Sunday, 16th June 2019

2 years ago

ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್

ಕಾರವಾರ: ವಾಟ್ಸಪ್ ನಲ್ಲಿ ನೀವು ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ. ಗ್ರೂಪಿನಲ್ಲಿ ಬೇರೆಯವರು ಅವಹೇಳನಕಾರಿ ಸಂದೇಶ ಕಳುಹಿಸಿದ್ರೆ ನೀವು ಜೈಲಿಗೆ ಹೋಗಬೇಕಾದಿತು. ಹೌದು. ವಾಟ್ಸಪ್ ಗ್ರೂಪ್ ನಲ್ಲಿ ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ಗ್ರೂಪ್ ಅಡ್ಮಿನ್ ಪೊಲೀಸರು ಬಂಧಿಸಿ ಜೈಲಿಗೆ ಕಳುಹಿಸಿದ ಮೊದಲ ಪ್ರಕರಣ ಉತ್ತರಕನ್ನಡ ಜಿಲ್ಲೆಯ ಮುರ್ಡೇಶ್ವರದ ಬೈಲೂರಿನಲ್ಲಿ ನಡೆದಿದೆ. ಮುರ್ಡೇಶ್ವರದ ಬೈಲೂರು ವ್ಯಾಪ್ತಿಯ ದೊಡ್ಡಬಲ್ಸೆ ನಿವಾಸಿ ಕೃಷ್ಣ ಸಣ್ಣತಮ್ಮ ನಾಯ್ಕ(30) ಬಂಧಿತ ಆರೋಪಿ. ರಿಕ್ಷಾ ಚಾಲಕನಾಗಿದ್ದ ಈತ `ಡಿ ಬಲ್ಸೆ ಬಾಯ್ಸ್’ ಎಂಬ ವಾಟ್ಸಪ್ ಗ್ರೂಪಿನ ಅಡ್ಮಿನ್ […]

2 years ago

ತಾಯಿ ಮಾಂಗಲ್ಯ ಕದ್ದು ಲವರ್‍ಗೆ ಕೊಟ್ಳು : ನ್ಯಾಯಕ್ಕಾಗಿ ಅಲೆಯುತ್ತಿದ್ದಾಳೆ ಕಾರವಾರದ ಪ್ರೇಯಸಿ

ಕಾರವಾರ: ಪ್ರೀತಿ ಮಾಯೆ ಹುಷಾರು ಅಂತಾರೆ. ಪ್ರೀತಿಗಾಗಿ ಏನ್ ಮಾಡೋಕೂ ರೆಡಿ ಇರ್ತಾರೆ ಅನ್ನೋದಕ್ಕೆ ಈ ಘಟನೆಯೇ ಸಾಕ್ಷಿ. ತನ್ನ ಪ್ರಿಯತಮನಿಗಾಗಿ ತಾಯಿಯ ಮಾಂಗಲ್ಯ ಸರವನ್ನೇ ಕದ್ದು ನೀಡಿದ ಆ ಯುವತಿ ಈಗ ವಂಚನೆಗೊಳಗಾಗಿ ನ್ಯಾಯಕ್ಕಾಗಿ ಅಲೆಯುತಿದ್ದಾಳೆ. ಹೌದು. ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದ ಕರ್ಕಿಯ ತಪ್ಪಲಕೇರಿಯ ನೇತ್ರಾವತಿ, ಹುಟ್ಟುತ್ತಾನೆ ತಂದೆ-ತಾಯಿಯನ್ನೇ ಕಳೆದುಕೊಂಡು ಚಿಕ್ಕಮ್ಮನ ಆಶ್ರಯದಲ್ಲಿ...

ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸ್ತಿದ್ದ 1.30 ಕೋಟಿ ರೂ. ಹಳೇ ನೋಟ್‍ಗಳು ಜಪ್ತಿ- 3 ಮಹಿಳೆಯರು ವಶಕ್ಕೆ

2 years ago

ಉತ್ತರ ಕನ್ನಡ: ಬಸ್ಸಿನಲ್ಲಿ ಅಕ್ರಮವಾಗಿ ಸಾಗಿಸುತ್ತಿದ್ದ 1 ಕೋಟಿ 30 ಲಕ್ಷ ರೂ. ಮೌಲ್ಯದ ನಿಷೇಧಿತ 500 ಮತ್ತು 1 ಸಾವಿರ ಮುಖಬೆಲೆಯ ನೋಟುಗಳನ್ನು ಪೊಲೀಸರು ಜಪ್ತಿ ಮಾಡಿದ್ದು, ಹಣ ಸಾಗಿಸುತ್ತಿದ್ದ ಮೂವರು ಮಹಿಳೆಯರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಮುಂಡಗೋಡು ಮೂಲದ ಜಯಶ್ರೀ...

ಎಂಡೋಸಲ್ಫಾನ್ ನಿಂದ ಬಳಲುತ್ತಿರುವ ಮೂವರು ಮಕ್ಕಳನ್ನು ಸಲಹುವ ದಂಪತಿಗೆ ಬೇಕಿದೆ ಸಹಾಯ

2 years ago

ಕಾರವಾರ: ಮುಪ್ಪು ಆವರಿಸಿದಾಗ ಮಕ್ಕಳು ತಮ್ಮ ಆಸರೆಗೆ ಇರಬೇಕು ಎಂದು ಪ್ರತಿಯೊಬ್ಬ ಹೆತ್ತವರು ಬಯಸುತ್ತಾರೆ. ಆದರೆ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನ ತಲಗೇರಿ ಗ್ರಾಮದಲ್ಲಿರುವ ಕುಟುಂಬದಲ್ಲಿ ಬೆಳೆದು ನಿಂತ ಮೂವರು ಮಕ್ಕಳನ್ನ ಕಡು ಬಡತನದ ಮುಪ್ಪಿನಲ್ಲೂ ಪೊಷಕರೇ ನೋಡಿಕೊಳ್ಳಬೇಕಾದ ಸ್ಥಿತಿಯಿದೆ....

