Tuesday, 16th July 2019

1 year ago

ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ ಸೈಕೋ ಡಾಕ್ಟರ್ ಬಂಧನ

ಬೆಳಗಾವಿ: ನಗರ ಎಪಿಎಂಸಿ ಠಾಣೆ ಪೊಲೀಸರು ಕಾರ್ಯಚರಣೆ ನಡೆಸಿ ಹಲವು ದಿನಗಳಿಂದ ಕಲಬುರಗಿ ನಗರದ ವಿವಿಧ ಪ್ರದೇಶದಲ್ಲಿ ಕಾರುಗಳಿಗೆ ಬೆಂಕಿ ಹಚ್ಚುತ್ತಿದ್ದ ದುಷ್ಕರ್ಮಿಯನ್ನು ಬಂಧಿಸಿದ್ದಾರೆ. ಕಲಬುರಗಿ ನಗರದ ನಿವಾಸಿ ಆಗಿರುವ ಡಾ. ಅಮಿತ್ ಗಾಯಾಕವಾಡ್ ಬಂಧನವಾದ ವ್ಯಕ್ತಿಯಾಗಿದ್ದು, ಆರೋಪಿ ಅಮಿತ್ ಬೆಳಗಾವಿಯ ಬಿಐಂಎಸ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿದ್ದ. ಕಳೆದ ಒಂದು ವಾರದಿಂದ ನಗರದಲ್ಲಿ ಕಾರಿನ ಮೇಲೆ ಕರ್ಪೂರವಿಟ್ಟು ಹತ್ತಕ್ಕೂ ಅಧಿಕ ಕಾರುಗಳಿಗೆ ಬೆಂಕಿ ಹಚ್ಚಿದ್ದ. ಘಟನೆಯನ್ನು ಗಂಭೀರವಾಗಿ ಪರಿಣಿಸಿದ ಪೊಲೀಸರು ಆರೋಪಿಯ ಪತ್ತೆ ಕಾರ್ಯಾಚರಣೆ ನಡೆಸಿದ್ದರು. […]

1 year ago

ಶಾಲಾ ವಾಹನ, ಬೈಕ್ ಮುಖಾಮುಖಿ ಡಿಕ್ಕಿ – ನಾಲ್ವರು ದುರ್ಮರಣ

ಚಿಕ್ಕೋಡಿ: ಖಾಸಗಿ ಶಾಲಾ ವಾಹನ ಮತ್ತು ಬೈಕ್ ಮುಖಾಮುಖಿ ಡಿಕ್ಕಿಯಾದ ಪರಿಣಾಮ ನಾಲ್ವರು ಸಾವನ್ನಪ್ಪಿರುವ ಘಟನೆ ಬೆಳಗಾವಿ ಜಿಲ್ಲೆ ಅಥಣಿ ತಾಲೂಕಿನ ಖೋತನಟ್ಟಿ ಕ್ರಾಸ್ ಬಳಿ ನಡೆದಿದೆ. ಐಗಳಿ ಗ್ರಾಮದ ಮಾಣಿಕ್ಯ ಪ್ರಭು ಶಾಲಾ ವಾಹನದಲ್ಲಿ ಖೋತನಟ್ಟಿ ಗ್ರಾಮದಿಂದ ಮಕ್ಕಳನ್ನು ಕರೆ ತರುವಾಗ ಸಂಕೇಶ್ವರ-ಜೇವರಗಿ ರಾಜ್ಯ ಹೆದ್ದಾರಿಯಲ್ಲಿ ಈ ಅಪಘಾತ ಸಂಭವಿಸಿದೆ. ಬೈಕಿನಲ್ಲಿ ಮೂವರು ಖೋತನಟ್ಟಿಯಿಂದ...

