ಬೆಂಗಳೂರು: ಒಂದು ವೇಳೆ ನಿಯಮ ಮೀರಿ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಬಂದ್ ಮಾಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಲಾಗುತ್ತೆ ಎಂದು ಚಾಮರಾಜಪೇಟೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.
ಜುಲೈ-12 ರಂದು ಚಾಮರಾಜಪೇಟೆ ಬಂದ್‍ಗೆ ಕರೆ ನೀಡಲಾಗಿದೆ. ಆದರೆ ಈ ಬಂದ್‍ಗೆ ಚಾಮರಾಜಪೇಟೆಯಲ್ಲಿ ಅನುಮತಿಯಿಲ್ಲ. ಈ ಹಿನ್ನೆಲೆ ಪೊಲೀಸರು ಚಾಮರಾಜಪೇಟೆ ಒಕ್ಕೂಟ ಸಂಘಟನೆಗಳಿಗೆ ಪತ್ರ ಬರೆದಿದ್ದು, ರ‍್ಯಾಲಿ, ಮುಷ್ಕರ, ಮೆರವಣಿಗೆ ಅಥವಾ ಒತ್ತಾಯ ಪೂರ್ವಕ ಅಂಗಡಿ ಮುಗ್ಗಟ್ಟುಗಳನ್ನು ಬಂದ್ ಮಾಡುವಂತಿಲ್ಲ. ಪ್ರತಿಭಟನೆ, ರ‍್ಯಾಲಿ ನಡೆಸುವುದಕ್ಕೆ ಕೇವಲ ಫ್ರೀಡಂ ಪಾರ್ಕ್‍ನಲ್ಲಿ ಮಾತ್ರ ಅವಕಾಶವಿದೆ ಎಂದು ಸೂಚನೆ ಕೊಟ್ಟಿದ್ದಾರೆ.
Advertisement
Advertisement
ಒಂದು ವೇಳೆ ನಿಯಮ ಮೀರಿ ಚಾಮರಾಜಪೇಟೆ ಠಾಣಾ ವ್ಯಾಪ್ತಿಯಲ್ಲಿ ಬಂದ್ ಮಾಡಿದರೆ ಸೂಕ್ತ ಕ್ರಮ ತೆಗೆದುಕೊಳ್ಳಾಗುತ್ತೆ ಎಂದು ಎಚ್ಚರಿಕೆಯನ್ನು ಕೊಟ್ಟಿದ್ದಾರೆ. ಇದನ್ನೂ ಓದಿ: ಜುಲೈ 12ಕ್ಕೆ ಚಾಮರಾಜಪೇಟೆ ಬಂದ್ – ಬೆಂಬಲ ನೀಡಲು ಮುಸ್ಲಿಂ ವ್ಯಾಪಾರಿಗಳು ನಿರಾಕರಣೆ
Advertisement
ಬಂದ್ ಯಾಕೆ?
ಈದ್ಗಾ ಮೈದಾನ ವಕ್ಫ್ ಬೋರ್ಡ್‍ಗೆ ಸೇರಿದ್ದು ಎಂಬ ಪಾಲಿಕೆಯ ಹೇಳಿಕೆ ಖಂಡಿಸಿ ಜುಲೈ 12ಕ್ಕೆ ಚಾಮರಾಜಪೇಟೆ ಬಂದ್‍ಗೆ ಚಾಮರಾಜಪೇಟೆ ನಾಗರಿಕರ ಒಕ್ಕೂಟ ಕರೆ ನೀಡಿದೆ.
Advertisement
ಈದ್ಗಾ ಮೈದಾನ ಸರ್ಕಾರದ ಆಸ್ತಿ. ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಈದ್ಗಾ ಮೈದಾನ ವಕ್ಫ್ ಬೋರ್ಡ್‍ಗೆ ಸೇರಿದೆ ಎಂದು ಹೇಳಿ ಗೊಂದಲ ಮೂಡಿಸುತ್ತಿದೆ. ಶಾಸಕ ಜಮೀರ್ ಹೇಳಿದಂತೆ ಕೆಲಸ ಮಾಡುತ್ತಿದೆ. ಇದು ಆಟದ ಮೈದಾನವಾಗಿಯೇ ಇರಬೇಕು ಎಂದು ಆಗ್ರಹಿಸಿ ನಾಗರಿಕರು ಬಂದ್‍ಗೆ ಕರೆ ನೀಡಿದ್ದಾರೆ. ಇದನ್ನೂ ಓದಿ: ಜು.12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್