ನವದೆಹಲಿ: ಆಮ್ ಆದ್ಮಿ ಪಕ್ಷದ (ಎಎಪಿ) (Aam Aadmi Party) ಶಾಸಕ ಗುಲಾಬ್ ಸಿಂಗ್ ಯಾದವ್ (Gulab Singh Yadav) ಅವರಿಗೆ ಪಕ್ಷದ ಹಲವಾರು ಕಾರ್ಯಕರ್ತರು ಅಟ್ಟಾಡಿಸಿಕೊಂಡು ಥಳಿಸಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
Advertisement
ಭಾರತೀಯ ಜನತಾ ಪಕ್ಷದ (ಬಿಜೆಪಿ) (Bharatiya Janata Party) ದೆಹಲಿ ಘಟಕವು ಈ ವೀಡಿಯೊವನ್ನು ತನ್ನ ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದು, ಸೋಮವಾರ ಶ್ಯಾಮ್ ವಿಹಾರ್‌ನಲಿ ತನ್ ಪಕ್ಷದ ಕಾರ್ಯಕರ್ತರೊಂದಿಗೆ ಗುಲಾಬ್ ಸಿಂಗ್ ಯಾದವ್ ಅವರು ಸಭೆ ನಡೆಸುತ್ತಿದ್ದ ವೇಳೆ ಈ ಘಟನೆ ನಡೆದಿದೆ. ದೆಹಲಿ ಎಂಸಿಡಿ ಚುನಾವಣೆ 2022ರ ಟಿಕೆಟ್ ಹಂಚಿಕೆ ವಿಚಾರವಾಗಿ ಕೆಲವು ವಾಗ್ವಾದ ನಡೆದ ಬಳಿಕ ಎಎಪಿ ಕಾರ್ಯಕರ್ತರೇ ಗುಲಾಬ್ ಸಿಂಗ್ ಯಾದವ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ.
Advertisement
पिट गए AAP के विधायक जी!
आम आदमी पार्टी विधायक गुलाब सिंह यादव को टिकट बेचने के आरोप में आप कार्यकर्ताओं ने दौड़ा-दौड़ा करके पीटा।
केजरीवाल जी, ऐसे ही AAP के सभी भ्रष्टाचारी विधायकों का नंबर आएगा। pic.twitter.com/MArpoSi3E5
— BJP Delhi (@BJP4Delhi) November 21, 2022
Advertisement
ವೀಡಿಯೋದಲ್ಲಿ ಆಪ್ ಕಾರ್ಯಕರ್ತರು ಗುಲಾಬ್ ಸಿಂಗ್ ಯಾದವ್ ಅವರ ಕೊರಳಪಟ್ಟಿ ಹಿಡಿದು, ಕೈಯಿಂದ ಥಳಿಸುತ್ತಿರುವುದನ್ನು ಕಾಣಬಹುದಾಗಿದೆ. ಕೊನೆಗೆ ಅವರಿಂದ ತಪ್ಪಿಸಿಕೊಳ್ಳು ಯಾದವ್ ಅವರು ಕಚೇರಿಯಿಂದ ಹೊರಗೆ ಓಡಿ ಹೋಗುತ್ತಾರೆ. ಆದರೂ ಕಾರ್ಯಕರ್ತರು ಅವರ ಬೆನ್ನಟ್ಟಿರುವುದನ್ನು ಕಾಣಬಹುದಾಗಿದೆ. ಕೊನೆಗೆ ಯಾದವ್ ಅವರು ಪೊಲೀಸ್ ಠಾಣೆಗೆ ತಲುಪಿ ಆಶ್ರಯ ಪಡೆದಿದ್ದಾರೆ.
Advertisement
ಈ ವೀಡಿಯೋ ಜೊತೆಗೆ ಆಪ್ ಶಾಸಕನಿಗೆ ಥಳಿತ! ಟಿಕೆಟ್ ಹಂಚಿಕೆ ವಿಚಾರವಾಗಿ ಆಮ್ ಆದ್ಮಿ ಪಕ್ಷದ ಶಾಸಕ ಗುಲಾಬ್ ಸಿಂಗ್ ಯಾದವ್‍ಗೆ ಆಪ್ ಕಾರ್ಯಕರ್ತರು ಹಲ್ಲೆ ನಡೆಸಿದ್ದಾರೆ. ಕೇಜ್ರಿವಾಲ್ ಅವರೇ ಎಎಪಿಯ ಎಲ್ಲಾ ಭ್ರಷ್ಟ ಶಾಸಕರ ಸಂಖ್ಯೆ ಹೀಗೆ ಹೊರಗೆ ಬರಲಿದೆ ಎಂದು ಬಿಜೆಪಿ ಕ್ಯಾಪ್ಷನ್‍ನಲ್ಲಿ ಬರೆದುಕೊಂಡಿದೆ.
ಈ ಘಟನೆ ಸಂಬಂಧ ಪ್ರತಿಕ್ರಿಯಿಸಿರುವ ದೆಹಲಿ ಪೊಲೀಸರು, ಇಂದು ರಾತ್ರಿ 8 ಗಂಟೆ ಸುಮಾರಿಗೆ ಶಾಸಕ ಗುಲಾಬ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿರುವ ಬಗ್ಗೆ ಮಾಹಿತಿ ಲಭ್ಯವಾಯಿತು. ಟಿಕೆಟ್ ಹಂಚಿಕೆ ವಿಚಾರದಲ್ಲಿ ಗಲಾಟೆ ನಡೆದಿದ್ದು, ಕೆಲ ಪಕ್ಷದ ಕಾರ್ಯಕರ್ತರು ಗುಲಾಬ್ ಸಿಂಗ್ ಅವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಅವರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ದೇಹದ ಹೊರಗೆ ಮಾತ್ರ ಗಾಯಗಳ ಗುರುತು ಕಂಡುಬಂದಿದೆ. ಸದ್ಯ ಈ ಸಂಬಂಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದ್ದಾರೆ.