ಟ್ರ್ಯಾಕ್ಟರ್, ಕ್ರೂಜರ್ ಮುಖಾಮುಖಿ ಡಿಕ್ಕಿ- ಪಂದ್ಯ ಮುಗಿಸಿ ಮನೆಗೆ ಹಿಂದಿರುಗ್ತಿದ್ದ 6 ಕುಸ್ತಿಪಟುಗಳ ದುರ್ಮರಣ

2 years ago

ಚಿಕ್ಕೋಡಿ: ಟ್ರ್ಯಾಕ್ಟರ್ ಮತ್ತು ಕ್ರೂಜರ್ ವಾಹನ ಮುಖಾಮುಖಿ ಡಿಕ್ಕಿಯಾದ ಪರಿಣಾಮ ಸ್ಥಳದಲ್ಲಿಯೇ 6 ಮಂದಿ ಕುಸ್ತಿಪಟುಗಳು ಸಾವನ್ನಪ್ಪಿರುವ ಘಟನೆ ಮಹಾರಾಷ್ಟ್ರದ ಸಾಂಗ್ಲಿ ಜಿಲ್ಲೆಯ ಕಡೆಗಾಂವ ತಾಲೂಕಿನ ವಾಂಗಿ ಗ್ರಾಮ ಬಳಿ ನಡೆದಿದೆ. ಮೃತ ಕುಸ್ತಿಪಟುಗಳನ್ನು ಆಕಾಶ ದೇಸಾಯಿ, ವಿಜಯ ಪಾಟೀಲ್, ಸೌರಭ...

ಸಾಲ ಮಾಡಿ ಕಟ್ಟಿದ ಮನೆಗೆ ಊರೆಲ್ಲಾ ಮಾತು – ಚಿನ್ನ ಸಿಕ್ಕಿದೆ ಅಂತಾ ಯುವಕನ ಕಿಡ್ನ್ಯಾಪ್

2 years ago

ಬೆಳಗಾವಿ: ಸಾಲ ಮಾಡಿ ಮನೆ ಕಟ್ಟಿದ ಮನೆಗೆ ಊರಲ್ಲಿ ಚಿನ್ನದ ಬಿಸ್ಕೇಟ್ ಸಿಕ್ಕಿದೆ ಎಂದು ಯುವಕನೋರ್ವನನ್ನು ಅಪಹರಿಸಿರುವ ಘಟನೆ ಬೆಳಗಾವಿ ತಾಲೂಕಿನ ಸೂಳೇಬಾವಿ ಗ್ರಾಮದಲ್ಲಿ ನಡೆದಿದೆ. 23 ವರ್ಷದ ನಾಗರಾಜ್ ಫರೀಟ್ ಎಂಬ ಯುವಕ ವೃತ್ತಿಯಲ್ಲಿ ಲಾಂಡ್ರಿಮನ್. ಸಾಲಸೋಲ ಮಾಡಿ ತನ್ನ...

ವಿಚಾರಣೆಗೆಂದು ಕರೆದೊಯ್ದು ಅರೆಬೆತ್ತಲೆ ಮಾಡಿ ಥಳಿಸಿದ ಲೇಡಿ ಪಿಎಸ್‍ಐ

2 years ago

ಬೆಳಗಾವಿ: ವಿಚಾರಣೆ ಹೆಸರಿನಲ್ಲಿ ಲೇಡಿ ಪಿಎಸ್‍ಐವೊಬ್ಬರು ಹೆಸ್ಕಾಂ ಲೈನ್ ಮನ್ ನನ್ನು ಅರೆಬೆತ್ತಲೆ ಮಾಡಿ ಥಳಿಸಿರುವ ಘಟನೆ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರದ ಬಸವೇಶ್ವರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ವಿದ್ಯುತ್ ತಂತಿ ತಗುಲಿ ಕಂಬದ ಮೇಲಿಂದ ಬಿದ್ದು ಲೈನ್‍ಮನ್ ಸಾವನ್ನಪ್ಪಿದ್ದ ಪ್ರಕರಣಕ್ಕೆ...

