Public TVPublic TV
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Reading: ಹಗಲು, ರಾತ್ರಿಯೆನ್ನದೇ ದುಡಿಮೆ.. ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು!
Share
Notification Show More
Font ResizerAa
Font ResizerAa
Public TVPublic TV
  • Home
  • State
  • LIVE
  • Latest
  • Districts
  • National
  • World
  • Cinema
  • Stories
  • Crime
  • Court
  • Sports
  • Tech
  • Automobile
  • Food
  • Videos
Search
  • Home
  • State
  • LIVE
  • Latest
  • Districts
    • Bagalkot
    • Belagavi
    • Ballari
    • Bengaluru City
    • Bengaluru Rural
    • Bidar
    • Chamarajanagar
    • Chikkamagaluru
    • Chikkaballapur
    • Chitradurga
    • Dakshina Kannada
    • Davanagere
    • Dharwad
    • Gadag
    • Hassan
    • Haveri
    • Kalaburagi
    • Kodagu
    • Kolar
    • Koppal
    • Mandya
    • Mysuru
    • Raichur
    • Ramanagara
    • Shivamogga
    • Tumakuru
    • Udupi
    • Uttara Kannada
    • Vijayapura
    • Yadgir
  • National
  • World
  • Cinema
    • Sandalwood
    • Bollywood
    • South cinema
    • TV Shows
  • Stories
  • Crime
  • Court
  • Sports
    • Cricket
    • Other Sports
  • Tech
    • Smartphones
    • Telecom
  • Automobile
  • Food
    • Veg
    • Non Veg
  • Videos
    • Big Bulletin
    • Entertainment Videos
    • News Videos
Follow US
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News

Home | Latest | ಹಗಲು, ರಾತ್ರಿಯೆನ್ನದೇ ದುಡಿಮೆ.. ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು!

Latest

ಹಗಲು, ರಾತ್ರಿಯೆನ್ನದೇ ದುಡಿಮೆ.. ಕೆಲಸದ ಒತ್ತಡದಿಂದ 26ರ ಉದ್ಯೋಗಿ ಸಾವು!

Public TV
Last updated: September 19, 2024 4:18 pm
Public TV
Share
2 Min Read
Ernst and Young India Employee Death
SHARE

– ಮಗಳ ಸಾವಿನ ಬಗ್ಗೆ ತಾಯಿಯ ಮನಕಲಕುವ ಪತ್ರದಲ್ಲೇನಿತ್ತು?
– ಉದ್ಯೋಗಿ ಸಾವಿನ ತನಿಖೆ ಕೈಗೆತ್ತಿಕೊಂಡ ಕೇಂದ್ರ

ನವದೆಹಲಿ: ಕಂಪನಿಯೊಂದರಲ್ಲಿ ಚಾರ್ಟರ್ಡ್‌ ಅಕೌಂಟೆಂಟ್‌ ಆಗಿ ಕೆಲಸ ಮಾಡುತ್ತಿದ್ದ ಯುವತಿ ಸಾವು ಭಾರಿ ಆಕ್ರೋಶ ಕಾರಣವಾಗಿದೆ. ಕೆಲಸದ ಒತ್ತಡದಿಂದ ಮಗಳು ದುರಂತ ಸಾವಿಗೀಡಾಗಿದ್ದಾಳೆಂದು ತಾಯಿ ಗಂಭೀರ ಆರೋಪ ಮಾಡಿದ್ದಾರೆ.

26 ವರ್ಷದ ಅನ್ನಾ ಸೆಬಾಸ್ಟಿಯನ್‌ ಪೆರಾಯಿಲ್‌, ಕೆಲಸಕ್ಕೆ ಸೇರಿದ ನಾಲ್ಕು ತಿಂಗಳಲ್ಲೇ ಸಾವನ್ನಪ್ಪಿದ್ದಾರೆ. ನನ್ನ ಮಗಳಿಗೆ ಕೆಲಸದ ಒತ್ತಡ ಹೆಚ್ಚಿತ್ತು. ಹೀಗಾಗಿ ಅವಳು ಮೃತಪಟ್ಟಿದ್ದಾಳೆಂದು ಆಕೆಯ ತಾಯಿ ಆರೋಪಿಸಿದ್ದಾರೆ. ಮಗಳ ಸಾವಿನ ಬಗ್ಗೆ ಕಂಪನಿಗೆ ಮೃತ ಯುವತಿ ತಾಯಿ ಬರೆದಿರುವ ಪತ್ರ ಮನಕಲಕುವಂತಿದೆ.

