ದಾವಣಗೆರೆ: ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ನಡೆದು ಫಲಿತಾಂಶ ಹೊರಬಿದ್ದಿದೆ. ಮತದಾರ ಆಯಾಯ ಅಭ್ಯರ್ಥಿಗಳ ಹಣೆ ಬರಹ ಕೂಡ ಬರೆದಿದ್ದು, ಕೆಲವರು ಗೆಲುವಿನ ನಗೆ ಬೀರಿದ್ರೆ ಕೆಲ ಅಭ್ಯರ್ಥಿಗಳು ಸೋಲುಂಡಿದ್ದಾರೆ. ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲೂಕಿನ ಕರೆಕಟ್ಟೆ ಗ್ರಾಮ ಪಂಚಾಯತ್‍ನ ಎರಡನೇ ವಾರ್ಡ್‍ನ ಉಪಚುನಾವಣೆಯಲ್ಲಿ ಸೊಸೆ ವಿರುದ್ಧ ಅತ್ತೆ ಗೆದ್ದು ಬೀಗಿದ್ದಾರೆ.
Advertisement
ಎರಡನೇ ವಾರ್ಡ್‍ನ ಸದಸ್ಯೆಯೊಬ್ಬರು ಅಕಾಲಿಕವಾಗಿ ಸಾವನಪ್ಪಿದ್ದರಿಂದ ತೆರವಾದ ಸ್ಥಾನಕ್ಕೆ ಉಪಚುನಾವಣೆ ನಡೆದಿತ್ತು. ತೆರವಾದ ಸ್ಥಾನಕ್ಕೆ ಸೊಸೆ ಲಕ್ಷಮ್ಮ ಹಾಗೂ ಅತ್ತೆ ಪಾರ್ವತಮ್ಮ ಇಬ್ಬರು ಸ್ಪರ್ಧೆ ನಡೆಸಿದ್ದರು. ಚುನಾವಣೆ ನಡೆದ ಬಳಿಕ ಇಂದು ಮತ ಎಣಿಕೆ ಕಾರ್ಯ ಭರದಿಂದ ನಡೆದಿದ್ದು, ಇಂದು ಹೊರಬಿದ್ದ ಫಲಿತಾಂಶದಲ್ಲಿ ಅತ್ತೆ ಪಾರ್ವತಮ್ಮ, ಸೊಸೆ ಲಕ್ಷಮ್ಮಳ ವಿರುದ್ಧ 91 ಮತಗಳಿಂದ ಜಯಗಳಿಸಿದ್ದಾರೆ. ಇದನ್ನೂ ಓದಿ: ಹಿಂದೂಗಳಿಗೆ ಹಿಂದೂಗಳಾಗಿ ಹುಟ್ಟಿದ್ದೇ ತಪ್ಪು ಅನ್ನಿಸಬಾರದು: ಸಿ.ಟಿ.ರವಿ
Advertisement
Advertisement
ಲಕ್ಷಮ್ಮ 412 ಮತ ಪಡೆದು ಸೊಲುಕಂಡರೇ ಇತ್ತಾ ಅತ್ತೆ ಪಾರ್ವತಮ್ಮ 502 ಮತಗಳನ್ನು ಪಡೆದು ಗೆಲುವಿನ ನಗೆ ಬೀರಿದರು. ಪಾರ್ವತಮ್ಮ ಗೆಲುವಿನ ಬೆನ್ನಲ್ಲೇ ಪಟಾಕಿ ಸಿಡಿಸಿ ಸಿಹಿ ಹಂಚಿ ಅವರ ಕುಟುಂಬದವರು ಸಂತಸ ವ್ಯಕ್ತಪಡಿಸಿದರು. ಅತ್ತೆ ಗೆಲುವನ್ನು ಸೊಸೆ ಕೂಡ ಒಪ್ಪಿಕೊಂಡು ಸಂತಸ ವ್ಯಕ್ತಪಡಿಸಿದರು. ಇದಲ್ಲದೆ ನಮ್ಮಬ್ಬಿರಲ್ಲಿ ಯಾರೇ ಗೆದ್ದರು ಊರಿನ ಅಭಿವೃದ್ಧಿಗೆ ಶ್ರಮಿಸುತ್ತೇವೆ ಎಂದು ಲಕ್ಷಮ್ಮ ಸಂತಸ ಹಂಚಿಕೊಂಡರು. ಇದನ್ನೂ ಓದಿ: ಪಾದಯಾತ್ರೆಗೆ ಭಾಗವಹಿಸಿ ಏನು ಮಾಡಲಿ ಹೇಳಿ: ಡಿಕೆಶಿಗೆ ಟಾಂಗ್ ಕೊಟ್ಟ HDK
Advertisement