ಹುಬ್ಬಳ್ಳಿ: ಚಂದ್ರಶೇಖರ ಗುರೂಜಿ ಹತ್ಯೆ ನಡೆದ ಹೋಟೆಲ್‌ನಲ್ಲಿ ಇಂದು ಹೋಮ, ಹವನ ನಡೆದಿದೆ.
ಗುರೂಜಿ ಹತ್ಯೆಯಿಂದ ಸಿಬ್ಬಂದಿ ಆತಂಕಗೊಂಡಿದ್ದರು. ಈ ಹಿನ್ನೆಲೆಯಲ್ಲಿ ಉಣಕಲ್ ಕೆರೆ ಬಳಿಯ ದಿ ಪ್ರೆಸಿಡೆಂಟ್ ಹೋಟೆಲ್ ಆಡಳಿತ ಮಂಡಳಿ ಮತ್ತು ಸಿಬ್ಬಂದಿ ವರ್ಗ ದೇವರ ಮೊರೆ ಹೋಗಿದ್ದಾರೆ.
ಹುಬ್ಬಳ್ಳಿ ಖ್ಯಾತ ಪುರೋಹಿತರನ್ನು ಕರೆಯಿಸಿ ಗುರೂಜಿ ಕೊನೆಯುಸಿರೆಳೆದ ಸ್ಥಳದಲ್ಲೇ ಸುದರ್ಶನ ಹೋಮ ಮಾಡಿಸಿದ್ದಾರೆ. ಇಬ್ಬರು ಪುರೋಹಿತರು ಆಗಮಿಸಿ ಪೂಜೆಯನ್ನು ನೆರವೇರಿಸಿಕೊಟ್ಟಿದ್ದಾರೆ. ಇದನ್ನೂ ಓದಿ: T20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಈವರೆಗೆ ಯಾರೂ ಮಾಡದ ದಾಖಲೆ ಬರೆದ ರೋಹಿತ್ ಶರ್ಮಾ
ಭಯ ದೂರಮಾಡಲು ಮತ್ತು ಹೋಟೆಲ್ ಶುದ್ಧಗೊಳಿಸಲು ಹೋಮ ಮಾಡಲಾಗಿದೆ ಎಂಬ ವಿಚಾರ ತಿಳಿದು ಬಂದಿದೆ.