Friday, 20th July 2018

Recent News

11 months ago

ಕರು ಮೇಲೆ ಹರಿದ ಟಾಟಾ ಸುಮೋ- ಕಂದಮ್ಮನ ಕಂಡು ತಾಯಿ ಆಕಳಿನ ಮೂಕರೋಧನೆ

ಬಳ್ಳಾರಿ: ತಾಯಿ ಹಸುವಿನ ಜೊತೆ ಮೇಯಲು ಹೋಗಿದ್ದ ಕರುವಿನ ಮೇಲೆ ಟಾಟಾ ಸುಮೋ ವಾಹನವೊಂದು ಹರಿದು ಕರು ಸ್ಥಳದಲ್ಲೇ ಮೃತಪಟ್ಟ ಘಟನೆ ಬಳ್ಳಾರಿಯಲ್ಲಿ ನಡೆದಿದೆ. ಹೊಸಪೇಟೆ ನಗರದ ಬೈಪಾಸ್ ರಸ್ತೆಯ ಸಿದ್ದಿಪ್ರಿಯಾ ಕಲ್ಯಾಣ ಮಂಟಪದ ಬಳಿ ಇಂದು ಮುಂಜಾನೆ ನಡೆದ ಅಪಘಾತದಲ್ಲಿ ಕರು ಮೃತಪಟ್ಟಿತ್ತು. ತನ್ನ ಕರುಳ ಕುಡಿ ರಕ್ತದ ಮಡುವಿನಲ್ಲಿ ಬಿದ್ದಿದ್ದನ್ನು ನೋಡಿದ ತಾಯಿ ಹಸು, ಕರುವನ್ನು ಎಬ್ಬಿಸುವ ಪ್ರಯತ್ನ ಮಾಡಿದ ದೃಶ್ಯ ಎಂತವರಿಗೂ ಕರುಳು ಕಿವುಚುವಂತಿತ್ತು. ಅಪಘಾತದಲ್ಲಿ ಕರು ಸ್ಥಳದಲ್ಲೇ ಮೃತಪಟ್ಟ ನಂತರ ತಾಯಿ […]

11 months ago

ಶೀಘ್ರದಲ್ಲೇ ಏರಿಕೆ ಆಗಲಿದೆ ಅಕ್ಕಿ ಬೆಲೆ!

ಬಳ್ಳಾರಿ: ಈಗಾಗಲೇ ದಿನಬಳಕೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಸಹ ಏರಿಕೆಯಾಗುವ ಸಾಧ್ಯತೆಯಿದೆ. ಹೌದು, ಮುಂದಿನ ದಿನಗಳಲ್ಲಿ ಅಕ್ಕಿ ಬೆಲೆ ಗಗನಕ್ಕೇರುವುದು ಅಕ್ಷರಶಃ ಖಚಿತವಾಗಿದೆ. ಯಾಕಂದ್ರೆ ಈ ಭಾರಿ ಭತ್ತದ ನಾಡು ಎಂದು ಪ್ರಸಿದ್ಧಿ ಪಡೆದಿರುವ ಬಳ್ಳಾರಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಭತ್ತದ ಬೆಳೆಗೂ ಸಹ ಬರ ಬಂದಿದೆ. ತುಂಗಭದ್ರಾ ಜಲಾಶಯದಿಂದ...

ನೂರಾರು ಮನೆಗಳಿಗೆ ನುಗ್ಗಿದ ಮೋರಿ ನೀರು – ಗಬ್ಬು ವಾಸನೆಗೆ ಕಂಗೆಟ್ಟ ಬಳ್ಳಾರಿ ಜನ

11 months ago

ಬಳ್ಳಾರಿ: ಇದು ಯಾವುದೋ ಕೆರೆಯಲ್ಲ. ಜೋರಾಗಿ ಬಂದ ಮಳೆಯ ನೀರು ಸಹ ಅಲ್ಲ. ಬದಲಾಗಿ ಒಳಚರಂಡಿ ನೀರಿನ ದೃಶ್ಯವಿದು. ಬಳ್ಳಾರಿಯ ರಾಯಲ್ ಕಾಲೋನಿಯ ನೂರಾರು ಮನೆಗಳು ಇದೀಗ ಒಳಚರಂಡಿ ನೀರಿನಲ್ಲೇ ಮುಳುಗಿ ಹೋಗಿವೆ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದ ಒಂದು ವಾರದಿಂದ ಚೇಂಬರ್...

ಮೈಸೂರು ಅರಮನೆ ಆಯ್ತು, ಈಗ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್

11 months ago

ಬಳ್ಳಾರಿ: ಮೈಸೂರು ಅರಮನೆಯಲ್ಲಿ ಅನುಮತಿ ಪಡೆಯದೇ ಫೋಟೋಶೂಟ್ ಮಾಡಿದ್ದ ಛಾಯಾಚಿತ್ರಗಾರ ವೆಂಕಿ ಈಗ ಅಂತದ್ದೆ ಕಿತಾಪತಿ ಮಾಡಿದ್ದಾರೆ. ಹೈದ್ರಾಬಾದ್ ಮೂಲದ ಫೋಟೋಗ್ರಾಫರ್ ವೆಂಕಿ ಹಂಪಿಯಲ್ಲಿ ನವಜೋಡಿಯ ಮದುವೆ ಫೋಟೋಶೂಟ್ ಮಾಡಿದ್ದಾರೆ. ವಿಶ್ವವಿಖ್ಯಾತ ಹಂಪಿಯ ಸ್ಮಾರಕಗಳ ಬಳಿ ನವ ಜೋಡಿಯ ಫೋಟೋಶೂಟ್ ಮಾಡಲಾಗಿದೆ....

