ಬೆಂಗಳೂರು: ಈದ್ಗಾ ಮೈದಾನ ವಕ್ಫ್ ಬೋರ್ಡ್‌ಗೆ ಸೇರಿದ್ದು ಎಂಬ ಪಾಲಿಕೆಯ ಹೇಳಿಕೆ ಖಂಡಿಸಿ ಜುಲೈ 12ಕ್ಕೆ ಬೆಂಗಳೂರಿನ ಚಾಮರಾಜಪೇಟೆ ಬಂದ್ ಆಗಲಿದೆ.
ಚಾಮರಾಜಪೇಟೆ ನಾಗರಿಕರ ಒಕ್ಕೂಟ ವೇದಿಕೆ ಬಂದ್ ಕರೆ ನೀಡಿದ್ದು ಶಿರ್ಸಿ ಸರ್ಕಲ್ ನಿಂದ ಈದ್ಗಾ ಮೈದಾನದವರೆಗೆ ರ್‍ಯಾಲಿ ನಡೆಯಲಿದೆ.
Advertisement
ಚಾಮರಾಜಪೇಟೆ ಕ್ಷೇತ್ರದ ಜನ, ವಿವಿಧ ಸಂಘಟನೆಗಳ ಜೊತೆ ಅಂಗಡಿ ಮುಂಗಟ್ಟುಗಳನ್ನ ಬಂದ್ ಮಾಡಿ ವರ್ತಕರು ಪ್ರತಿಭಟನಾ ರ್‍ಯಾಲಿಯಲ್ಲಿ ಭಾಗಿಯಾಗಲಿದ್ದಾರೆ. ಇದನ್ನೂ ಓದಿ: ಮಹಾರಾಷ್ಟ್ರ ಸ್ಪೀಕರ್ ಆಗಿ ಆಯ್ಕೆಯಾದ ರಾಹುಲ್ ನಾರ್ವೇಕರ್ ಯಾರು?
Advertisement
ಈದ್ಗಾ ಮೈದಾನ ಸರ್ಕಾರದ ಆಸ್ತಿ. ವರ್ಷಕ್ಕೆ ಎರಡು ಬಾರಿ ಮಾತ್ರ ಇಲ್ಲಿ ನಮಾಜ್ ಮಾಡಲು ಸುಪ್ರೀಂ ಕೋರ್ಟ್ ಆದೇಶ ನೀಡಿದೆ. ಹೀಗಿದ್ದರೂ ಈದ್ಗಾ ಮೈದಾನ ವಕ್ಫ್ ಬೋರ್ಡ್‌ಗೆ ಸೇರಿದೆ ಎಂದು ಹೇಳಿ ಗೊಂದಲ ಮೂಡಿಸುತ್ತಿದೆ. ಶಾಸಕ ಜಮೀರ್ ಹೇಳಿದಂತೆ ಕೆಲಸ ಮಾಡುತ್ತಿದೆ ಎಂದು ಆರೋಪಿಸಿ ನಾಗರಿಕರು ಬಿಬಿಎಂಪಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.