Thursday, 19th July 2018

Recent News

6 months ago

ಎರಡೆರಡು ಮತಪಟ್ಟಿಯಲ್ಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಹೆಸರು

ಬಾಗಲಕೋಟೆ: ಹುನಗುಂದ ಹಾಲಿ ಶಾಸಕ ವಿಜಯಾನಂದ ಕಾಶಪ್ಪನವರ್ ಅವರ ಹೆಸರು ಎರಡು ಮತದಾರರ ಪಟ್ಟಿಯಲ್ಲಿರುವ ವಿಷಯ ಬೆಳಕಿಗೆ ಬಂದಿದೆ. ಹುನಗುಂದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್ ದಾಖಲೆ ಸಮೇತ ಇಂತಹದ್ದೊಂದು ಗಂಭೀರ ಆರೋಪ ಮಾಡಿದ್ದಾರೆ. ಬಾಗಲಕೋಟೆಯಲ್ಲಿ ಮಾತನಾಡಿದ ಮಾಜಿ ಶಾಸಕ ದೊಡ್ಡನಗೌಡ ಪಾಟಿಲ್, ಹುನಗುಂದ ಕ್ಷೇತ್ರದ ಶಾಸಕ ವಿಜಯಾನಂದ ಕಾಶಪ್ಪನವರ್ ತಮ್ಮ ಹುಟ್ಟೂರು ಹುನಗುಂದ ತಾಲೂಕಿನ ಹಾವರಗಿ ಗ್ರಾಮದ ಪತದಾರರ ಪಟ್ಟಿಯಲ್ಲಿ ಹೆಸರನ್ನು ಹೊಂದಿದ್ದಾರಲ್ಲದೇ, ಇಳಕಲ್ ನಗರದ ವಾರ್ಡ್ ನಂಬರ್ 1ರ ಮತದಾರರ ಪಟ್ಟಿಯಲ್ಲಿಯೂ ಹೆಸರನ್ನು ಹೊಂದಿದ್ದಾರೆ. […]

6 months ago

ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಮನನೊಂದು ವಿದ್ಯಾರ್ಥಿನಿ ಆತ್ಮಹತ್ಯೆ

ಬಾಗಲಕೋಟೆ: ಸೆಮಿಸ್ಟರ್ ಪರೀಕ್ಷೆಯಲ್ಲಿ ಫೇಲ್ ಆಗಿದ್ದಕ್ಕೆ ಕಾಲೇಜ್ ವಿದ್ಯಾರ್ಥಿನಿಯೋರ್ವಳು ಹಾಸ್ಟೆಲ್ ರೂಮ್ ನ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರೋ ಘಟನೆ ಬಾಗಲಕೋಟೆಯಲ್ಲಿ ನಡೆದಿದೆ. ಮೃತ ವಿದ್ಯಾರ್ಥಿನಿಯನ್ನು ನಗರದ ಬಸವೇಶ್ವರ ಸೈನ್ಸ್ ಕಾಲೇಜ್ ನಲ್ಲಿ ಬಿಎಸ್ಸಿ ಪ್ರಥಮ ವರ್ಷದಲ್ಲಿ ವ್ಯಾಸಂಗ ಮಾಡುತ್ತಿದ್ದ ಸೌಮ್ಯ ಆವಟಿ ಎಂದು ಗುರುತಿಸಲಾಗಿದೆ. ಬುಧವಾರವಷ್ಟೇ ಮೊದಲ ಸೆಮಿಸ್ಟರ್ ನ ರಿಸಲ್ಟ್ ಬಂದಿದ್ದು,...

ಲೋಕ ಕಲ್ಯಾಣಕ್ಕಾಗಿ ಅನ್ನ ಆಹಾರ ಬಿಟ್ಟು 24 ದಿನಗಳ ಕಾಲ ಜಪಕ್ಕೆ ಕುಳಿತ ಖಾವಿಧಾರಿ ಮಾತೆ!

6 months ago

ಬಾಗಲಕೋಟೆ: ಲೋಕ ಕಲ್ಯಾಣಾರ್ಥವಾಗಿ ಖಾವಿಧಾರಿ ಮಾತೆಯೊಬ್ಬರು ಇಲಕಲ್ ಪಟ್ಟಣದ ಹೊರವಲಯದಲ್ಲಿ ನಿರಂತರ 24 ದಿನಗಳ ಕಾಲ ಅನ್ನ ಆಹಾರ ಬಿಟ್ಟು ನಿರ್ಜನ ಪ್ರದೇಶದಲ್ಲಿ ಜಪಕ್ಕೆ ಕುಳಿತಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಗುಗಳ್ ಗ್ರಾಮದ ಮಹಾದೇವಮ್ಮ ಇಲಕಲ್ ಪಟ್ಟಣಕ್ಕೆ ಬಂದ...

ಅವರಪ್ಪನ ಮೇಲೆ ಆಣೆ ಮಾಡೋದು ಬಿಟ್ಟು ನಮ್ಮಪ್ಪನ ಮೇಲೆ ಆಣೆ ಮಾಡೋದ್ಯಾಕೆ: ಸಿಎಂ ಗೆ ಎಚ್‍ಡಿಕೆ ಟಾಂಗ್

6 months ago

ಬಾಗಲಕೋಟೆ: ಅವರಪ್ಪನಾಣೆ ಎಚ್‍ಡಿಕೆ ಸಿಎಂ ಆಗೋದಿಲ್ಲ ಎಂದಿದ್ದ ಸಿದ್ದರಾಮಯ್ಯ ಅವರ ಹೇಳಿಕೆಗೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಟಾಂಗ್ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರು ಬೇಕಿದ್ದರೆ ಅವರಪ್ಪನ ಮೇಲೆ ಆಣೆ ಮಾಡಿಕೊಳ್ಳಲಿ. ಅದು ಬಿಟ್ಟು ನಮ್ಮಪ್ಪನ ಮೇಲೆ ಆಣೆ ಮಾಡುವುದು ಏಕೆ? ಮೇಲಾಗಿ...