ಬಳ್ಳಾರಿಯಲ್ಲಿ 150 ಅಡಿ ಎತ್ತರದಲ್ಲಿ ಹಾರಿತು ರಾಷ್ಟ್ರಧ್ವಜ

11 months ago

ಬಳ್ಳಾರಿ: 71ನೇ ಸ್ವಾತಂತ್ರೋತ್ಸವದ ಪ್ರಯುಕ್ತ ಬಳ್ಳಾರಿಯ ಗವಿಯಪ್ಪ ವೃತ್ತದಲ್ಲಿ 150 ಅಡಿ ಎತ್ತರದಲ್ಲಿ ಧ್ವಜಾರೋಹಣ ನಡೆಯಿತು. ಕೇವಲ ನಗರದಲ್ಲಿ ಲೇಔಟ್, ರಸ್ತೆ. ಪಾರ್ಕುಗಳನ್ನು ಅಭಿವೃದ್ಧಿ ಪಡಿಸುತ್ತಿದ್ದ ಬಳ್ಳಾರಿ ನಗರಾಭಿವೃದ್ಧಿ ಪ್ರಾಧಿಕಾರ ಜನರಲ್ಲಿ ದೇಶಾಭಿಮಾನ ಮೂಡಿಸುವ ಉದ್ದೇಶದಿಂದ 150 ಅಡಿ ಎತ್ತರದಲ್ಲಿ ಧ್ವಜ...

ಬ್ರಿಡ್ಜ್ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದ ಸಿಮೆಂಟ್ ಲಾರಿ

11 months ago

ಬಳ್ಳಾರಿ: ಜಿಲ್ಲೆಯ ಸಂಡೂರು ತಾಲೂಕಿನ ಯಶವಂತನಗರದ ಸುಲ್ತಾನಪುರ ಬಳಿ ಸಿಮೆಂಟ್ ಸಾಗಿಸುತ್ತಿದ್ದ ಲಾರಿಯೊಂದು ಸೇತುವೆ ಮೇಲಿಂದ ಪಲ್ಟಿಯಾಗಿ ಕೆಳಗೆ ಬಿದ್ದಿದೆ. ಸೇತುವೆ ಮೇಲಿಂದ ಲಾರಿ ಬಿದ್ದರೂ ಚಾಲಕ ಬಸವರಾಜು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಲಾರಿ ಮೇಲಿಂದ ಬಿದ್ದಿದರಿಂದ ಸಿಮೆಂಟ್ ಚೀಲಗಳೆಲ್ಲಾ ಚೆಲ್ಲಾಪಿಲ್ಲಿಯಾಗಿವೆ. ಜೆ.ಎಸ್.ಡಬ್ಲು...

ಸಂಸದ ಶ್ರೀರಾಮುಲು ಹುಟ್ಟುಹಬ್ಬಕ್ಕೆ ಗಾಲಿ ಜನಾರ್ದನ ರೆಡ್ಡಿ ಶುಭ ಕೋರಿದ್ದು ಹೀಗೆ

11 months ago

ಬಳ್ಳಾರಿ: ಇಂದು ಸಂಸದ ಶ್ರೀರಾಮುಲು ಅವರು ತಮ್ಮ 46ನೇ ಜನ್ಮ ದಿನವನ್ನು ಆಚರಿಸಿಕೊಂಡರು. ಗೆಳೆಯ ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಅವರು ಕವನಗಳ ಮುಖಾಂತರ ಫೇಸ್ ಬುಕ್ ನಲ್ಲಿ ಶ್ರೀರಾಮುಲುಗೆ ಶುಭಕೋರಿದ್ದಾರೆ. ರಾಜಕೀಯವಾಗಿ ಮತ್ತು ವೈಯಕ್ತಿಕವಾಗಿ ಹತ್ತಿರವಿರುವ ಆತ್ಮೀಯ ಗೆಳೆಯನಿಗೆ...

ಕುಡಿಯುವ ನೀರಿಗೂ ಬಂತು ಹಸಿರು ಬಣ್ಣ- ಬಳ್ಳಾರಿ ಮಂದಿಗೆ ಜೀವಜಲದ ಭೀತಿ

11 months ago

ಬಳ್ಳಾರಿ: ವೈಜ್ಞಾನಿಕವಾಗಿ ನೀರಿಗೆ ಬಣ್ಣವಿಲ್ಲ. ಆದ್ರೆ ಹೈದ್ರಾಬಾದ್ ಕರ್ನಾಟಕ ಅದರಲ್ಲೂ ಬಳ್ಳಾರಿ, ರಾಯಚೂರು, ಕೊಪ್ಪಳ ಜಿಲ್ಲೆಯ ಜೀವನಾಡಿ ತುಂಗಭದ್ರಾ ಜಲಾಶಯದ ನೀರು ಮಾತ್ರ ಹಸಿರು ಬಣ್ಣಕ್ಕೆ ತಿರುಗಿದೆ. ದಾವಣಗೆರೆ, ಶಿವಮೊಗ್ಗ ಸೇರಿದಂತೆ ಮಲೆನಾಡಿನಲ್ಲಿರುವ ಕಾರ್ಖಾನೆಗಳು ಹೊರಬಿಡುವ ತ್ಯಾಜ್ಯ ನೀರಿನಿಂದಾಗಿ ಜಲಾಶಯದ ಹಿನ್ನೀರಲ್ಲಿ...