BelgaumDistrictsKarnatakaLatestMain Post

ವಿಚಾರಣೆಗಾಗಿ ಪೊಲೀಸ್ ಠಾಣೆಗೆ ಹಾಜರಾದ ನವ್ಯಶ್ರೀ

Advertisements

ಬೆಳಗಾವಿ: ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಮತ್ತು ಸಾಮಾಜಿಕ ಕಾರ್ಯಕರ್ತೆ ದೂರು ಪ್ರತಿದೂರು ನೀಡಿದ ಹಿನ್ನೆಲೆ ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಗೆ ನವ್ಯಶ್ರೀ ರಾವ್ ಆಗಮಿಸಿ ಪೊಲೀಸರ ತನಿಖೆಗೆ ಹಾಜರಾಗಿದ್ದಾರೆ.

ಕಳೆದ ಹಲವು ದಿನಗಳ ಹಿಂದೆ ಚನ್ನಪಟ್ಟಣ ಮೂಲದ ಸಾಮಾಜಿಕ ಕಾರ್ಯಕರ್ತೆ ನವ್ಯಶ್ರೀ ರಾವ್ ವಿರುದ್ಧ ಬೆಳಗಾವಿ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕ ರಾಜಕುಮಾರ್ ಟಾಕಳೆ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ (ಜುಲೈ 18ರಂದು) ದೂರು ನೀಡಿದ್ದರು. ದೂರಿನಲ್ಲಿ ಸುಳ್ಳು ಅತ್ಯಾಚಾರ ಕೇಸ್ ದಾಖಲಿಸುವುದಾಗಿ ಬೆದರಿಕೆ, ಸುಲಿಗೆ ಬ್ಲ್ಯಾಕ್ ಮೇಲ್ ಉಲ್ಲೇಖಿಸಿದ್ದರು. ಇದಾದ ಬಳಿಕ ಕಳೆದ ಶನಿವಾರ (ಜು.23) ರಂದು ನವ್ಯಶ್ರೀ, ರಾಜಕುಮಾರ್ ಟಾಕಳೆ ವಿರುದ್ಧ ದೂರು ನೀಡಿದ್ದರು. ನವ್ಯಶ್ರೀ ದೂರಿನಲ್ಲಿ (376) ಅತ್ಯಾಚಾರ, (366) ಕಿಡ್ನಾಪ್, (312) ಗರ್ಭಪಾತ ಮಾಡಿಸಿದ್ದು, (420) ಮೋಸ, (354) ಮಹಿಳೆ ಮೇಲೆ ಹಲ್ಲೆ, (504) ಅವಾಚ್ಯವಾಗಿ ನಿಂದಿಸುವುದು, (506) ಜೀವ ಬೆದರಿಕೆ, (509) ಗೌರವಕ್ಕೆ ಧಕ್ಕೆ ತರುವುದು ಹಾಗೂ (IT act 66E) ಖಾಸಗಿತನಕ್ಕೆ ಧಕೆ ವಿಚಾರದಡಿಯಲ್ಲಿ, (67A) ಲೈಂಗಿಕ ಪ್ರಚೋದನಕಾರಿ ವೀಡಿಯೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿರುವ ಬಗ್ಗೆ ಸೆಕ್ಷನ್ ಹಾಗೂ ಆಕ್ಟ್‌ ಗಳನ್ನು ಹಾಕಿ ಎಫ್‍ಐಆರ್ ದಾಖಲಾಗಿತ್ತು. ಇದನ್ನೂ ಓದಿ: ರಾಜಕುಮಾರ್ ಟಾಕಳೆ ವಿರುದ್ಧ 12 ಪುಟಗಳ ದೂರು ದಾಖಲಿಸಿದ ನವ್ಯಶ್ರೀ

ಇದಕ್ಕೂ ಮುನ್ನ ಚನ್ನಪಟ್ಟಣ ಮೂಲದ ನವ್ಯಶ್ರೀ ಆರ್.ರಾವ್ ಎನ್ನಲಾಗಿರುವ ಅಶ್ಲೀಲ ವೀಡಿಯೋ ವೈರಲ್ ಆಗಿದ್ದವು. ಸಾಮಾಜಿಕ ಜಾಲತಾಣದಲ್ಲಿ ಅಶ್ಲೀಲ ವೀಡಿಯೋ ವೈರಲ್ ಬೆನ್ನಲ್ಲೇ ನವ್ಯಶ್ರೀ ವಿರುದ್ಧ ರಾಜಕುಮಾರ್ ಟಾಕಳೆ ದೂರು ನೀಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಇಂದು ಪೊಲೀಸರು ನವ್ಯಶ್ರೀಯನ್ನು ವಿಚಾರಣೆ ನಡೆಸಲಿದ್ದಾರೆ. ತೋಟಗಾರಿಕೆ ಇಲಾಖೆ ಅಧಿಕಾರಿ ರಾಜಕುಮಾರ್ ಟಾಕಳೆ ಯಾವಾಗ ಪರಿಚಯ, ಎಲ್ಲೆಲ್ಲಿ ಭೇಟಿ ಆಗಿದ್ದೀರಿ. ಆತನಿಂದ ಏನೆಲ್ಲಾ ಮೋಸ ಆಗಿದೆ ಎಂಬುವುದರ ಜೊತೆಗೆ ಟಾಕಳೆಗೆ 50 ಲಕ್ಷ ರೂ. ಹಣದ ಬೇಡಿಕೆ ಇಟ್ಟಿರುವ ಬಗ್ಗೆ ಪೊಲೀಸರು ಪ್ರಶ್ನೆಗಳನ್ನು ಕೇಳಲಿದ್ದಾರೆ. ಬಳಿಕ ನವ್ಯಶ್ರೀ ಮೆಡಿಕಲ್ ಚೆಕ್ ಅಪ್ ಮಾಡುವ ಸಾಧ್ಯತೆ ಇದೆ. ಇದನ್ನೂ ಓದಿ: ಬೆಂಗಳೂರು ಹೋಟೆಲ್ ಬಳಿ ವಿಧ್ವಂಸಕ ಕೃತ್ಯಕ್ಕೆ ಸಂಚು – ಉಗ್ರರಿಗೆ ಸಿಲಿಕಾನ್ ಸಿಟಿ ಸ್ಲೀಪರ್ ಸೇಲ್?

Live Tv

Leave a Reply

Your email address will not be published.

Back to top button