ನವದೆಹಲಿ: 2021 ರಲ್ಲಿ ದೇಶಾದ್ಯಂತ 126 ಹುಲಿಗಳು ಸಾವನ್ನಪ್ಪಿವೆ. ಕಳೆದ 10 ವರ್ಷಗಳ ಅಂಕಿಅಂಶಗಳಿಗೆ ಹೋಲಿಸಿದರೆ ಈ ಬಾರಿಯೇ ಅತಿ ಹೆಚ್ಚು ಹುಲಿಗಳು ಮೃತಪಟ್ಟಿವೆ ಎಂದು ರಾಷ್ಟ್ರೀಯ ಹುಲಿ ಸಂರಕ್ಷಣಾ ಪ್ರಾಧಿಕಾರ (ಎನ್‌ಟಿಸಿಎ) ತಿಳಿಸಿದೆ.
ಎನ್‌ಟಿಸಿಎ ವರದಿ ಪ್ರಕಾರ, ತೀರಾ ಇತ್ತೀಚಿನ ವರ್ಷಗಳಲ್ಲಿ ಮಧ್ಯಪ್ರದೇಶದಲ್ಲಿ ಹೆಚ್ಚು ಹುಲಿಗಳ ಸಾವು ಪ್ರಕರಣಗಳು ವರದಿಯಾಗಿವೆ. ಇದನ್ನೂ ಓದಿ: ಓಮಿಕ್ರಾನ್ ಭೀತಿ – ಕರ್ನಾಟಕ ಸೇರಿ ಎಂಟು ರಾಜ್ಯಗಳಿಗೆ ಕೇಂದ್ರ ಆರೋಗ್ಯ ಇಲಾಖೆಯಿಂದ ಪತ್ರ
Advertisement
Advertisement
ಎನ್‌ಟಿಸಿಎ 2012ರಿಂದ ಹುಲಿಗಳ ಸಾವು ಕುರಿತು ದತ್ತಾಂಶ ಸಂಗ್ರಹ ಕಾರ್ಯ ಆರಂಭಿಸಿತು. 2016ರಲ್ಲಿ 121 ಹುಲಿಗಳು ಮೃತಪಟ್ಟಿರುವುದು ವರದಿಯಾಗಿದೆ. ಈ ಅಂಕಿಅಂಶಕ್ಕೆ ಹೋಲಿಸಿದರೆ ಈ ವರ್ಷವೇ ಹೆಚ್ಚು ಹುಲಿಗಳು ಸಾವನ್ನಪ್ಪಿವೆ.
Advertisement
ವಿಶ್ವದ ಒಟ್ಟು ಹುಲಿಗಳ ಸಂಖ್ಯೆಯಲ್ಲಿ ಶೇ. 75 ರಷ್ಟು ಹುಲಿಗಳು ಭಾರತದಲ್ಲೇ ಇವೆ. 2006ರಲ್ಲಿ 1,411 ಹುಲಿಗಳು ಇದ್ದವು. ಇದು 2028 ರ ವೇಳೆಗೆ 2,967ಕ್ಕೆ ಸಂಖ್ಯೆಗೆ ಏರಿದೆ ಎಂದು ಈಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಖುಷಿ ವ್ಯಕ್ತಪಡಿಸಿದ್ದರು. ಇದನ್ನೂ ಓದಿ: ನಾಯಿಗಾಗಿ ಜಡೆ ಜಗಳ – ಯುವತಿಯನ್ನ ಕಚ್ಚಿದ ಮಹಿಳೆ!
Advertisement
ಹುಲಿಗಳ ಸಾವಿಗೆ ನೈಸರ್ಗಿಕ ಕಾರಣಗಳನ್ನು ಎನ್‌ಟಿಸಿಎ ನೀಡಿದೆ. ಅಷ್ಟೇ ಅಲ್ಲದೇ ಮಾನವ-ಪ್ರಾಣಿ ಸಂಘರ್ಷದಿಂದಲೂ ಹುಲಿಗಳು ಸಾವನ್ನಪ್ಪಿವೆ ಎನ್ನಲಾಗಿದೆ. 130 ಕೋಟಿ ಜನಸಂಖ್ಯೆ ಇರುವ ಭಾರತದಲ್ಲಿ ಇತ್ತೀಚಿನ ದಶಕಗಳಲ್ಲಿ ಹುಲಿಗಳ ಆವಾಸ ಸ್ಥಾನಗಳ ಮೇಲೆ ಮಾನವ ಅತಿಕ್ರಮಣ ಹೆಚ್ಚಾಗಿದೆ. ಹುಲಿಗಳ ಸಂಖ್ಯೆಯನ್ನು ವೃದ್ಧಿಸುವ ಉದ್ದೇಶದಿಂದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ರೂಪಿಸಿದೆ.