ಬೇರೊಬ್ಬ ಮೌಲ್ವಿಯ ಉಪದೇಶ ಆಲಿಸಿದಕ್ಕೆ 12 ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರದ ಫತ್ವಾ

2 years ago

ಕಾರವಾರ: ಬೇರೊಬ್ಬ ಮೌಲ್ವಿಯ ಉಪದೇಶವನ್ನು ಆಲಿಸಿದ ಕಾರಣಕ್ಕಾಗಿ ಜಿಲ್ಲೆಯ ಚಿತ್ತಾಕುಲದ ಮಾಲ್ದಾರವಾಡದ ಗ್ರಾಮದಲ್ಲಿ 12 ಮುಸ್ಲಿಂ ಕುಟುಂಬಗಳಿಗೆ ಸಾಮಾಜಿಕ ಬಹಿಷ್ಕಾರ ಹಾಕಿ ಮೌಲ್ವಿಯೊಬ್ಬರು ಫತ್ವಾ ಹೊರಡಿಸಿದ್ದಾರೆ. ಗ್ರಾಮದ ಅನ್ವರ್ ಮಹಮದ್ ಖಾನ್, ಅಬ್ದುಲ್ ಸಲಾಂ ಸೇರಿದಂತೆ 12 ಕುಟುಂಬಗಳು ಆಂಧ್ರಪ್ರದೇಶದ ದಾವಲ್-ಅಲಿ-ಶಾಹಾರ್...

ಪ್ರಾಣವನ್ನೂ ಲೆಕ್ಕಿಸದೆ ಆಪತ್ತಿನಲ್ಲಿರೋ ಪ್ರಾಣಿಗಳ ಜೀವರಕ್ಷಣೆ ಮಾಡ್ತಿದೆ ಈ ತಂಡ

2 years ago

ಕಾರವಾರ: ಇವತ್ತಿನ ಪಬ್ಲಿಕ್‍ಹೀರೋ ಕಾರವಾರದ ಒಂದು ತಂಡ. ಮನುಷ್ಯರ ಸಹಾಯಕ್ಕೆ ಬರೋಕೇ ಜನ ಹಿಂದೇಟು ಹಾಕೋ ಈ ಕಾಲದಲ್ಲಿ ಪ್ರಾಣವನ್ನೂ ಲೆಕ್ಕಿಸದೆ ಈ ತಂಡ ವನ್ಯಜೀವಿಗಳ ರಕ್ಷಣೆ ಮಾಡ್ತಿದೆ. ನಗರೀಕರಣದಿಂದಾಗಿ ಕಾಡುಪ್ರಾಣಿಗಳು ನಾಡಿಗೆ ಬಂದು ತೊಂದರೆಗೆ ಸಿಲುಕಿಕೊಳ್ಳೋದನ್ನ ನೋಡಿದ್ದೇವೆ. ಹೀಗೆ ಬಂದ...

ಅಕ್ರಮ ಮರಳು ಸಾಗಾಣಿಕೆ- ಪಿಎಸ್‍ಐ ಲಂಚ ಸ್ವೀಕರಿಸಿದ ವಿಡಿಯೋ ವೈರಲ್

2 years ago

ಕಾರವಾರ: ಅಕ್ರಮವಾಗಿ ಮರಳು ಸಾಗಾಣಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಶಿರಸಿ ತಾಲೂಕಿನ ಬನವಾಸಿ ಠಾಣೆಯ ಪಿಎಸ್‍ಐ ಲಂಚ ಸ್ವೀಕರಿಸಿ ಮತ್ತೆ ಬೇಡಿಕೆ ಇಡುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಬನವಾಸಿ ಠಾಣಾ ಪಿಎಸ್‍ಐ ಸುರೇಖಾ ಬಾಡ್ಕರ್ ನಾಲ್ಕು ದಿನಗಳ...

ವಿಡಿಯೋ: ಆಹಾರ ಅರಸಿ ಕಾಡಿನಿಂದ ನಾಡಿಗೆ ಬಂದು, ದಾರಿ ತಿಳಿಯದೇ ಸಮುದ್ರಕ್ಕೆ ಬಿದ್ದ ಕಡವೆ

2 years ago

ಕಾರವಾರ: ಇಂದು ಬೆಳಗ್ಗೆ ಕಾಡಿನಿಂದ ನಾಡಿಗೆ ಬಂದ ಕಡವೆಯೊಂದು ಬೀದಿ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಕಾರವಾರ ನಗರದ ಆಲಿಗದ್ದಾ ಕಡಲ ತೀರದ ಸಮುದ್ರದಲ್ಲಿ ಬಿದ್ದಿತ್ತು. ಸಮುದ್ರದಲ್ಲಿ ಸುಮಾರು ಒಂದು ಘಂಟೆಗಳ ಕಾಲ ಕಡವೆ ಈಜುತ್ತಿರುವುದನ್ನು ಗಮನಿಸಿದ ಸ್ಥಳೀಯ ಮೀನುಗಾರರು ಅರಣ್ಯ ಇಲಾಖೆಗೆ...