ಗೂಡ್ಸ್ ಆಂಡ್ ಸರ್ವಿಸ್ ಟ್ಯಾಕ್ಸ್ (ಜಿಎಸ್‍ಟಿ) ದರಗಳ ಬದಲಾವಣೆಯಾಗಿದ್ದು, ಹೊಸ ನಿಯಮಗಳು 2022ರ ಜನವರಿ 1ರಿಂದ ಜಾರಿಯಾಗಲಿದೆ. ಹೊಸ ದರಗಳಲ್ಲಿ ಯಾವುದರ ಬೆಲೆ ಹೆಚ್ಚಾಗಲಿದೆ ಎಂಬ ಮಾಹಿತಿ ಇಲ್ಲಿದೆ.
ಜಿಎಸ್‍ಟಿ ಕೌಂಸಿಲ್‍ನ ಶಿಫಾರಸುಗಳ ಆಧಾರದ ಮೇಲೆ ನೇರ ತೆರಿಗೆಗಳ ಕೇಂದ್ರೀಯ ಮಂಡಳಿ (ಸಿಬಿಐಸಿ) ಉಡುಪು, ಜವಳಿ ಹಾಗೂ ಪಾದರಕ್ಷೆಗಳಿಗೆ ಅನ್ವಯವಾಗುವ ಜಿಎಸ್‍ಟಿ ದರವನ್ನು ಹೆಚ್ಚಿಸಿದೆ. ಇವುಗಳ ಮೇಲಿನ ದರಗಳು ಜನವರಿ 1ರಿಂದ ಶೇ.5ರಿಂದ ಶೇ.12ಕ್ಕೆ ಏರಿಕೆಯಾಗಲಿದೆ.
Advertisement
Advertisement
1000 ರೂ.ಗೂ ಹೆಚ್ಚಿನ ಬೆಲೆಯ ಉಡುಪುಗಳ ಮೇಲಿನ ಜಿಎಸ್‍ಟಿ ಹೆಚ್ಚಾಗಲಿದ್ದು, ಇದರೊಂದಿಗೆ ಬಟ್ಟೆಗಳು, ಸಿಂಥೆಟಿಕ್ ನೂಲು, ಹೊದಿಕೆಗಳು, ಟೆಂಟ್‍ಗಳು ಹಾಗೂ ಇತರ ರೀತಿಯ ಜವಳಿ ವಸ್ತುಗಳ ದರಗಳು ಹೆಚ್ಚಾಗಲಿದೆ. 1000 ರೂ.ಗೂ ಹೆಚ್ಚು ದರದ ಪಾದರಕ್ಷೆಗಳ ಮೇಲಿನ ಜಿಎಸ್‍ಟಿ ಕೂಡಾ ಶೇ. 5ರಿಂದ ಶೇ. 12ಕ್ಕೆ ಏರಿಕೆಯಾಗಲಿದೆ. ಇದನ್ನೂ ಓದಿ: ದೇಶದಲ್ಲಿ 2021ರಲ್ಲಿ 126 ಹುಲಿಗಳು ಸಾವು – ಹತ್ತು ವರ್ಷಗಳಲ್ಲೇ ಹೆಚ್ಚು
Advertisement
Advertisement
ಆನ್‍ಲೈನ್‍ನಲ್ಲಿ ಬುಕ್ಕಿಂಗ್ ಮಾಡುವ ಆಟೋ ರೈಡ್‍ಗಳಿಗೂ ಶೇ. 5ರಷ್ಟು ಜಿಎಸ್‍ಟಿ ವಿಧಿಸುವುದಾಗಿ ಕೇಂದ್ರ ಸರ್ಕಾರ ಘೋಷಿಸಿದ್ದು, ಇದರಿಂದ ಓಲಾ ಹಾಗೂ ಉಬರ್ ನಂತಹ ಆನ್‍ಲೈನ್ ಅಪ್ಲಿಕೇಶನ್‍ಗಳ ಮೂಲಕ ಬುಕ್ ಮಾಡುವ ಆಟೋ ರಿಕ್ಷಾದ ದರವೂ ದುಬಾರಿಯಾಗಲಿದೆ. ಆನ್‍ಲೈನ್‍ನಲ್ಲಿ ಬುಕ್ ಮಾಡದೇ ರಸ್ತೆಗಳಲ್ಲಿ ಸಿಗುವ ಆಟೋ ರಿಕ್ಷಾಗಳು ಮಾತ್ರ ಜಿಎಸ್‍ಟಿ ಮುಕ್ತವಾಗಿರುತ್ತದೆ. ಇದನ್ನೂ ಓದಿ: ಚುನಾವಣಾ ಫಲಿತಾಂಶದಲ್ಲಿ ಅತ್ತೆ ಎದುರು ಗೆದ್ದು ಬೀಗಿದ ಸೊಸೆ!
ಫುಡ್ ಡೆಲಿವರಿಗಳಂತಹ ಆನ್‍ಲೈನ್‍ನಲ್ಲಿ ಆರ್ಡರ್ ಮಾಡಲಾಗುವ ಆಹಾರಗಳಿಗೂ ಜಿಎಸ್‍ಟಿ ನಿಯಮ ಬದಲಾಗಲಿದೆ. ಸ್ವಿಗ್ಗಿ, ಝೊಮೆಟೋಗಳಂತಹ ಆನ್‍ಲೈನ್ ಫುಡ್ ಡೆಲಿವರಿ ಅಪ್ಲಿಕೇಶನ್‍ಗಳಿಗೂ ಶೇ. 5ರಷ್ಟು ಜಿಎಸ್‍ಟಿ ವಿಧಿಸಲಾಗಿದೆ. ಆದರೆ ಈ ನಿಯಮ ಫುಡ್ ಡೆಲಿವರಿ ಕಂಪನಿ ಹಾಗೂ ಹೊಟೇಲ್‍ಗಳ ನಡುವಿನ ವ್ಯವಹಾರಕ್ಕೆ ಪರಿಣಾಮ ಬೀರಲಿದ್ದು, ಇದರ ಬಗ್ಗೆ ಗ್ರಾಹಕರು ತಲೆಕೆಡಿಸಿಕೊಳ್ಳುವ ಅಗತ್ಯ ಇಲ್ಲ.