ಬೆಂಗಳೂರು: ಶುಶೃತಿ ಸೌಹಾರ್ದ ಸಹಕಾರ ಬ್ಯಾಂಕ್‌ನಿಂದ (ShuShruti Bank) ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ಪೊಲೀಸರಿಂದ (CCB Police) ನಗರದ 14 ಕಡೆಗಳಲ್ಲಿ ದಾಳಿ ನಡೆದಿದೆ.
ಐವರು ಎಸಿಪಿ (ACP), 14 ಇನ್ಸ್ಪೆಕ್ಟರ್ ಸೇರಿ 60ಕ್ಕೂ ಹೆಚ್ಚು ಪೊಲೀಸರ ತಂಡದಿಂದ ಬೆಂಗಳೂರಿನ (Bengaluru) ವಿಲ್ಸನ್ ಗಾರ್ಡನ್, ಪೀಣ್ಯ, ರಾಜಗೋಪಾಲನಗರ, ಚಿಕ್ಕಜಾಲ ಸೇರಿದಂತೆ ನಗರದ ಹಲವೆಡೆ ದಾಳಿ ನಡೆದಿದೆ. ಇದನ್ನೂ ಓದಿ: ಚಲಿಸುತ್ತಿದ್ದ ರೈಲಿನಲ್ಲಿ ಮಚ್ಚನ್ನು ಹಿಡಿದುಕೊಂಡು ಸಾಹಸ ಪ್ರದರ್ಶನ- ಮೂವರು ವಿದ್ಯಾರ್ಥಿಗಳ ಬಂಧನ
ಹೂಡಿಕೆದಾರರಿಗೆ ವಾಪಸ್ಸು ಹಣ ನೀಡದೇ ವಂಚಿಸಿದ ಆರೋಪದ ಹಿನ್ನೆಲೆಯಲ್ಲಿ ನಗರದ ಹಲವೆಡೆ ಬ್ಯಾಂಕ್ ವಿರುದ್ಧ ಎಫ್‌ಐಆರ್ (FIR) ದಾಖಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ಶುಶೃತಿ ಬ್ಯಾಂಕ್ ಅಧ್ಯಕ್ಷ ಶ್ರೀನಿವಾಸ ಮೂರ್ತಿಯನ್ನು ಬಂಧಿಸಲಾಗಿತ್ತು. ನಂತರ ಈ ಎಲ್ಲಾ ಕೇಸ್‌ಗಳನ್ನು ಸಿಸಿಬಿಗೆ (CCB) ವರ್ಗಾವಣೆ ಮಾಡಲಾಗಿತ್ತು. ಈ ಹಿನ್ನೆಲೆಯಲ್ಲಿ ಏಕಕಾಲಕ್ಕೆ ಬ್ಯಾಂಕ್‌ನ ಹಲವು ಶಾಖೆಗಳ ಮೇಲೆ ದಾಳಿ ನಡೆಸಲಾಗಿದೆ.