ಬೆಂಗಳೂರು: ಕರ್ನಾಟಕಕ್ಕೆ ಭಾರತ್ ಮಾಲಾ (Bharat Mala) ಯೋಜನೆ ಮೂಲಕ 55 ಸಾವಿರ ಕೋಟಿ ಅನುದಾನ ಕೊಡುವ ಉದ್ದೇಶವಿದೆ ಎಂದು ಕೇಂದ್ರ ಸಚಿವರಾದ ಸ್ಮೃತಿ ಇರಾನಿ (Smriti Irani) ಹೇಳಿದ್ದಾರೆ.
ರಾಜ್ಯ ಬಿಜೆಪಿ (BJP) ಘಟಕದಿಂದ ನಡೆದ ಜನಸ್ಪಂದನಾ (Janaspandana) ಕಾರ್ಯಕ್ರಮವನ್ನುದ್ದೇಶಿಸಿ ಮಾತನಾಡಿದ ಅವರು, ಶಿವಕುಮಾರ ಸ್ವಾಮೀಜಿ, ಭೋಗನಂದೀಶ್ವರ, ಮಾಸ್ತಿ ವೆಂಕಟೇಶ ಅಯ್ಯಂಗಾರ್, ವಿಶ್ವೇಶ್ವರಯ್ಯ, ಪ್ರವೀಣ್ ನೆಟ್ಟಾರು ಮುಂತಾದವರನ್ನು ಸ್ಮರಿಸಿದರು. ಈ ಸಮಾವೇಶ ಈ ಪುಣ್ಯ ಭೂಮಿಯಲ್ಲಿ ನಡೆಯುತ್ತಿದ್ದು, ಮತ್ತೆ ಬಿಜೆಪಿ ಅಧಿಕಾರಕ್ಕೆ ಬಂದೇ ಬರುತ್ತದೆ. ಏಕೆಂದರೆ ಇದು ಸಂಗ್ರಾಮದ ವೇದಿಕೆ ಎಂದು ನುಡಿದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್ಸಿನವರಿಗೆ ತಾಕತ್, ಧಮ್ ಇದ್ದರೇ ನಮ್ಮನ್ನು ತಡೆಯಲಿ: ಬೊಮ್ಮಾಯಿ ಸವಾಲು
Advertisement
Advertisement
ಕಾಂಗ್ರೆಸ್ (Congress) ವಿರುದ್ಧ ವಾಗ್ದಾಳಿ ನಡೆಸಿದ ಸಚಿವೆ, ಕಾಂಗ್ರೆಸ್ ಪಕ್ಷಪಾತದ ಸರ್ಕಾರ ಆಗಿತ್ತು. ಹಾಗಾಗಿ ಕಾಂಗ್ರೆಸ್ ಇದ್ದಾಗ ಜನರಿಗೆ ತಾರತಮ್ಯ ಮಾಡಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ (Karnataka) ಹಣಕಾಸು ಆಯೋಗದ ಮೂಲಕ ಕೊಟ್ಟಿದ್ದು ಕೇವಲ 2 ಸಾವಿರ ಕೋಟಿ. ಆದರೆ ಬಿಜೆಪಿ ಡಬಲ್ ಇಂಜಿನ್ ಸರ್ಕಾರ. ನಮ್ಮ ಕೇಂದ್ರ ಸರ್ಕಾರ (Central Government) ಈಗ ರಾಜ್ಯಕ್ಕೆ ಹಣಕಾಸು ಆಯೋಗದಿಂದ 5 ಸಾವಿರ ಕೋಟಿ ಅನುದಾನ ಕೊಟ್ಟಿದೆ. ಕರ್ನಾಟಕದಲ್ಲಿ ರಸ್ತೆ ಅಭಿವೃದ್ಧಿಗೆ 9,700 ಕೋಟಿ ರೂ. ಅನುದಾನ ಕೊಟ್ಟಿದೆ. ಪ್ರಧಾನಿ ಮೋದಿ (NarendraModi) ಸಬರ್ಬನ್ ರೈಲು (Railway) ಯೋಜನೆಗೆ 15 ಸಾವಿರ ಕೋಟಿ ಅನುದಾನ ಕೊಟ್ಟಿದ್ದಾರೆ. ಕಳೆದ ಏಳು ವರ್ಷಗಳಲ್ಲಿ ಹೆದ್ದಾರಿಗಳ ಅಭಿವೃದ್ಧಿಗಾಗಿಯೇ 37 ಸಾವಿರ ಕೋಟಿ ರೂ. ಕೊಡಲಾಗಿದೆ. ಮುಂದೆಯೂ ಭಾರತ್ ಮಾಲಾ ಯೋಜನೆ ಮೂಲಕ 55 ಸಾವಿರ ಕೋಟಿ ಕೊಡುವ ಉದ್ದೇಶ ಇದೆ ಎಂದು ಹೇಳಿದ್ದಾರೆ.
