CricketLatestMain PostSports

T20 ಕ್ರಿಕೆಟ್‍ನಲ್ಲಿ ಟೀಂ ಇಂಡಿಯಾ ನಾಯಕನಾಗಿ ಈವರೆಗೆ ಯಾರೂ ಮಾಡದ ದಾಖಲೆ ಬರೆದ ರೋಹಿತ್ ಶರ್ಮಾ

Advertisements

ಲಂಡನ್: ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಟಿ20 ಕ್ರಿಕೆಟ್‍ನಲ್ಲಿ ಸತತ 13 ಪಂದ್ಯಗಳಲ್ಲಿ ಜಯ ದಾಖಲಿಸಿ ನಾಯಕನಾಗಿ ನೂತನ ದಾಖಲೆ ಬರೆದಿದ್ದಾರೆ.

ಇಂಗ್ಲೆಂಡ್‍ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಭಾರತ ತಂಡ 50 ರನ್‍ಗಳ ಅಂತರದ ಜಯ ದಾಖಲಿಸಿದ ಬಳಿಕ ರೋಹಿತ್ ಈ ಮಹತ್ವದ ದಾಖಲೆ ಬರೆದರು. ರೋಹಿತ್ ಶರ್ಮಾ ನೇತೃತ್ವದಲ್ಲಿ ಬಾಂಗ್ಲಾದೇಶ, ನ್ಯೂಜಿಲೆಂಡ್, ವೆಸ್ಟ್ ಇಂಡೀಸ್, ಶ್ರೀಲಂಕಾ ವಿರುದ್ಧ ಟಿ20 ಸರಣಿಯಲ್ಲಿ ಭಾರತ ತಂಡ  ಸತತ 12 ಪಂದ್ಯಗಳನ್ನು ನಾಯಕರಾಗಿ ಶರ್ಮಾ ಗೆದ್ದುಗೊಂಡಿದ್ದರು. ಇದೀಗ ಇಂಗ್ಲೆಂಡ್ ವಿರುದ್ಧದ ಜಯದೊಂದಿಗೆ ಸತತ 13 ಪಂದ್ಯ ಗೆದ್ದ ನಾಯಕ ಎಂಬ ದಾಖಲೆಯ ಒಡೆಯನಾಗಿದ್ದಾರೆ. ಇದನ್ನೂ ಓದಿ: 51 ರನ್‌ ಚಚ್ಚಿ 4 ವಿಕೆಟ್‌ ಕಿತ್ತ ಪಾಂಡ್ಯ – ನಂಬರ್ ಗೇಮ್‍ನಲ್ಲಿ ಸೋತ ಆಂಗ್ಲರು

2021ರ ಟಿ20 ವಿಶ್ವಕಪ್ ಬಳಿಕ ವಿರಾಟ್ ಕೊಹ್ಲಿ ನಾಯಕತ್ವಕ್ಕೆ ರಾಜೀನಾಮೆ ನೀಡಿದ್ದರು. ಆ ಬಳಿಕ ಟೀಂ ಇಂಡಿಯಾ ಟಿ20 ತಂಡದ ನೂತನ ನಾಯಕರಾಗಿ ರೋಹಿತ್ ಶರ್ಮಾ ತಂಡವನ್ನು ಮುನ್ನಡೆಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button