ಅನ್ನಾ ಸೆಬಾಸ್ಟಿಯನ್‌ ಸಾವಿನ ವಿಚಾರವನ್ನು ಕೇಂದ್ರ ಕಾರ್ಮಿಕ ಸಚಿವಾಲಯ ಗಂಭೀರವಾಗಿ ಪರಿಗಣಿಸಿದೆ. ಸಾವಿನ ಕುರಿತ ದೂರನ್ನು ಕೈಗೆತ್ತಿಕೊಂಡಿದ್ದು, ಸೂಕ್ತ ತನಿಖೆ ನಡೆಸುವುದಾಗಿ ತಿಳಿಸಿದೆ.

ಅನ್ನಾ ಸೆಬಾಸ್ಟಿಯನ್ ಪೆರಾಯಿಲ್ ಅವರ ದುರಂತ ಸಾವಿನಿಂದ ತೀವ್ರ ದುಃಖವಾಗಿದೆ. ಅಸುರಕ್ಷಿತ ಮತ್ತು ಶೋಷಣೆಯ ಕೆಲಸದ ವಾತಾವರಣದ ಆರೋಪಗಳ ಬಗ್ಗೆ ಸಂಪೂರ್ಣ ತನಿಖೆ ನಡೆಯುತ್ತಿದೆ. ನ್ಯಾಯವನ್ನು ಖಚಿತಪಡಿಸಿಕೊಳ್ಳಲು ನಾವು ಬದ್ಧರಾಗಿದ್ದೇವೆ. ಕಾರ್ಮಿಕ ಸಚಿವಾಲಯವು ದೂರನ್ನು ಅಧಿಕೃತವಾಗಿ ತೆಗೆದುಕೊಂಡಿದೆ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಎಕ್ಸ್‌ನಲ್ಲಿ ಪೋಸ್ಟ್‌ ಹಾಕಿದ್ದಾರೆ.

ತಾಯಿ ಬರೆದ ಪತ್ರದಲ್ಲೇನಿದೆ?
ನನ್ನ ಮಗಳು ಕಂಪನಿಗೆ ಕೆಲಸ ಸೇರಿದ ನಾಲ್ಕು ತಿಂಗಳಲ್ಲೇ ಮೃತಪಟ್ಟಿದ್ದಾಳೆ. ಅವಳಿಗೆ ಕೆಲಸದ ಒತ್ತಡ ಜಾಸ್ತಿ ಇತ್ತು. ನನ್ನ ಹೃದಯ ಭಾರವಾಗಿದೆ. ನಾವು ಅನುಭವಿಸುತ್ತಿರುವ ನೋವನ್ನು ಬೇರೆ ಯಾವುದೇ ಕುಟುಂಬ ಅನುಭವಿಸಬಾರದು.

ಜುಲೈ 6 ರಂದು, ನನ್ನ ಪತಿ ಮತ್ತು ನಾನು, ಸಿಎ ಘಟಿಕೋತ್ಸವದಲ್ಲಿ ಪಾಲ್ಗೊಳ್ಳಲು ಪುಣೆಗೆ ಬಂದಿದ್ದೆವು. ಆಕೆ ಪಿಜಿಗೆ ತಲುಪಿದಾಗ ಎದೆಯ ಸೆಳೆತದ ಬಗ್ಗೆ ದೂರು ನೀಡಿದ್ದರಿಂದ, ನಾವು ಅವಳನ್ನು ಆಸ್ಪತ್ರೆಗೆ ಕರೆದೊಯ್ದೆವು. ಪುಣೆಯಲ್ಲಿ ಅವಳ ಇಸಿಜಿ ನಾರ್ಮಲ್‌ ಇತ್ತು. ಮಗಳ ದಿನಚರಿ ಬಗ್ಗೆ ಹೃದ್ರೋಗ ತಜ್ಞರು, ‘ನಿಮ್ಮ ಮಗಳು ಸಾಕಷ್ಟು ಸಮಯ ನಿದ್ರೆ ಮಾಡುತ್ತಿಲ್ಲ. ಸಮಯಕ್ಕೆ ಸರಿಯಾಗಿ ಊಟ-ತಿಂಡಿ ಮಾಡುತ್ತಿಲ್ಲ’ ಎಂಬ ಆತಂಕಕಾರಿ ವಿಚಾರವನ್ನು ನಮ್ಮ ಮುಂದಿಟ್ಟರು.