Advertisement
Advertisement
ನಮ್ಮ ಸರ್ಕಾರ ಬಂದ ನಂತರ 1,600 ಕಿ.ಮೀ ರೈಲ್ವೆ ಮಾರ್ಗ ನಿರ್ಮಾಣ ಮಾಡಲಾಗಿದೆ. 30 ವರ್ಷಗಳ ಬಳಿಕ ಶಿಕ್ಷಣ ನೀತಿ ಬದಲಾಗಿದೆ. ಎನ್‌ಇಪಿ ಜಾರಿಯಲ್ಲಿ ಕರ್ನಾಟಕವೇ ಮೊದಲ ರಾಜ್ಯವಾಗಿದ್ದು, ಇದಕ್ಕಾಗಿ ಬೊಮ್ಮಾಯಿ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ಶ್ಲಾಘಿಸಿದ್ದಾರೆ. ಇದನ್ನೂ ಓದಿ: ಬಾಲಿವುಡ್ ನಲ್ಲಿ ಟ್ಯಾಲೆಂಟ್ ಇರುವಂಥ ನಟರೇ ಇಲ್ಲವೆಂದು ಬಿಟೌನ್ ನಲ್ಲಿ ಬೆಂಕಿ ಹಚ್ಚಿದ ಕರಣ್ ಜೋಹಾರ್
ರೇಷ್ಮೆ ಉತ್ಪಾದನೆಯಲ್ಲಿ ಹೆಚ್ಚಳ: ರೇಷ್ಮೆ ವಲಯಕ್ಕೆ ಕೇಂದ್ರ ಕೊಟ್ಟ ಪ್ರೋತ್ಸಾಹದಿಂದ ರೇಷ್ಮೆ ಉತ್ಪಾದನೆ ಹೆಚ್ಚಳವಾಗಿದೆ. ಕೇಂದ್ರದಲ್ಲಿ ಕಾಂಗ್ರೆಸ್ ಇದ್ದಾಗ ಕರ್ನಾಟಕಕ್ಕೆ ತಾರತಮ್ಯ ಮಾಡಲಾಗಿತ್ತು ಎಂದಿದ್ದಾರೆ.
ಭಾರತ್ ಜೋಡೋ ಭಾರತ ಮುರಿಯುವ ಯಾತ್ರೆ: ರಾಹುಲ್ ಗಾಂಧಿ ಭಾರತ್ ಜೋಡಿಸ್ತಿಲ್ಲ, ಭಾರತವನ್ನು ಮುರಿಯುವ ಯಾತ್ರೆ ಮಾಡ್ತಿದ್ದಾರೆ. ಯಾತ್ರೆಯಲ್ಲಿ ಸರ್ದಾರ್ ಪಟೇಲ್‌ರ ಭಾವಚಿತ್ರವನ್ನೂ ಹಾಕಿಲ್ಲ. ಕನ್ಯಾಕುಮಾರಿಯಿಂದ ಭಾರತ್ ಜೋಡೋ ಮಾಡಿದ್ರು, ವಿವೇಕಾನಂದರಿಗೆ ಕನಿಷ್ಠ ಸ್ಮರಿಸುವ ಕೆಲಸವನ್ನೂ ಮಾಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಭಾರತದ ವಿರುದ್ಧ ಘೋಷಣೆ ಕೂಗಿದವರನ್ನ ಭಾರತ್ ಜೋಡೋ (Bharaj Jodo) ಯಾತ್ರೆಯಲ್ಲಿ ಸೇರಿಸಿಕೊಂಡಿದ್ದಾರೆ. ಇದು ರಾಷ್ಟçದ್ರೋಹಕ್ಕೆ ಸಮನಾದ ಕೆಲಸ. ಭಾರತ ವಿಭಜಿಸುವ ಹೇಳಿಕೆ ಕೊಟ್ಟವರಿಗೆ ಬೆಂಬಲ ಕೊಡೋದು ರಾಷ್ಟ್ರದ್ರೋಹ. ಇದನ್ನು ಕರ್ನಾಟಕದ ಕಾಂಗ್ರೆಸ್ ಕಾರ್ಯಕರ್ತರು ಅವರ ನಾಯಕರಿಗೆ ಪ್ರಶ್ನಿಸಬೇಕಿದೆ ಎಂದು ಕುಟುಕಿದ್ದಾರೆ.
ಆತಂಕವಾದಿ ಯಾಕೂಬ್ ಮೈಮುನ್‌ನ ಸಮಾಧಿಯನ್ನು ಕಾಂಗ್ರೆಸ್ ಸರ್ಕಾರ ಇರೋ ರಾಜ್ಯದಲ್ಲಿ ಸೌಂದರ್ಯೀಕರಣ ಮಾಡಲಾಗಿದೆ. ಇದನ್ನು ಪ್ರಶ್ನಿಸಲು ರಾಹುಲ್ ಗಾಂಧಿಗೆ (Rahul Gandhi) ಧೈರ್ಯವಿಲ್ಲ. ಭಯೋತ್ಪಾದನೆ ವಿರೋಧಿಸೋರಾಗಿದ್ದರೆ ರಾಹುಲ್ ಗಾಂಧಿ ಇದನ್ನ ಯಾಕೆ ವಿರೋಧಿಸಿಲ್ಲ ಎಂದು ಪ್ರಶ್ನಿಸಿದ್ದಾರೆ.
ಮಹಿಳೆಯನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ: ಗಾಂಧಿ ಕುಟುಂಬದ ಚಮಚಾಗಳು ಮಹಿಳಾ ರಾಷ್ಟ್ರಪತಿ ವಿರುದ್ಧ ಟೀಕೆ, ನಿಂದನೆ ಮಾಡಿದ್ದರು. ಆದರೆ ಮಹಿಳೆಯೊಬ್ಬರನ್ನು ರಾಷ್ಟ್ರಪತಿ ಮಾಡಿದ್ದು ಬಿಜೆಪಿ ಎಂದು ಬೀಗಿದ್ದಾರೆ.
ಚೂರಿ ಹಾಕಿದವರು ರಣ ಹೇಡಿಗಳು: ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಬೆನ್ನಿಗೆ ಚೂರಿಗೆ ಹಾಕಿದವರು ರಣ ಹೇಡಿಗಳು. ಪ್ರವೀಣ್ ಅವರನ್ನ ಸಾಯಿಸಿದವರ ಉದ್ದೇಶ ಆತಂಕ ಸೃಷ್ಟಿಸೋದೇ ಆಗಿದೆ ಎಂದು ಕಿಡಿಕಾರಿದ್ದಾರೆ.