ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಅನ್ನೋ ಭಾವನೆ- ಅಭಿಯಾನದ ವಿರುದ್ಧ ಶೋಭಾ ರೆಬೆಲ್

Public TV
2 Min Read
SHOBHA KARANDLAJE

ಚಿಕ್ಕಮಗಳೂರು: ತನ್ನ ವಿರುದ್ಧ ಪತ್ರ ಅಭಿಯಾನ, ಗೋ ಬ್ಯಾಕ್ ಶೋಭಕ್ಕ ವಿರುದ್ಧ ಕೇಂದ್ರ ಸಚಿವೆ, ಉಡುಪಿ-ಚಿಕ್ಕಮಗಳೂರು ಸಂಸದೆ ಶೋಭಾ ಕರಂದ್ಲಾಜೆ (Shobha Karandlaje) ಕಿಡಿಕಾರಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಡಸರಿಗೆ ಅಧಿಕಾರ ನಮ್ಮಲ್ಲೇ ಇರಬೇಕು ಎಂಬ ಭಾವನೆ ಇದೆ. ಈ ದರ್ಪದಿಂದಲೇ ಕೆಲವರು ಮಾಡುತ್ತಿದ್ದಾರೆ, ಮಾಡಿಸುತ್ತಿದ್ದಾರೆ. ವ್ಯವಸ್ಥಿತವಾಗಿ ದುಡ್ಡಿನ ಅಹಂಕಾರದಿಂದ ಈ ರೀತಿ ಮಾಡ್ತಿದ್ದಾರೆ. ಷಡ್ಯಂತ್ರಕ್ಕೆ ಉತ್ತರ ನಾನು ಕೊಡಲ್ಲ, ನಮ್ಮ ನಾಯಕರು, ದೊಡ್ಡವರು ಕೊಡ್ತಾರೆ. ಯಾರು ಬರೆದರೂ, ಬರೆಸಿದವರು ಯಾರು, ಯಾವ ಹ್ಯಾಂಡ್ ರೈಟಿಂಗ್ ಬರೆದರು ಎಲ್ಲಾ ಗೊತ್ತಿದೆ. ನನ್ನ ಹಿರಿಯರ ಮೇಲೆ ನಂಬಿಕೆ ಇದೆ, ಅವರು ಉತ್ತರ ನೀಡುತ್ತಾರೆ. ಕೇಂದ್ರ ಕೂಡ ಎಲ್ಲಾ ವರದಿ ತರೆಸಿಕೊಂಡಿದೆ ಎಂದರು.

MB PATIL

ಇದೇ ವೇಳೆ ಶೋಭಾ ಮೊದ್ಲು ಟಿಕೆಟ್ (Ticket) ಉಳಿಸಿಕೊಳ್ಳಲಿ ಎಂದ ಎಂ.ಬಿ.ಪಾಟೀಲ್ ಗೆ (MB Patil) ತಿರುಗೇಟು ನೀಡಿದ ಅವರು, ಸಿಎಂ-ಡಿಸಿಎಂ ಮಧ್ಯೆ ಏನು ನಡೀತಿದೆ ಅನ್ನೋದು ಚುನಾವಣೆ ಬಳಿಕ ಹೊರಬರಲಿದೆ. ಕಾಂಗ್ರೆಸ್ ನಲ್ಲಿ (Congress) ಏನು ನಡೆಯುತ್ತಿದೆ ಅನ್ನೋದು ಅವರಿಗೆ ಗೊತ್ತಿದೆ. ಕಾಂಗ್ರೆಸ್ಸಿಗೆ ಅವರ ಎಂ.ಎಲ್.ಎ. ಉಳಿಸಿಕೊಳ್ಳಲು ಆಗಲ್ಲ ಅಂತ ಬಿಜೆಪಿ ಶಾಸಕರಿಗೆ ಕೈ ಹಾಕಿದೆ. ಚುನಾವಣೆ ಬಳಿಕ ಎಲ್ಲವೂ ಹೊರಬರಲಿದೆ ಎಂದು ವಾಗ್ದಾಳಿ ನಡೆಸಿದರು.

ಗೋ ಬ್ಯಾಕ್ ಅಭಿಯಾನ: ಶೋಭಾ ಕರಂದ್ಲಾಜೆ ವಿರುದ್ಧ ಅಸಮಾಧಾನ ಮುಂದುವರಿದಿದ್ದು, ಶೋಭಾ ಸಾಕು ಡಿ.ಎನ್.ಜೀವರಾಜ್ ಅಭ್ಯರ್ಥಿ ಆಗಬೇಕು ಎಂದು ಸಾಮಾಜಿಕ ಜಾಲತಾಣದಲ್ಲಿ ಸಂಸದೆ ವಿರುದ್ಧ ಗೋ ಬ್ಯಾಕ್ ಅಭಿಯಾನ (Go Back Campaign) ಮುಂದುವರಿದಿದೆ. ಈ ಮೂಲಕ ಶೋಭಾ ಪರ ಬಿ.ಎಸ್. ಯಡಿಯೂರಪ್ಪ ಬ್ಯಾಟಿಂಗ್ ಮಾಡಿದ್ರೂ ಅಭಿಯಾನ ಮಾತ್ರ ನಿಂತಿಲ್ಲ. ಇದನ್ನೂ ಓದಿ: ಕಾವೇರಿ ನಿವಾಸದಲ್ಲಿ ಸಿಎಂ ಭೇಟಿಯಾದ ಜನಾರ್ದನ ರೆಡ್ಡಿ – ಕುತೂಹಲ ಮೂಡಿಸಿದ ಗಣಿಧಣಿ ನಡೆ

BSYediyurappa

ಬಿಎಸ್‍ವೈ ಹೇಳಿದ್ದೇನು..?: ಶೋಭಾ ಮತ್ತೆ ಹೆಚ್ಚಿನ ಮತಗಳಿಂದ ಗೆಲ್ತಾರೆ. ಶೋಭಾ ವಿರುದ್ಧ ಷಡ್ಯಂತ್ರ ಮಾಡಲಾಗುತ್ತಿದೆ ಎಂದು ಬಿ.ಎಸ್.ವೈ ಗುಡುಗಿದ್ದರು. ಶೋಭಾ ಪರ ಯಡಿಯೂರಪ್ಪ ಇದ್ದರೂ ನಾವು ಗೋ ಬ್ಯಾಕ್ ಅಭಿಯಾನ ಮಾಡುತ್ತೇವೆ ಎಂದು ಪೋಸ್ಟ್ ಮಾಡಲಾಗುತ್ತಿದೆ. ಚಿಕ್ಕಮಗಳೂರು ಜಿಲ್ಲೆಯ 5 ಕ್ಷೇತ್ರ ಸೋತರೂ ಶೋಭಾ ಕಾರ್ಯಕರ್ತರಿಗೆ ಆತ್ಮಸ್ಥೈರ್ಯ ತುಂಬಿಲ್ಲ ಎಂದು ಗರಂ ಆಗಿದ್ದು, ಮತ್ತೆ ಚಿಕ್ಕಮಗಳೂರು, ಶೃಂಗೇರಿ ಕ್ಷೇತ್ರದಲ್ಲಿ ಗೋ ಬ್ಯಾಕ್ ಅಭಿಯಾನ ಆರಂಭವಾಗಿದೆ.

Share This Article