ವೈದ್ಯರನ್ನು ನೋಡಿದ ನಂತರವೂ ಕೆಲಸಕ್ಕೆ ಹೋಗಬೇಕೆಂದು ಮಗಳು ಒತ್ತಾಯಿಸಿದ್ದಳು. ಆ ರಾತ್ರಿ ತನಗೆ ರಜೆ ಸಿಗುವುದಿಲ್ಲ ಎಂದಿದ್ದಳು. ಜುಲೈ 7 ರಂದು ಭಾನುವಾರ ತಡವಾಗಿ ತನ್ನ ಪಿಜಿಗೆ ಮರಳಿದ್ದಳು. ಅವಳು ಘಟಿಕೋತ್ಸವದ ದಿನ ಬೆಳಗ್ಗೆ ನಮ್ಮೊಂದಿಗೆ ಇದ್ದಳು. ಆ ದಿನವೂ ಮಧ್ಯಾಹ್ನದ ವರೆಗೆ ಮನೆಯಿಂದ ಕೆಲಸ ಮಾಡುತ್ತಿದ್ದಳು. ಮಗಳು ಸಂಪೂರ್ಣ ದಣಿದ ಸ್ಥಿತಿಯಲ್ಲಿ ಮನೆಗೆ ಹಿಂದಿರುಗುತ್ತಿದ್ದಳು. ಕೆಲವೊಮ್ಮೆ ತನ್ನ ಬಟ್ಟೆಗಳನ್ನು ಬದಲಾಯಿಸದೆ ಹಾಸಿಗೆಯ ಮೇಲೆ ಮಲಗುತ್ತಿದ್ದಳು. ತನ್ನ ಕೆಲಸದ ಗಡುವನ್ನು ಪೂರೈಸಲು ತುಂಬಾ ಪ್ರಯತ್ನಿಸುತ್ತಿದ್ದಳು. ಅವಳು ಛಲಗಾರ್ತಿ. ಯಾವುದೇ ಕೆಲಸವನ್ನು ಸುಲಭಕ್ಕೆ ಬಿಟ್ಟುಕೊಡುತ್ತಿರಲಿಲ್ಲ. ಹೊಸ ಹೊಸ ವಿಚಾರಗಳನ್ನು ಕಲಿಯಲು ತುಂಬಾ ಆಸಕ್ತಿ ವಹಿಸುತ್ತಿದ್ದಳು. ಆದರೆ ಅತಿಯಾದ ಕೆಲಸದ ಒತ್ತಡ ಅವಳಿಗೆ ಈ ಪರಿಸ್ಥಿತಿ ತಂದಿತು.

ನನ್ನ ಮಗಳ ಅಂತ್ಯಕ್ರಿಯೆ ವೇಳೆ ಕಂಪನಿಯಿಂದ ಯಾರೊಬ್ಬರು ಕೂಡ ಬಂದಿರಲಿಲ್ಲ. ಸಂಸ್ಥೆಗಾಗಿ ದುಡಿದ ಉದ್ಯೋಗಿಯೊಬ್ಬರ ಅಂತ್ಯಕ್ರಿಯೆಗೆ ಬಾರದೇ ಇದ್ದದ್ದು ಮನಸ್ಸಿಗೆ ನೋವು ತಂದಿದೆ ಎಂದು ಅನ್ನಾ ತಾಯಿ ಪತ್ರದಲ್ಲಿ ನೋವು ತೋಡಿಕೊಂಡಿದ್ದಾರೆ.

