ಬೆಂಗಳೂರು: ಈ ವ್ಯಕ್ತಿ ವೃತ್ತಿಯಲ್ಲಿ ಸಾಫ್ಟ್ ವೇರ್ ಉದ್ಯೋಗಿ. ಆದರೂ ರಾತ್ರಿಯಾದರೆ ಕಳ್ಳತನ ಆರಂಭ ಮಾಡಿಕೊಳ್ಳುತ್ತಾನೆ. ಮಂಗಳವಾರ ಯಶವಂತಪುರದ ಮತ್ತಿಕೆರೆ ಬಳಿಯ ಮೊಬೈಲ್ ಕೆಫೆ ದೋಚಲು ಬಂದಿದ್ದ ಆಸಾಮಿ ಸಿಸಿಟಿವಿಯನ್ನೇ ಕದ್ದು ಕೊಂಡು ಹೋಗಿದ್ದಾನೆ.
ಈ ಮಹಾನ್ ಕಳ್ಳ ತಾನು ಕಳ್ಳತನ ಮಾಡುವಾಗ ತಾನು ಕೆಲಸ ಮಾಡುವ ಕಂಪನಿಯ ಐಡಿ ಕಾರ್ಡ್ ಹಾಕಿಕೊಂಡು ಮಾಡಿದ್ದಾನೆ. ಈ ಎಲ್ಲ ದೃಶ್ಯಗಳು ಸಿಸಿಟಿವಿಯಲ್ಲಿ ಚಹರೆ ಆತನ ಚಹರೆ ಪತ್ತೆಯಾಗಿದೆ. ಅಡ್ವಾಂಟೇಜ್ ಹೆಲ್ತ್ ಕೇರ್ ಕಂಪನಿ ಐಡಿ ಕಾರ್ಡ್ ಹಾಕಿಕೊಂಡಿದ್ದ ರಾಜಶೇಖರ್ ಗೌಡ ಎಂಬಾತನೇ ಈ ಖದೀಮ ಅಂತ ಗೊತ್ತಾಗಿದೆ.
Advertisement
ರಾಜಶೇಖರ್ ನ ಐಡಿ ಕಾರ್ಡ್ ಟ್ರೇಸ್ ಮಾಡಿದಾಗ ರಾಜಶೇಖರ್ ಸಿಕ್ಕಿ ಬಿದ್ದಿದ್ದಾನೆ. ಯಶವಂತಪುರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಕಳ್ಳತನ ನಡೆದಿದೆ.
Advertisement
https://youtu.be/vQe8buRPMLg