ ಸಿಎಂ, ತಮ್ಮ ತವರು ನೆಲದಿಂದ ಗೆಲ್ಲುವ ವಿಶ್ವಾಸವಿದೆ. ನಾನು ಪಟಿಯಾಲದಲ್ಲಿ ಗೆಲ್ಲುವುದು ಖಚಿತವಾಗಿದೆ. ನಾವು ಚುನಾವಣೆಯಲ್ಲಿ ಗೆಲ್ಲುತ್ತೇವೆ ಅಂತ ನಾನು ಭಾವಿಸುತ್ತೇನೆ. ಕಾಂಗ್ರೆಸ್ ಬೇರೆ ಜಗತ್ತಿನಲ್ಲಿ ವಾಸಿಸುತ್ತಿದ್ದು, ರಾಜ್ಯದಲ್ಲಿ ಅದು ನಾಶವಾಗುತ್ತದೆ ಎಂದರು. ಇದನ್ನೂ ಓದಿ: ಪಂಜಾಬ್ ರಾಜ್ಯವನ್ನು ಇಷ್ಟ ಪಡುವವರು, ಮಾಫಿಯಾ ನಡುವಿನ ಚುನಾವಣೆ ಸ್ಪರ್ಧೆಯಾಗಿದೆ: ಸಿಧು
Advertisement
They (Congress) are concerned about what I am able to achieve in Punjab which is going against them. I can predict that Congress will not get more than 20-30 seats: Capt Amarinder Singh on #PunjabElections2022 pic.twitter.com/qe8jcaP5RF
— ANI (@ANI) February 20, 2022
Advertisement
117 ಸದಸ್ಯ ಬಲದ ಅಸೆಂಬ್ಲಿಯಲ್ಲಿ ತಮ್ಮ ಹಿಂದಿನ ಪಕ್ಷವು ಕೇವಲ 20-30 ಸ್ಥಾನಗಳನ್ನು ಗಳಿಸಲಿದೆ. ತಮ್ಮ ವಿರುದ್ಧ ನಡೆಯುತ್ತಿರುವ ಪಂಜಾಬ್‍ನಲ್ಲಿ ನಾನು ಏನು ಸಾಧಿಸಬಲ್ಲೆ ಎಂಬುದರ ಬಗ್ಗೆ ಕೈ ಪಕ್ಷ ಚಿಂತೆಗೀಡಾಗಿದೆ. ಕಾಂಗ್ರೆಸ್ 20-30ಕ್ಕಿಂತ ಹೆಚ್ಚು ಸ್ಥಾನಗಳನ್ನು ಪಡೆಯುವುದಿಲ್ಲ ಅಂತ ನಾನು ಊಹಿಸಬಲ್ಲೆ ಎಂದು ಭವಿಷ್ಯ ನುಡಿದಿದ್ದಾರೆ.
Advertisement
Advertisement
ಚರಣ್‍ಜಿತ್ ಚನ್ನಿ ಎಂದರೇನು? 3 ತಿಂಗಳಲ್ಲಿ ಪಂಜಾಬ್‍ನಲ್ಲಿ ಪವಾಡ ಮಾಡಬಲ್ಲ ಜಾದೂಗಾರನಾ. ಚುನಾವಣೆಗೆ ಮುನ್ನ ಅವರನ್ನು ಹೀರೋ ಮಾಡಲು ಪ್ರಯತ್ನಿಸುವ ಎಲ್ಲಾ ಕ್ರೆಡಿಟ್‍ಗಳನ್ನು ನೀಡುವುದು. ಇಬ್ಬರೂ ರಾಜ್ಯದಲ್ಲಿ ನಿಷ್ಟ್ರಯೋಜಕರು ಅಂತ ನಾನು ಭಾವಿಸುತ್ತೇನೆ ಎಂದು ಸಿಧು ಮತ್ತು ಹಾಲಿ ಪಂಜಾಬ್ ಸಿಎಂ ಚನ್ನಿ ವಿರುದ್ಧ ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ತೃಣಮೂಲ ಕಾಂಗ್ರೆಸ್ ಹಿರಿಯ ನಾಯಕ ಸಾಧನ್ ಪಾಂಡೆ ಇನ್ನಿಲ್ಲ
ರಾಜ್ಯದಲ್ಲಿ ಈಗಾಗಲೇ 117 ಸ್ಥಾನಗಳಿಗೆ ಮತದಾನ ನಡೆಯುತ್ತಿದ್ದು, ಪಂಜಾಬ್‍ನಲ್ಲಿ ಮಧ್ಯಾಹ್ನ 1 ಗಂಟೆಯವರೆಗೆ ಶೇಕಡಾ 34 ರಷ್ಟು ಮತದಾನವಾಗಿದೆ. ಸಿಎಂ ಚರಣ್‍ಜಿತ್ ಸಿಂಗ್ ಚನ್ನಿ, ನವಜೋತ್ ಸಿಧು, ಸುಖಬೀರ್ ಬಾದಲ್, ಭಗವಂತ್ ಮಾನ್ ಮತ್ತು ಕ್ಯಾಪ್ಟನ್ ಅಮರಿಂದರ್ ಸಿಂಗ್ ಕಣದಲ್ಲಿರುವ ಪ್ರಮುಖ ನಾಯಕರಾಗಿದ್ದಾರೆ.