TAGGED:Anna Sebastian PerayilOverworkUnion Labour Ministry
Share This Article
Facebook Whatsapp Whatsapp Telegram

Cinema news

Rajath Kishan
ಬೆದರಿಕೆ, ನಿಂದನೆ ಆರೋಪ – ಬಿಗ್‌ಬಾಸ್ ಮಾಜಿ ಸ್ಪರ್ಧಿ ರಜತ್ ವಿರುದ್ಧ FIR
Bengaluru City Cinema Districts Karnataka Latest Sandalwood Top Stories
colors kannada New serial rani
ರಾಣಿ – ಅಮ್ಮ ಮಗಳ ಭಾವುಕ ಪಯಣ..!
Cinema Latest Sandalwood Top Stories
Vijay trisha
ಡಿವೋರ್ಸ್ ಕೇಸ್ ಮಧ್ಯೆ ಒಂದೇ ಬಣ್ಣದ ಉಡುಗೆಯಲ್ಲಿ ಒಟ್ಟಿಗೆ ಕಾಣಿಸಿಕೊಂಡ ವಿಜಯ್-ತ್ರಿಶಾ
Cinema Latest National Top Stories
Samantha Ruth Prabhu
ಶಿವಮೊಗ್ಗ | ಹೊಸನಗರದಲ್ಲಿ ಹೋಳಿಯಾಡಿದ ಸಮಂತಾ
Cinema Latest Shivamogga South cinema Top Stories

You Might Also Like

Indias energy supplies
Latest

ನಮಗೆ ಯಾರ ಅಪ್ಪಣೆಯೂ ಬೇಕಿಲ್ಲ: ರಷ್ಯಾ ತೈಲ ಖರೀದಿಗೆ ಅಮೆರಿಕ ವಿನಾಯಿತಿ ಬಗ್ಗೆ ಭಾರತ ಖಡಕ್‌ ಮಾತು

Public TV
By Public TV
2 minutes ago
Gujarat Girls Suicide
Crime

ದೇವಾಲಯದ ಸ್ನಾನಗೃಹದಲ್ಲಿ ಇಬ್ಬರು ಹುಡುಗಿಯರ ಮೃತದೇಹ ಪತ್ತೆ

Public TV
By Public TV
29 minutes ago
Train
Latest

ಟಿ20 ವಿಶ್ವಕಪ್‌ಗೆ ದೆಹಲಿಯಿಂದ ಅಹಮದಾಬಾದ್‌ಗೆ ವಿಶೇಷ ರೈಲು

Public TV
By Public TV
54 minutes ago
Iranian President Masoud Pezeshkian
Latest

ನೆರೆ ರಾಷ್ಟ್ರಗಳ ಮೇಲಿನ ದಾಳಿಗೆ ಕ್ಷಮೆಯಾಚಿಸುತ್ತೇನೆ: ಇರಾನ್‌ ಅಧ್ಯಕ್ಷ ಮಸೌದ್‌

Public TV
By Public TV
1 hour ago
UP DCM Keshav Prasad Maurya
Latest

ಯುಪಿ ಡಿಸಿಎಂ ಕೇಶವಪ್ರಸಾದ್ ಹೆಲಿಕಾಪ್ಟರ್‌ನಲ್ಲಿ ತಾಂತ್ರಿಕ ಸಮಸ್ಯೆ – ಲಕ್ನೋದಲ್ಲಿ ತುರ್ತು ಭೂಸ್ಪರ್ಶ

Public TV
By Public TV
1 hour ago
DK Shivakumar 11
Bengaluru City

ಸಿಎಂ ಬಜೆಟ್‌ ಮಂಡನೆ ಬೆನ್ನಲ್ಲೇ ದೆಹಲಿಗೆ ತೆರಳಲಿದ್ದಾರೆ ಡಿಕೆಶಿ

Public TV
By Public TV
1 hour ago
Public TVPublic TV
Follow US
© Public TV. Design Company - Knowtable. All Rights Reserved.
  • Privacy Policy
  • CSR-Policy
  • Terms of Service
  • Complaints Redressal
  • Terms and Conditions
  • Contact
  • Election News
Welcome Back!

Sign in to your account

Username or Email Address
Password

Lost your password?