Friday, 20th July 2018

Recent News

10 months ago

ಒಂದೇ ವಾರದಲ್ಲಿ 3 ನಿಗೂಢ ಸಾವು – ಅನಾರೋಗ್ಯಕ್ಕೊಳಗಾದವ್ರಿಗೆ ಬರೆ ಎಳೆಯುತ್ತಿರೋ ಗ್ರಾಮಸ್ಥರು

ಕಲಬುರಗಿ: ಜಿಲ್ಲೆಯ ಚಿಂಚೋಳಿ ತಾಲೂಕಿನ ಪಸ್ತಾಪುರ ಗ್ರಾಮದ ಜನ ವಿಚಿತ್ರ ಕಾಯಿಲೆಯಿಂದ ಬಳಲುತ್ತಿದ್ದು, ಒಂದೇ ವಾರದಲ್ಲಿ ಮೂವರು ನಿಗೂಢವಾಗಿ ಸಾವನ್ನಪಿರುವ ಘಟನೆ ನಡೆದಿದೆ. ಅಲ್ಲದೇ ಗ್ರಾಮದ ಇತರೆ 8 ಜನರು ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದು, ಗ್ರಾಮದಲ್ಲಿ ಅತಂಕದ ವಾತಾವರಣ ನಿರ್ಮಾಣವಾಗಿದೆ. ಈ ಎಲ್ಲಾ ಸಾವುಗಳಿಗೂ ಗ್ರಾಮದ ಜನರ ಮೇಲೆ ಭಾನಾಮತಿಯ ಪ್ರಯೋಗವಾಗಿರುವುದೇ ಕಾರಣ ಎಂದು ನಂಬಿರುವ ಗ್ರಾಮಸ್ಥರು ಅನಾರೋಗ್ಯಕ್ಕೆ ಒಳಗಾದವರ ದೇಹದ ಮೇಲೆ `ಕುರುಪಿ’ ಮತ್ತು `ಬೀಡಿ’ಯಿಂದ ಬರೆ ಎಳೆಯುತ್ತಿದ್ದಾರೆ. ಈ ವಿಷಯ ತಿಳಿದ ಚಿಂಚೋಳಿ ಶಾಸಕ […]

10 months ago

ನನ್ನ ವಿರುದ್ಧ ಸಿಎಂ ಬೇಕಾದ್ರೂ ಸ್ಪರ್ಧಿಸಲಿ, ಅಭ್ಯಂತರವಿಲ್ಲ- ಬಿಎಸ್‍ವೈ

ಕಲಬುರಗಿ: ಹೈಕಮಾಂಡ್ ಸೂಚನೆ ಮೇರೆಗೆ ಕ್ಷೇತ್ರ ಅಯ್ಕೆಯಲ್ಲಿ ಚಿಂತನೆ ನಡೆಸಲಾಗುವುದು. ಸಿಎಂ ಸಿದ್ದರಾಮಯ್ಯ ಬೇಕಾದ್ರೆ ನನ್ನ ವಿರುದ್ಧ ಸ್ಪರ್ಧಿಸಲಿ. ಅದಕ್ಕೆ ನನ್ನ ಅಭ್ಯಂತರವಿಲ್ಲ ಅಂತ ಮಾಜಿ ಸಿಎಂ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ. ವಿಧಾನಸಭಾ ಚುನಾವಣೆ ಹಿನ್ನಲೆಯಲ್ಲಿ ವಿಜಯಪುರ-ಬಾಗಲಕೋಟ ಕ್ಷೇತ್ರದಿಂದ ಸ್ಪರ್ಧೆ ವಿಚಾರಕ್ಕೆ ಸಂಬಂಧಿಸಿದಂತೆ ನಗರದಲ್ಲಿ ಮಾಧ್ಯಮಗಳೊಂದಿಗೆ ಬಿಎಸ್‍ವೈ ಮಾತನಾಡಿದ್ರು. ಈ ಮಧ್ಯೆ...

