ಚಂಡೀಗಢ: ಕೇಂದ್ರೀಯ ತನಿಖಾ ದಳದ(ಸಿಬಿಐ) ವಿಶೇಷ ನ್ಯಾಯಾಲಯವು ಸೋಮವಾರ ಪಂಜಾಬ್‍ನ ಮಾಜಿ ಪೊಲೀಸ್ ಅಧಿಕಾರಿಯೊಬ್ಬರಿಗೆ 50 ಸಾವಿರ ರೂ. ದಂಡ, 10 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ವಿಶೇಷ ಸಿಬಿಐ ನ್ಯಾಯಾಧೀಶರಾದ ಹರಿಂದರ್ ಸಿಧು ಪಂಜಾಬ್ ಮಾಜಿ ಪೊಲೀಸ್ ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಅವರಿಗೆ 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಿದ್ದಾರೆ. ಇದನ್ನೂ ಓದಿ: ಮತಾಂತರ ಮಾಡ್ತಿದ್ದಾರೆಂದು ಕ್ರೈಸ್ತ ಸನ್ಯಾಸಿನಿಯರಿಗೆ ಕಿರುಕುಳ- RSS ಕಾರ್ಯಕರ್ತ ಅರೆಸ್ಟ್
Advertisement
1991ರಲ್ಲಿ ಮೇಜರ್ ಸಿಂಗ್ ಅವರು ಪೊಲೀಸ್ ಸ್ಟೇಷನ್ ಹೌಸ್ ಎಚ್‍ಒ ಆಗಿದ್ದ ತರ್ನ್ ತರಣ್ ಅವರ ಜೊತೆ ಸಂತೋಖ್ ಸಿಂಗ್ ಅವರನ್ನು ಅಪಹರಣ ಮಾಡಿ ಹತ್ಯೆ ಮಾಡಿದ್ದರು. ಈ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಿಬಿಐ ವಿಶೇಷ ನ್ಯಾಯಾಲಯವು 10 ವರ್ಷ ಜೈಲು ಶಿಕ್ಷೆಯನ್ನು ವಿಧಿಸಲಾಗಿದೆ. ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಮೇಲೆ ಸೆಕ್ಷನ್ 364(ಕೊಲೆಯ ಮಾಡಲು ಅಪಹರಣ) ಅಡಿಯಲ್ಲಿ ಪ್ರಕರಣ ದಾಖಲಾಗಿತ್ತು.
Advertisement
Advertisement
ಏನಿದು ಘಟನೆ?
ಅಮೃತಸರ ಜಿಲ್ಲೆಯ ಜಸ್ಪಾಲ್ ಮೆಹ್ತಾ ಗ್ರಾಮದ ಸಂತೋಖ್ ಸಿಂಗ್ ಪಂಜಾಬ್ ರಾಜ್ಯ ವಿದ್ಯುತ್ ಮಂಡಳಿಯ ಬುಟಾರಿ ಉಪವಿಭಾಗದ ಉದ್ಯೋಗಿಯಾಗಿದ್ದರು. ಇವರು 31 ಜುಲೈ 1991 ರ ಸಂಜೆ, ತಮ್ಮ ಕೆಲಸ ಮುಗಿಸಿ ರಾತ್ರಿ 8:30 ಸುಮಾರಿಗೆ ಮನೆಗೆ ಮರಳಿದ್ದರು. ಈ ಸಮಯದಲ್ಲಿ ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಮತ್ತು ತರಣ್ ಸದರ್, ಸಂತೋಖ್ ಸಿಂಗ್ ಅವರ ಮನೆ ಮೇಲೆ ದಾಳಿ ನಡೆಸಿದ್ದಾರೆ. ಸಂತೋಖ್ ಸಿಂಗ್ ಅವರನ್ನು ಪೊಲೀಸರು ಕರೆದುಕೊಂಡು ಹೋಗಿದ್ದು, ಅಕ್ರಮ ಬಂಧನದಲ್ಲಿ ಇರಿಸಲಾಗಿತ್ತು.