ಸಿಎಂ ಈಗ ಪ್ರವಾಸದಲ್ಲಿದ್ದು, ಬಂದ ಮೇಲೆ ಪಿಎಫ್‍ಐ ಬ್ಯಾನ್ ಚರ್ಚೆ ಮಾಡ್ತೀವಿ: ರಾಮಲಿಂಗಾ ರೆಡ್ಡಿ

7 months ago

ಬಾಗಲಕೋಟೆ: ಪಿಎಫ್‍ಐ ಸಂಘಟನೆಯನ್ನು ಬ್ಯಾನ್ ಮಾಡುವಂತೆ ಬಿಜೆಪಿಯವರು ಆಗ್ರಹ ಮಾಡುತ್ತಿದ್ದಾರೆ. ಆದ್ರೆ ಸದ್ಯ ಪಿಎಫ್‍ಐ ಸೇರಿದಂತೆ ಯಾವುದೇ ಸಂಘಟನೆಗಳನ್ನು ಬ್ಯಾನ್ ಮಾಡುವ ಪ್ರಸ್ತಾಪವಿಲ್ಲ ಎಂದು ಗೃಹ ಸಚಿವ ರಾಮಲಿಂಗಾ ರೆಡ್ಡಿ ಹೇಳಿದ್ದಾರೆ. ನಗರದಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಸದ್ಯ ಮುಖ್ಯಮಂತ್ರಿ...

ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಚಿನ್ನದ ಪದಕ ಪಡೆದ 16ರ ಮುಸ್ಲಿಂ ಬಾಲಕಿ

7 months ago

ಬಾಗಲಕೋಟೆ: ದೈಹಿಕ ಸಮಸ್ಯೆ ನೀಗಿಸಿಕೊಳ್ಳಲು ಆರಂಭಿಸಿದ ಯೋಗವೇ ಈಗ ಹದಿನಾರರ ಹರೆಯದ ಮುಸ್ಲಿಂ ಬಾಲಕಿಯನ್ನು ಇಡೀ ಊರೇ ಪ್ರಶಂಸಿಸುವಂತೆ ಮಾಡಿದೆ. ರಾಷ್ಟ್ರಮಟ್ಟದ ಯೋಗ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಳಿಸಿ ಯೋಗ ಸಾಧನೆಗೆ ರಾಷ್ಟ್ರ ಮಟ್ಟದ ಚಿನ್ನದ ಪದಕ ಪಡೆದು ಕೊಂಡಿದ್ದಾಳೆ. ಜಿಲ್ಲೆಯ...

ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದಾಗ ಬೈಕ್ ಡಿಕ್ಕಿ: ಭಕ್ತ ಸಾವು

7 months ago

ಬಾಗಲಕೋಟೆ: ಬಾದಾಮಿ ಜಾತ್ರೆಗೆ ಪಾದಯಾತ್ರೆ ತೆರಳುತ್ತಿದ್ದ ವೇಳೆ ಬೈಕ್ ಡಿಕ್ಕಿಯಾಗಿ ಭಕ್ತರೊಬ್ಬರು ಸಾವನ್ನಪ್ಪಿದ ಘಟನೆ ಬಾಗಲಕೋಟೆ ಜಿಲ್ಲೆಯ ಹಲಕುರ್ಕಿ ಗ್ರಾಮದ ಬಳಿ ನಡೆದಿದೆ. ಕೆರೂರ ಪಟ್ಟಣದ ನಿವಾಸಿ ರಾಜು ಡೊಳ್ಳಿ(38) ಮೃತ ವ್ಯಕ್ತಿ. ರಾಜು ಸ್ನೇಹಿತರೊಂದಿಗೆ ಇಂದು ನಡೆಯಲಿರೋ ಬಾದಾಮಿಯ ಬನಶಂಕರಿ...

‘ನಮ್ಮ ಕಾಂಗ್ರೆಸ್’ ಪಕ್ಷದ ಉದ್ಘಾಟನಾ ಸಮಾರಂಭಕ್ಕೆ ಜನರನ್ನು ಸೆಳೆಯಲು ಯುವತಿಯರ ಆಂಧ್ರ ಸ್ಟೈಲ್ ಡಾನ್ಸ್

7 months ago

ಬಾಗಲಕೋಟೆ : ಜಿಲ್ಲೆಯ ಹುನಗುಂದ ತಾಲೂಕಿನ ಕೂಡಲಸಂಗಮದಲ್ಲಿ ಇಂದು `ನಮ್ಮ ಕಾಂಗ್ರೆಸ್ ಪಕ್ಷ’ ಉದಯವಾಯಿತು. ಮಾಜಿ ಸಚಿವ ವರ್ತೂರು ಪ್ರಕಾಶ್ ಇಂದು ನಮ್ಮ ಕಾಂಗ್ರೆಸ್ ಪಕ್ಷಕ್ಕೆ ಚಾಲನೆ ನೀಡಿದರು. ಆದರೆ ಜಿಲ್ಲೆಯ ಕೂಡಲಸಂಗಮದಲ್ಲಿ ಬಸ್ ನಿಲ್ದಾಣದ ಬಳಿ ಆಯೋಜಿಸಲಾಗಿದ್ದ ಉದ್ಘಾಟನಾ ಸಮಾರಂಭಕ್ಕೆ...