ಕಲಬುರಗಿ: ಗೂಡ್ಸ್ ರೈಲಿ (Goods Train) ನಿಂದ ಅದೃಷ್ಟವಶಾತ್ ತಾಯಿ-ಮಗ ಪಾರಾದ ಘಟನೆ ಕಲಬುರಗಿ (Kalaburagi) ನಗರದಲ್ಲಿರೋ ರೈಲ್ವೆ ನಿಲ್ದಾಣದಲ್ಲಿ ಕಳೆದ ರಾತ್ರಿ ನಡೆದಿದೆ.
Advertisement
ಪ್ಲಾಟ್‍ಫಾರಂನಿಂದ ನಡೆದುಕೊಂಡು ಮಹಿಳೆ ರೈಲು ಹಳಿ ದಾಟಲು ಮುಂದಾಗಿದ್ದರು. ಈ ವೇಳೆ ಗೂಡ್ಸ್ ರೈಲು ಬರೋದನ್ನು ನೋಡಿ ತಾಯಿಯನ್ನು ರಕ್ಷಿಸಲು ಮಗ ಮುಂದಾಗಿದ್ದಾರೆ. ಇದನ್ನೂ ಓದಿ: ಹೆಲ್ಮೆಟ್ ಧರಿಸದ ಪೊಲೀಸರನ್ನು ಸೇವೆಯಿಂದ ಅಮಾನತು ಮಾಡುತ್ತೇನೆ: SP ಹರಿರಾಂ ಶಂಕರ್ ಎಚ್ಚರಿಕೆ
Advertisement
Advertisement
ಹಳಿ ಪಕ್ಕದ ಸ್ವಲ್ಪ ಜಾಗದಲ್ಲಿ ತಾಯಿ ಮತ್ತು ಮಗ ಮಲಗಿ ಜೀವ ಉಳಿಸಿಕೊಂಡಿದ್ದಾರೆ. ಈ ಮೂಲಕ ಗೂಡ್ಸ್ ರೈಲಿನಿಂದ ಆಗುತ್ತಿದ್ದ ಭಾರೀ ಅನಾಹುತದಿಂದ ಪಾರಾಗಿದ್ದಾರೆ. ಈ ಭಯಾನಕ ದೃಶ್ಯ ಮೊಬೈಲ್ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಜೀವ ಉಳಿಯುತ್ತಿದ್ದಂತೆ ರೈಲ್ವೆ ನಿಲ್ದಾಣದಿಂದ ತಾಯಿ ಮಗ ಬೇರಡೆ ಹೋಗಿದ್ದಾರೆ.