ಉಡುಪಿ: ವಂಚನೆ ಪ್ರಕರಣದಲ್ಲಿ ಚೈತ್ರಾ ಕುಂದಾಪುರ (Chaitra Kundapur) ಹಾಗೂ ತಂಡವನ್ನು ಸಿಸಿಬಿ ಪೊಲೀಸರು ಬಂಧಿಸಿದ್ದು, 10 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಕೋರ್ಟ್ ಒಪ್ಪಿಸಿದೆ. ಆದರೆ ಚೈತ್ರಾಳನ್ನು ಯಾರೋ ಪ್ರಕರಣದಲ್ಲಿ ಸಿಲುಕಿಸಿದ್ದಾರೆ. ಅವಳನ್ನು ಗುರಿ ಮಾಡಿಕೊಂಡು ಯಾರೋ ದುಡ್ಡು ತಿಂದಿದ್ದಾರೆ ಎಂದು ಆಕೆಯ ತಾಯಿ ರೋಹಿಣಿ (Rohini) ಹೇಳಿಕೆ ನೀಡಿದ್ದಾರೆ.
ಈ ಬಗ್ಗೆ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿರುವ ಅವರು, ಚೈತ್ರಾ ನಮ್ಮ ಜೊತೆ ಬಹಳ ಪ್ರೀತಿಯಿಂದ ಇದ್ದಳು. ಅವಳು ಮೊದಲಿನಿಂದಲೂ ಚುರುಕಿನ ಸ್ವಭಾವದವಳು. ಮೊನ್ನೆ ಫೋನ್ ಮಾಡಿ ನಮ್ಮ ಜೊತೆ ಮಾತಾಡಿದ್ದಳು. ನಮಗೆ ಧೈರ್ಯದಿಂದ ಇರುವಂತೆ ತಿಳಿಸಿದ್ದಳು ಎಂದು ಹೇಳಿದ್ದಾರೆ. ಇದನ್ನೂ ಓದಿ: ಚೈತ್ರಾ ಕುಂದಾಪುರ ಪ್ರಕರಣ ಸಂಪೂರ್ಣ ತನಿಖೆಗೆ ಮಾಜಿ ಸಿಎಂ ಬೊಮ್ಮಾಯಿ ಆಗ್ರಹ
ಚೈತ್ರಾಳನ್ನು ಗುರಿ ಮಾಡಿಕೊಂಡು ಯಾರೋ ದುಡ್ಡು ತಿಂದಿದ್ದಾರೆ. ಅವಳು ಯಾವ ಟೆನ್ಶನ್‌ನಲ್ಲಿ ಇದ್ದರೂ ನಮಗೆ ಹೇಳುವುದಿಲ್ಲ ಎಂದು ಚೈತ್ರಾ ತಾಯಿ ರೋಹಿಣಿ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ. ಇದನ್ನೂ ಓದಿ: ಆಫೀಸ್‌ಗೆ ಬಂದು ಚೈತ್ರಾ ಆ್ಯಂಡ್ ಟೀಂನಿಂದ ಆತ್ಮಹತ್ಯೆ ಬೆದರಿಕೆ: ಗೋವಿಂದ್ ಆಪ್ತ ರಕ್ಷಿತ್
Web Stories