ಮಂಡ್ಯ: ಒಂದು ಕಡೆ ಮಂಡ್ಯ (Mandya) ಜಿಲ್ಲೆಯ ಶ್ರೀರಂಗಪಟ್ಟಣ (Srirangapatna) ತಾಲೂಕಿನ ಕೆಆರ್‌ಎಸ್ (KRS) ಡ್ಯಾಂನಿಂದ ಏಳನೇ ದಿನವು ತಮಿಳುನಾಡಿಗೆ (Tamil Nadu) ನೀರು ಬಿಡುಗಡೆಯಾಗಿದ್ದು, ಮತ್ತೊಂದೆಡೆ ಸಕ್ಕರೆ ನಾಡಿನಲ್ಲಿ ಅನ್ನದಾತರ ಪ್ರತಿಭಟನೆಗಳು ದಿನೇ ದಿನೇ ಹೆಚ್ಚಾಗುತ್ತಿವೆ.
Advertisement
ಇಂದು (ಮಂಗಳವಾರ) ಕೂಡ ಜಿಲ್ಲೆಯ ಹಲವೆಡೆ ಹೋರಾಟಕ್ಕೆ ಸಜ್ಜಾಗಿದ್ದು, ರಕ್ತದ ಹೆಬ್ಬೆಟ್ಟು ಮುದ್ರೆಯ ಪತ್ರ ಚಳುವಳಿ ನಡೆಯಲಿದೆ. ರಾಜ್ಯಪಾಲರು ಮಧ್ಯಪ್ರವೇಶ ಮಾಡಿ ತಮಿಳುನಾಡಿಗೆ ಹರಿಸುತ್ತಿರುವ ನೀರು ನಿಲ್ಲಿಸುವಂತೆ ಡಿಸಿ ಮೂಲಕ ರಕ್ತದ ಸಹಿಯ ಮನವಿ ಪತ್ರವನ್ನು ನೀಡಿ ಬಿಜೆಪಿ ಕಾರ್ಯಕರ್ತರು ಪತ್ರ ಚಳುವಳಿ ನಡೆಸಲಿದ್ದಾರೆ. ಜಿಲ್ಲಾ ರೈತ ಹಿತರಕ್ಷಣಾ ವೇದಿಕೆಯಿಂದ ಐದನೇ ದಿನವೂ ಪ್ರತಿಭಟನೆ ಮುಂದುವರಿಕೆಯಾಗಿದ್ದು, ಮಂಡ್ಯದ ವಿಶ್ವೇಶ್ವರಯ್ಯ ಪ್ರತಿಮೆ ಬಳಿ ಧರಣಿ ನಡೆಸಲಿದ್ದಾರೆ. ಇದನ್ನೂ ಓದಿ: ಅಧಿಕಾರಕ್ಕೆ ಏರಿದ ಬಳಿಕ ಮಾತು ತಪ್ಪಿದ ಸಿದ್ದರಾಮಯ್ಯ – ಬಾದಾಮಿ ಜನ ಹೇಳೋದು ಏನು?
Advertisement
Advertisement
ಇನ್ನೂ ಭೂಮಿ ತಾಯಿ ಹೋರಾಟ ಸಮಿತಿಯಿಂದ ಇಂದು ಮತ್ತೊಂದು ವಿಭಿನ್ನ ಚಳುವಳಿ ನಡೆಸಲಿದೆ. ಇಂದು ಒನಕೆ ಹಿಡಿದು ಬೀದಿಗಿಳಿಯಲಿರುವ ರೈತ ಮಹಿಳೆಯರು ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ಸನ್ನಿಧಿಯಿಂದ ತಾಲೂಕು ಕಚೇರಿ ವರೆಗೆ ಒನಕೆ ಮೆರವಣಿಗೆ ನಡೆಸಲಿದ್ದಾರೆ.
Advertisement
ಅತ್ತ ಮೇಲುಕೋಟೆ ಶಾಸಕ ದರ್ಶನ್ ಪುಟ್ಟಣಯ್ಯ ನೇತೃತ್ವದಲ್ಲಿ ಕೆಆರ್‌ಎಸ್ ಡ್ಯಾಂ ಬಳಿ ಅಹೋರಾತ್ರಿ ಧರಣಿ ಮುಂದುವರಿಯಲಿದೆ. ದಿನೇ ದಿನೇ ಕಾವೇರಿ ಹೋರಾಟದ ಕಾವು ಮಂಡ್ಯದಲ್ಲಿ ಹೆಚ್ಚಾಗುತ್ತಿದ್ದರೂ ಸಹ ಸರ್ಕಾರ ಮಾತ್ರ ಈ ಬಗ್ಗೆ ತಲೆಕೆಡಿಸಿಕೊಳ್ಳುತ್ತಿಲ್ಲ. ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಡಿರುವ ಮಾತಿಗಂತೂ ಜಿಲ್ಲೆಯ ರೈತ ಹೋರಾಟಗಾರರು ಆಕ್ರೋಶ ಭರಿತರಾಗಿದ್ದಾರೆ. ಇದನ್ನೂ ಓದಿ: ಹೂ ದರ ಭಾರೀ ಇಳಿಕೆ – ಮಾರುಕಟ್ಟೆಯಲ್ಲೇ ಎಸೆದು ಹೋದ ರೈತರು
Web Stories