– ಏನಿದು ಸ್ಕೀಮ್?, ಫಲಾನುಭವಿಗಳು ಯಾರು?
ಮಂಗಳೂರು: ಕೇಂದ್ರ ಸರ್ಕಾರದ ನಿವೃತ್ತ ನೌಕರರ ಬಹುದಿನ ಬೇಡಿಕೆಯಾದ ಸೆಂಟ್ರಲ್ ಗವರ್ನ್ ಮೆಂಟ್ ಹೆಲ್ತ್ ಸ್ಕೀಮ್ (CGHS) ವೆಲ್ ನೆಸ್ ಸೆಂಟರ್ ಅನ್ನು ಮಂಗಳೂರಿನಲ್ಲಿ ತೆರೆಯಲು ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಕೇಂದ್ರ ಸರ್ಕಾರ ಅನುಮೋದನೆ ನೀಡಿದೆ.
Advertisement
ಸಂಸದ ನಳಿನ್ ಕುಮಾರ್ (Nalin Kumar Kateel) ಪ್ರಯತ್ನದಿಂದ ಬಹುದಿನದ ಬೇಡಿಕೆ ಈಡೇರಿದ್ದು, ಕಳೆದ ಬಾರಿ ಕೇಂದ್ರ ಆರೋಗ್ಯ ಸಚಿವರಿಗೆ ಭೇಟಿಯಾಗಿ ಮಂಗಳೂರಿನಲ್ಲಿ CGHS ವೆಲ್ ನೆಸ್ ಸೆಂಟರ್ ನ್ನು ತೆರೆಯುವಂತೆ ಮನವಿ ಮಾಡಿದ್ದರು. ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾದ ಡಾ. ಮನ್ ಸುಖ್ ಮಾಂಡವೀಯ ಅವರು ನಳಿನ್ ಕುಮಾರ್ ರವರಿಗೆ ಪತ್ರ ಬರೆದು ಮಂಗಳೂರು (Mangaluru) ಸೇರಿದಂತೆ ದೇಶದ 20 ನಗರಗಳಲ್ಲಿ CGHS ವೆಲ್ ನೆಸ್ ಸೆಂಟರ್ ಗಳನ್ನು ತೆರೆಯುತ್ತಿರುವುದಾಗಿ ತಿಳಿಸಿದ್ದಾರೆ.
Advertisement
Advertisement
ದಕ್ಷಿಣ ಕನ್ನಡ ಹಾಗೂ ನೆರೆಯ ಜಿಲ್ಲೆಗಳ 50ಕ್ಕೂ ಅಧಿಕ ಕೇಂದ್ರ ಸರ್ಕಾರದ ಇಲಾಖೆಗಳ ಸುಮಾರು 5,500 ಉದ್ಯೋಗಿಗಳಿದ್ದು, 29,000 ಕ್ಕೂ ಅಧಿಕ ನಿವೃತ್ತ ಕೇಂದ್ರ ಸರ್ಕಾರದ ಉದ್ಯೋಗಿಗಳಿದ್ದಾರೆ. ಮಂಗಳೂರಿನಲ್ಲಿ ಈ ಕೇಂದ್ರ ಪ್ರಾರಂಭವಾಗುವುದರಿಂದ ಅವರು ನಿಯಮಾನುಸಾರ ವೈದ್ಯಕೀಯ ಚಿಕಿತ್ಸೆ ಪಡೆಯಲು ಅನುಕೂಲವಾಗುತ್ತದೆ. ತಮ್ಮ ಮನವಿಯನ್ನು ಪುರಸ್ಕರಿಸಿ ಮಂಗಳೂರಿಗೆ CGHS ವೆಲ್ ನೆಸ್ ಸೆಂಟರ್ ಅನ್ನು ಮಂಜೂರು ಮಾಡಿದ ಕೇಂದ್ರ ಅರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವರಾಧ ಡಾ. ಮನ್ ಸುಖ್ ಮಾಂಡವೀಯರವರಿಗೆ ಸಂಸದರು ಕೃತಜ್ಞತೆ ಸಲ್ಲಿಸಿದ್ದಾರೆ.
Advertisement
ಏನಿದು CGHS ಸ್ಕೀಮ್?, ಫಲಾನುಭವಿಗಳು ಯಾರು?: ಈ ಯೋಜನೆಯು ಕೇಂದ್ರ ಸರ್ಕಾರಿ ನೌಕರರು, ಪಿಂಚಣಿದಾರರು ಹಾಗೂ ಅವರ ಅವಲಂಬಿತರಿಗೆ ಇರುವ ಆರೋಗ್ಯ ವಿಮಾ ಸೇವೆಯಾಗಿದೆ. ಸ್ವಾತಂತ್ರ್ಯ ಹೋರಾಟಗಾರರು, ಮಾಜಿ ರಾಜ್ಯಪಾಲರು, ಮಾಜಿ ಲೆಫ್ಟಿನೆಂಟ್ ಗವರ್ನರ್‌ಗಳು, ಹೈಕೋರ್ಟ್ ನಿವೃತ್ತ ನ್ಯಾಯಾಧೀಶರು, ರೈಲ್ವೆ ಬೋರ್ಡ್ ಉದ್ಯೋಗಿಗಳು, ಮಾಜಿ ಮತ್ತು ಹಾಲಿ ಸಂಸದರು, ಪೋಸ್ಟಲ್ ಮತ್ತು ಟೆಲಿಗ್ರಾಫ್ ಇಲಾಖೆಯ ಉದ್ಯೋಗಿಗಳು ಕೂಡ ಈ ಯೋಜನೆಗೆ ಫಲಾನುಭವಿಗಳಾಗಿರುತ್ತಾರೆ.
CGHS ಮೊತ್ತ ಎಷ್ಟು?: ಒಪಿಡಿ ದರ: 350 ರೂ., ಐಪಿಡಿ ಕನ್ಸಲ್ಟೇಶನ್ ಶುಲ್ಕ: 350 ರೂ., ಐಸಿಯು ಸರ್ವಿಸಸ್: 5,400, ಆಸ್ಪತ್ರೆಯ ಜನರಲ್ ರೂಮ್ ಬಾಡಿಗೆ ದರ: 1,500 ರೂ., ಸೆಮಿ ಪ್ರೈವೇಟ್ ವಾರ್ಡ್: 3,500 ರೂ., ಖಾಸಗಿ ರೂಮ್ ದರ: 4,500 ರೂ. ಆಗಿರುತ್ತದೆ.