Advertisement
ಮಗ ಮನೆಗೆ ಹಿಂತಿರುಗದೆ ಇದ್ದ ಕಾರಣ, ಸಂತೋಖ್ ಸಿಂಗ್ ತಾಯಿ ಸ್ವರಣ್ ಕೌರ್ ಅವರು 1996 ರಲ್ಲಿ ಪಂಜಾಬ್ ಮತ್ತು ಹರಿಯಾಣ ಹೈಕೋರ್ಟ್‍ಗೆ ಹೇಬಿಯಸ್ ಕಾರ್ಪಸ್ ಅರ್ಜಿಯನ್ನು ಸಲ್ಲಿಸಿದ್ದರು. ಈ ಮೂಲಕ ಪಂಜಾಬ್ ಪೊಲೀಸರು ತನ್ನ ಮಗನನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವಂತೆ ಅಥವಾ ಅವರ ಅಪಹರಣ ಮತ್ತು ನಾಪತ್ತೆಯ ಬಗ್ಗೆ ತನಿಖೆ ನಡೆಸುವಂತೆ ಮನವಿ ಮಾಡಿದ್ದರು.
ಜನವರಿ 21 1998 ರಂದು ಹೈಕೋರ್ಟ್ ಈ ಪ್ರಕರಣ ಕುರಿತು ತನಿಖೆ ನಡೆಸುವಂತೆ ಸಿಬಿಐಗೆ ನಿರ್ದೇಶನ ನೀಡಿತು. ಸಂತೋಖ್ ಸಿಂಗ್ ಅವರನ್ನು ಇನ್ಸ್‍ಪೆಕ್ಟರ್ ಮೇಜರ್ ಸಿಂಗ್ ಅಪಹರಿಸಿ ಅಕ್ರಮವಾಗಿ ಬಂಧಿಸಿದ್ದಾರೆ ಎಂದು ಸಿಬಿಐ ಆರೋಪಪಟ್ಟಿ ಸಲ್ಲಿಸಿತ್ತು. ಇದನ್ನೂ ಓದಿ: ದೇಶದ ಆರ್ಥಿಕತೆಗೆ ಬೂಸ್ಟರ್ ಡೋಸ್ ನೀಡುವ ಬಜೆಟ್: ಶಶಿಕಲಾ ಜೊಲ್ಲೆ
ಸಿಬಿಐ ಆಗಸ್ಟ್ 21 1998 ರಂದು ಪ್ರಕರಣವನ್ನು ದಾಖಲಿಸಿಕೊಂಡಿದ್ದು, ಏಪ್ರಿಲ್ 21 1999 ರಂದು ಚಾರ್ಜ್ ಶೀಟ್ ಸಲ್ಲಿಸಿತ್ತು
ಮೇಜರ್ ಸಿಂಗ್‍ಗೆ ಶಿಕ್ಷೆಯಾದ ಬಳಿಕ ದೂರುದಾರರಾದ ಸ್ವರಣ್ ಕೌರ್ ಈ ಕುರಿತು ಮಾತನಾಡಿದ್ದು, ಇನ್‍ಸ್ಪೆಕ್ಟರ್ ಮೇಜರ್ ಸಿಂಗ್‍ಗೆ ನೀಡಲಾದ 10 ವರ್ಷಗಳ ಶಿಕ್ಷೆಯು ಅಂತಹ ಗಂಭೀರವಾಗಿಲ್ಲ. ನನ್ನ ಮಗನ ಅಪಹರಣ ಮತ್ತು ಹತ್ಯೆ ಮಾಡಿದ್ದಕ್ಕೆ ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು. ಅದಕ್ಕೆ ನಾನು ಹೈಕೋರ್ಟ್ ಮೊರೆ ಹೋಗುತ್ತೇನೆ ಎಂದು ತಿಳಿಸಿದ್ದಾರೆ.