ನವದೆಹಲಿ: ಪಶ್ಚಿಮ ಏಷ್ಯಾ ಬಿಕ್ಕಟ್ಟು (Middle East Crisis) ಸುಧಾರಿಸುತ್ತಿರುವ ಹಿನ್ನೆಲೆ ಕೇಂದ್ರ ಸರ್ಕಾರ (Central Govt) ಸಿಹಿ ಸುದ್ದಿಯೊಂದನ್ನು ನೀಡಿದೆ. ವಾಣಿಜ್ಯ ಬಳಕೆಯ ಎಲ್‌ಪಿಜಿ (Commercial LPG) ಪೂರೈಕೆ ಮೇಲೆ ವಿಧಿಸಿದ್ದ ಎಲ್ಲಾ ನಿರ್ಬಂಧಗಳನ್ನು ಇದೀಗ ತೆರವುಗೊಳಿಸಿದೆ.
ಅಮೆರಿಕ (America) ಹಾಗೂ ಇರಾನ್ (Iran) ಶಾಂತಿ ಒಪ್ಪಂದದ ಬಳಿಕ ಮಧ್ಯಪ್ರಾಚ್ಯದಲ್ಲಿ ಸಕಾರಾತ್ಮಕ ಬೆಳವಣಿಗೆಗಳು ಕಂಡುಬಂದಿವೆ. ಇದರ ಬೆನ್ನಲ್ಲೇ ಕೇಂದ್ರ ಸರ್ಕಾರ, ಸ್ಥಳೀಯ ಎಲ್‌ಪಿಜಿ ಉತ್ಪಾದನೆಯಲ್ಲಿ ಸುಧಾರಣೆ ಮತ್ತು ಆಮದು ಮಾಡಿಕೊಂಡ ಎಲ್‌ಪಿಜಿ ಸರಕುಗಳ ಅಂದಾಜು ಲಭ್ಯತೆಯನ್ನು ಗಮನಿಸಿ ಈ ನಿರ್ಧಾರ ಕೈಗೊಂಡಿದೆ. ಇದನ್ನೂ ಓದಿ: ಕೆಆರ್‌ಎಸ್, ಕಬಿನಿಯಲ್ಲಿ ನೀರಿನ ಮಟ್ಟ ತೀವ್ರ ಕುಸಿತ – ಕಾವೇರಿ ಕೊಳ್ಳದಲ್ಲಿ ಜಲಕ್ಷಾಮದ ಭೀತಿ
ಇದರ ಜೊತೆಗೆ ಸಂಘರ್ಷದಿಂದಾಗಿ ಸ್ಥಗಿತಗೊಳಿಸಲಾಗಿದ್ದ ಬೃಹತ್ ಎಲ್‌ಪಿಜಿ ಪೂರೈಕೆಯನ್ನು ಇದೀಗ ಬಳಕೆಯ ಮಟ್ಟದ ಶೇ.50ರಷ್ಟು ಸಡಿಲಿಸಿದ್ದು, ಇದು ವಾಣಿಜ್ಯ ಮತ್ತು ಕೈಗಾರಿಕಾ ಗ್ರಾಹಕರಿಗೆ ಗಮನಾರ್ಹ ಪರಿಹಾರವನ್ನು ಒದಗಿಸುತ್ತದೆ.
Government restores the supply of Non-Domestic Packed LPG and relaxes the supply of bulk LPG to 50% of pre-crisis consumption, providing significant relief to commercial and industrial consumers.
Government has also decided to reduce the diversion of C3/C4 streams to the LPG…
— Ministry of Petroleum and Natural Gas #MoPNG (@PetroleumMin) June 25, 2026
ನಿರ್ಬಂಧ ತೆರವಿಗೆ ಕಾರಣವೇನು?
ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವಾಲಯದ (Ministry of Petroleum and Natural Gas) ಪ್ರಕಾರ, ಪಶ್ಚಿಮ ಏಷ್ಯಾ ಬಿಕ್ಕಟ್ಟಿನ ಸಮಯದಲ್ಲಿ ದೇಶದಲ್ಲಿ ಗೃಹಬಳಕೆಯ ಸಿಲಿಂಡರ್‌ಗಳ ಕೊರತೆಯಾಗದಂತೆ ತಡೆಯಲು `ಅಗತ್ಯ ವಸ್ತುಗಳ ಕಾಯ್ದೆ’ಯಡಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗಿತ್ತು. ಪೆಟ್ರೋಕೆಮಿಕಲ್ ವಲಯಕ್ಕೆ ಬಳಸುವ C3 ಮತ್ತು C4 ಕಚ್ಚಾ ವಸ್ತುಗಳು (ಪ್ಲಾಸ್ಟಿಕ್ ಹಾಗೂ ಗ್ಯಾಸ್ ತಯಾರಿಕೆಗೆ ಬಳಸುವ ಮೂಲ ಕಚ್ಚಾ ವಸ್ತುಗಳು) ಕೇವಲ ಎಲ್‌ಪಿಜಿ ಉತ್ಪಾದನೆಗೇ ಬಳಸುವಂತೆ ಆದೇಶಿಸಲಾಗಿತ್ತು. ಆದರೆ ಈಗ ದೇಶೀಯವಾಗಿ ಎಲ್‌ಪಿಜಿ ಉತ್ಪಾದನೆ ಸುಧಾರಿಸಿದೆ ಹಾಗೂ ವಿದೇಶದಿಂದ ಆಮದು ಮಾಡಿಕೊಳ್ಳುವ ಎಲ್‌ಪಿಜಿ ಸರಕುಗಳ ಲಭ್ಯತೆಯೂ ಉತ್ತಮವಾಗಿದೆ. ಈ ಹಿನ್ನೆಲೆ ಕೇಂದ್ರ ಸರ್ಕಾರ ನಿರ್ಬಂಧಗಳನ್ನು ಸಡಿಲಗೊಳಿಸಲು ನಿರ್ಧರಿಸಿದೆ.ಇದನ್ನೂ ಓದಿ:ಅಬಕಾರಿ ಇಲಾ ಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ – ಇ.ಡಿ ದಾಳಿಯಲ್ಲಿ 13.3 ಕೋಟಿ ಮೌಲ್ಯದ ನಗ, ನಾಣ್ಯ ಪತ್ತೆ
ಗೃಹಬಳಕೆ ಸಿಲಿಂಡರ್‌ಗೆ ಧಕ್ಕೆಯಿಲ್ಲ:
ಪೆಟ್ರೋಕೆಮಿಕಲ್ ಮತ್ತು ಇತರ ಪ್ರಮುಖ ವಲಯಗಳಿಗೆ C3 ಮತ್ತು C4 ಕಚ್ಚಾ ವಸ್ತುಗಳ ಹಂಚಿಕೆಯನ್ನು ಹೆಚ್ಚಿಸಿದೆ. ಹೀಗಾಗಿ ಸಾಮಾನ್ಯ ಜನರ ಗೃಹಬಳಕೆಯ ಎಲ್‌ಪಿಜಿ ಲಭ್ಯತೆಗೆ ಯಾವುದೇ ಧಕ್ಕೆಯಾಗದಂತೆ ಕೇಂದ್ರ ಸರ್ಕಾರ ಎಚ್ಚರಿಕೆ ವಹಿಸಿದೆ. ದೇಶದ ಒಟ್ಟು ಎಲ್‌ಪಿಜಿ ಉತ್ಪಾದನೆಯನ್ನು ದಿನಕ್ಕೆ ಕನಿಷ್ಠ 40 ಟಿಎಂಟಿಗಿಂತ ಕಡಿಮೆ ಇಲ್ಲದಂತೆ ಕಾಯ್ದುಕೊಳ್ಳಲು ತೈಲ ಕಂಪನಿಗಳಿಗೆ ಸೂಚಿಸಲಾಗಿದೆ.
ಪಿಎನ್‌ಜಿ ಸಂಪರ್ಕಕ್ಕೆ ಆದ್ಯತೆ:
ವಾಣಿಜ್ಯ ಬಳಕೆಯ ಎಲ್‌ಪಿಜಿ ನಿರ್ಬಂಧ ತೆರವುಗೊಳಿಸಿದರೂ, ಪರಿಸರಸ್ನೇಹಿ ಪೈಪ್ಡ್ ನ್ಯಾಚುರಲ್ ಗ್ಯಾಸ್ (PNG) ಸಂಪರ್ಕವನ್ನು ವಿಸ್ತರಿಸಲು ಕೇಂದ್ರ ಸರ್ಕಾರ ಬದ್ಧವಾಗಿದೆ. ಈಗಾಗಲೇ ಪಿಎನ್‌ಜಿಗೆ ಬದಲಾಗಿರುವ ಗ್ರಾಹಕರು ಅದನ್ನೇ ಮುಂದುವರಿಸಲಿದ್ದಾರೆ. ಉಳಿದ ವಾಣಿಜ್ಯ ಗ್ರಾಹಕರನ್ನು ಸಹ ಹಂತ ಹಂತವಾಗಿ ಪಿಎನ್‌ಜಿ ನೆಟ್‌ವರ್ಕ್‌ಗೆ ಒಳಪಡಿಸಲು ಯೋಜನೆ ರೂಪಿಸಲಾಗಿದೆ.
ಈ ಪರಿಷ್ಕೃತ ಪೂರೈಕೆ ವ್ಯವಸ್ಥೆಯನ್ನು ಸುಗಮವಾಗಿ ಜಾರಿಗೆ ತರಲು ಪೆಟ್ರೋಲಿಯಂ ಸಚಿವಾಲಯದ ಕಾರ್ಯದರ್ಶಿಗಳು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ.ಇದನ್ನೂ ಓದಿ: 70 ವರ್ಷಗಳ ಬಳಿಕ ಮರುಜೀವ ಪಡೆದ ಕೆಆರ್‌ಎಸ್‌ನ ವೇಣುಗೋಪಾಲಸ್ವಾಮಿ ದೇವಸ್ಥಾನ