ಆಸ್ಪತ್ರೆಗೆ ನುಗ್ಗಿದ ಮಳೆ ನೀರು-ರೋಗಿಗಳ ಪರದಾಟ

10 months ago

ಕಲಬುರಗಿ: ನಗರ ಸೇರಿದಂತೆ ಜಿಲ್ಲೆಯ ಹಲವೆಡೆ ಬುಧವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಕೆಬಿಎನ್ ಆಸ್ಪತ್ರೆಯಲ್ಲಿ ಮೊಣಕಾಲುವರೆಗೆ ನೀರು ನಿಂತಿರುವ ಘಟನೆ ನಡೆದಿದೆ. ರಾತ್ರಿಯಿಡೀ ಸುರಿದ ಮಳೆಯಿಂದಾಗಿ ನೀರು ಆಸ್ಪತ್ರೆಗೆ ನುಗ್ಗಿ ರೋಗಿಗಳು ಪರದಾಡುವ ಸ್ಥಿತಿ ಎದುರಾಗಿದೆ. ಆಸ್ಪತ್ರೆಯಲ್ಲಿ ರೋಗಿಗಳ ಕೊಠಡಿಗಳಲ್ಲೆಲ್ಲಾ...

ಮಾರಕಾಸ್ತ್ರಗಳಿಂದ ಕತ್ತು ಕೊಯ್ದು ಯುವಕನ ಬರ್ಬರ ಹತ್ಯೆ

10 months ago

ಕಲಬುರಗಿ: ಮಾರಕಾಸ್ತ್ರಗಳಿಂದ ಯುವಕನ ಕತ್ತು ಕೊಯ್ದು ಬರ್ಬರವಾಗಿ ಕೊಲೆ ಮಾಡಿ ಎಸೆದಿರುವ ಘಟನೆ ಕಲಬುರಗಿ ತಾಲೂಕಿನ ನಂದೂರ(ಬಿ) ಗ್ರಾಮದ ಪ್ರಾಥಮಿಕ ಅರೋಗ್ಯ ಕೇಂದ್ರದ ಬಳಿ ಬುಧವಾರ ತಡರಾತ್ರಿ ನಡೆದಿದೆ. ಮೃತ ಯುವಕನನ್ನು ಮಂಜುನಾಥ್ ಮಾಶಾಳ ಎಂಬುವುದಾಗಿ ಗುರುತಿಸಲಾಗಿದ್ದು, ಅದೇ ಗ್ರಾಮದವನು ಎನ್ನಲಾಗಿದೆ....

2 ಸಾವಿರ ರೂ. ಕದ್ದಳೆಂದು ಆರೋಪಿಸಿ ಸೊಸೆಯನ್ನ ಬೆಂಕಿ ಹಚ್ಚಿ ಕೊಂದ್ರು

10 months ago

ಕಲಬುರಗಿ: ಮನೆಯಲ್ಲಿದ್ದ 2 ಸಾವಿರ ಕದ್ದ ಆರೋಪ ಮಾಡಿ ಸೊಸೆಯನ್ನು ಬೆಂಕಿ ಹಚ್ಚಿ ಕೊಲೆ ಮಾಡಿರುವ ಘಟನೆ ಕಲಬುರಗಿಯ ದೇವಲನಾಯಕ ತಾಂಡಾದಲ್ಲಿ ನಡೆದಿದೆ. ಪೂಜಾ ಎಂಬ ಯುವತಿಯೇ ಕೊಲೆಯಾದ ದುರ್ದೈವಿಯಾಗಿದ್ದಾರೆ. ಕಳ್ಳತನ ಆರೋಪ ಮಾಡಿ ಗಂಡ ಮತ್ತು ಅತ್ತಿಗೆ ಬೆಂಕಿ ಹಚ್ಚಿದ್ದಾರೆ....