ಚಿಕ್ಕ ಮಕ್ಕಳಿಗೆ ಬೈಕ್ ನೀಡುವ ಮುನ್ನ ಈ ಸ್ಟೋರಿ ಓದಿ

2 years ago

ಚಿಕ್ಕೋಡಿ: ಟಿವಿಎಸ್ ಎಕ್ಸೆಲ್ ಬೈಕ್ ಓಡಿಸುತ್ತಿದ್ದ ಬಾಲಕಿ ಆಯತಪ್ಪಿ ಟ್ರಾಕ್ಟರ್ ಗೆ ಡಿಕ್ಕಿ ಒಡೆದು ಸ್ಥಳದಲ್ಲೇ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಸದಲಗಾ ಪಟ್ಟಣದಲ್ಲಿ ನಡೆದಿದೆ. 11 ವರ್ಷದ ನಮ್ರತಾ ಭೋಜೆ ಮೃತಪಟ್ಟ ಬಾಲಕಿಯಾಗಿದ್ದು, ಬೈಕ್ ಚಾಲನೆ...

ಮುಂಬೈನಲ್ಲಿ ಉಳಿಯುವ ಭರವಸೆ ಕೊಟ್ಟಿಲ್ಲ- ಬೆಳಗಾವಿಯಲ್ಲಿ ಇರಾನ್ ಕಂದಮ್ಮನ ಓಪನ್ ಹಾರ್ಟ್ ಆಪರೇಷನ್ ಸಕ್ಸಸ್

2 years ago

ಬೆಳಗಾವಿ: ಜಿಲ್ಲೆಯ ವೈದ್ಯರು 6 ತಿಂಗಳ ಪುಟ್ಟ ಮಗುವಿಗೆ ಯಶಸ್ವಿ ತೆರೆದ ಹೃದಯ ಶಸ್ತ್ರ ಚಿಕಿತ್ಸೆ ಮಾಡಿ ಪ್ರಶಂಸೆಗೆ ಪಾತ್ರವಾಗಿದ್ದಾರೆ. ಇರಾನ್ ಮೂಲದ ಜೂಲ್ ಪೇಕಾರ್ ಪುತ್ರಿ ಮಸರ್ ಈ ದೊಡ್ಡ ಶಸ್ತ್ರ ಚಿಕಿತ್ಸೆಗೆ ಒಳಗಾದ ಬೇಬಿ. ಬೆಳಗಾವಿಯ ಬಿಎಚ್‍ಆರ್ ಲೇಕ್ಯೂವೆಲ್...

ಎಳನೀರು, ಗುಲಾಬಿ ಗಿಡಗಳನ್ನು ಮಾರಾಟ ಮಾಡಿ ಜೀವನ ನಡೆಸ್ತಿರೋ ಮಹಿಳೆಗೆ ಬೇಕಿದೆ ಸೂರು

2 years ago

ಬೆಳಗಾವಿ: ಜಿಲ್ಲೆಯ ಹುಕ್ಕೇರಿ ತಾಲೂಕಿನ ಹಿಡಕಲ್ ಗ್ರಾಮದಲ್ಲಿ ಎಳನೀರು ಹಾಗೂ ಗುಲಾಬಿ ಹೂಗಳ ಸಸಿಗಳನ್ನು ಮಾರಾಟ ಮಾಡುತ್ತಿರುವ ಈಕೆಯ ಹೆಸರು ಮಹಾದೇವಿ. ಮಳೆಗಾಲ ಬಂತೆಂದರೆ ಫಾರ್ಮ್ ನಲ್ಲಿ ಬೆಳೆದ ಬಗೆಬಗೆಯ ಹೂವಿನ ಗಿಡಗಳನ್ನು ಮಹಾದೇವಿಯವರು ದೂರದ ಊರುಗಳಾದ ಮಹಾರಾಷ್ಟ್ರದ ಕೋಲ್ಹಾಪುರ, ನಿಪ್ಪಾಣಿ...