ಬೆಂಗಳೂರು: ಚೈತ್ರಾ ಕುಂದಾಪುರ & ಗ್ಯಾಂಗ್‍ನಿಂದ ಕೋಟಿ ಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಮೊಸ ಹೋಗಿದ್ದ ಗೋವಿಂದ ಪೂಜಾರಿ ವಂಚನೆ ವಿಚಾರವಾಗಿ ಏಪ್ರಿಲ್ ತಿಂಗಳಲ್ಲೇ ಆರ್ ಎಸ್‍ಎಸ್ (RSS) ಕದ ತಟ್ಟಿದ್ದರಂತೆ.
ಈ ವೇಳೆ ಆರ್‍ಎಸ್‍ಎಸ್ ನಾಯಕರು ಪ್ರಕರಣದಲ್ಲಿ ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕಿದ್ದಾರೆ. ಅಲ್ಲದೆ ಚೈತ್ರಾ ಹಿಂದುತ್ವದ ಬಗ್ಗೆ ಭಾಷಣ ಮಾಡಿದ ಮಾತ್ರಕ್ಕೆ ವಂಚನೆ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಾಧ್ಯವಿಲ್ಲ ಎಂದಿದ್ದಾರಂತೆ. ಈ ರೀತಿ ವ್ಯವಹಾರಗಳು ಟಿಕೆಟ್ (BJP Ticket) ಕೊಡಿಸುವ ವಿಚಾರಗಳಲ್ಲಿ ಆರ್‍ಎಸ್‍ಎಸ್ ಹೀಗೆಲ್ಲ ಮಧ್ಯಪ್ರವೇಶ ಮಾಡಿಲ್ಲ ಎಂದಿದ್ರಂತೆ.
Advertisement
Advertisement
ಹಣ ಕೊಟ್ಟು ಟಿಕೆಟ್ ಪಡೆಯಲು ಮುಂದಾಗಿದ್ದ ಗೋವಿಂದ ಪೂಜಾರಿಗೆ ನೀವೇ ಸಮಸ್ಯೆ ಬಗೆಹರಿಸಿಕೊಳ್ಳಿ. ಇಲ್ಲ ಬಿಜೆಪಿ ಅವ್ರ ಹತ್ರ ಮಾತಾಡಿ. ನಾವು ಮಾತ್ರ ಸಂಧಾನ ಮಾಡಿಸಲ್ಲ ಅಂತಾ ಆರ್ ಎಸ್‍ಎಸ್ ನಾಯಕರು ಹೇಳಿದ್ದಾರಂತೆ. ಒಂದು ವೇಳೆ ಬಿಜೆಪಿ ನಾಯಕರು ಬಗೆಹರಿಸದಿದ್ದರೆ ಕಾನೂನು ಇದೆ ಹೋಗಿ ಎಂದು ಸಂದೇಶ ಕೊಟ್ಟಿದ್ದಾರಂತೆ. ಇದನ್ನೂ ಓದಿ: CCB ಅಧಿಕಾರಿಗಳ ಮುಂದೆ ಮೌನಾಚರಣೆ – ಚೈತ್ರಾಳ ಮುಂದಿರುವ ಆ 30 ಪ್ರಶ್ನೆಗಳೇನು?
Advertisement
Advertisement
ಇದೆಲ್ಲ ಕಹಾನಿ ನಡೆದು 4 ತಿಂಗಳ ಕಾಲ ಹಣ ವಾಪಸ್ ಪಡೆಯಲು ಗೋವಿಂದ ಪೂಜಾರಿ ನಾನಾ ಸರ್ಕಸ್ ನಡೆಸಿದ್ರಂತೆ. ಯಾವಾಗ ಬಿಜೆಪಿ ನಾಯಕರೂ ಸಂಧಾನಕ್ಕೆ ಡೋಂಟ್ ಕೇರ್ ಅಂದ್ರೋ ಆಗ ಗೋವಿಂದ ಪೂಜಾರಿ ಚೈತ್ರಾ& ಗ್ಯಾಂಗ್ ವಿರುದ್ಧ ದೂರು ಕೊಟ್ಟಿದ್ದಾರೆ.
Web Stories