ರಾತ್ರಿ ಮನೆಗೆ ನುಗ್ಗಿ ಪಕ್ಕದಮನೆಯವನಿಂದ ಅತ್ಯಾಚಾರ- ಮನನೊಂದು ಯುವತಿ ಆತ್ಮಹತ್ಯೆ

10 months ago

ಕಲಬುರಗಿ: ಮನೆಗೆ ನುಗ್ಗಿ ಯುವತಿ ಮೇಲೆ ಯುವಕನೊಬ್ಬ ಅತ್ಯಾಚಾರವೆಸಗಿದ್ದರಿಂದ ಮನನೊಂದ ಯುವತಿ ಆತ್ಮಹತ್ಯೆಗೆ ಶರಣಾದ ಆಘಾತಕಾರಿ ಘಟನೆಯೊಂದು ಜಿಲ್ಲೆಯಲ್ಲಿ ನಡೆದಿರುವ ಬಗ್ಗೆ ಬೆಳಕಿಗೆ ಬಂದಿದೆ. ಈ ಘಟನೆ ಕಲಬುರಗಿ ಜಿಲ್ಲೆ ಚಿಂಚೋಳಿ ತಾಲೂಕಿನ ಗಡಿಲಿಂಗದಳ್ಳಿ ಗ್ರಾಮದಲ್ಲಿ ನಡೆದಿದೆ. ಪೂಜಾ(20) ಆತ್ಮಹತ್ಯೆಗೆ ಶರಣಾದ...

ದಲಿತರ ಓಣಿಯ ಬಾವಿಗೆ ಕ್ರಿಮಿನಾಶಕ ಸಿಂಪಡಿಸಿದ ಕಿಡಿಗೇಡಿಗಳು

11 months ago

  ಕಲಬುರಗಿ: ದಲಿತರ ಓಣಿಯಲ್ಲಿರುವ ಬಾವಿಗೆ ಕಿಡಿಗೇಡಿಗಳು ಕ್ರಿಮಿನಾಶಕ ಔಷಧಿಯನ್ನು ಸಿಂಪಡಿಸಿದ ಘಟನೆ ಕಲಬುರಗಿ ಜಿಲ್ಲೆಯ ಚೆನ್ನೂರು ಗ್ರಾಮದಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ. ಬಾವಿಗೆ ನೀರು ತರಲು ಹೋದ ವೇಳೆ ಬಾವಿಗೆ ಕ್ರಿಮಿನಾಶಕ ಸೇರಿಸಿರುವುದು ತಿಳಿದು ಬಂದಿದೆ. ವಿಷಯ ತಿಳಿದ...

ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ ಪತಿ-ಮುಂದೇನಾಯ್ತು, ಈ ಸ್ಟೋರಿ ಓದಿ

11 months ago

ಕಲಬುರ್ಗಿ: ಪತ್ನಿಯ ಪ್ರಿಯಕರನಿಗೆ ಅವಾಜ್ ಹಾಕಿದ್ದ ಪತಿಯೋರ್ವನಿಗೆ ಮಾರಣಾಂತಿಕ ಹಲ್ಲೆ ನಡೆಸಿ, ಬೆತ್ತಲೆಗೊಳಿಸಿ ರಸ್ತೆ ಮಧ್ಯೆ ಎಸೆದಿರುವ ಅಮಾನವೀಯ ಘಟನೆ ನಗರದ ಗಾಜಿಪುರ ಬಡಾವಣೆಯಲ್ಲಿ ನಡೆದಿದೆ. ಮಹೇಶ್ ಹಲ್ಲೆಗೊಳಗಾದ ಪತಿರಾಯ. ಮಹೇಶ್ ಕಳೆದ ಆರು ವರ್ಷಗಳ ಹಿಂದೆ ಶಶಿಕಲಾ ಎಂಬವನರನ್ನು ಮದುವೆಯಾಗಿದ್ದರು....