BagalkotDistrictsKarnatakaLatestLeading NewsMain Post

ಬಾಗಲಕೋಟೆ ಜಿಲ್ಲೆಗೆ ಮತ್ತೊಂದು ಹೆಮ್ಮೆ- ಮೋದಿಯ SPG ಭದ್ರತಾ ತಂಡಕ್ಕೆ ಮುಧೋಳ ಶ್ವಾನ ಸೇರ್ಪಡೆ

ಬಾಗಲಕೋಟೆ: ಪ್ರಧಾನಿ ನರೇಂದ್ರ ಮೋದಿಯವರ ವಿಶೇಷ ಭದ್ರತಾ ದಳ (ಎಸ್‍ಪಿಜಿ) ತಂಡಕ್ಕೆ ಬಾಗಲಕೋಟೆಯ ಮುಧೋಳ ಶ್ವಾನ ಸೇರ್ಪಡೆಗೊಂಡಿದೆ. ಇದು ಜಿಲ್ಲೆಗೆ ಮತ್ತೊಂದು ಹೆಮ್ಮೆಯ ಗರಿಯಾಗಿದೆ.

ಹೌದು. 2 ತಿಂಗಳ ಎರಡು ಗಂಡು ಮುಧೋಳ ಶ್ವಾನಗಳನ್ನ ಎಸ್‍ಪಿಜಿ ಪಡೆಯ ಅಧಿಕಾರಿಗಳು ಕೊಂಡು ಹೋಗಿದ್ದಾರೆ. ಇವುಗಳನ್ನು ಬಾಗಲಕೋಟೆ ಜಿಲ್ಲೆ ಮುಧೋಳ ತಾಲೂಕಿನ ತಿಮ್ಮಾಪುರ ಬಳಿ ಇರುವ ಮುಧೋಳ ಶ್ವಾನ ಸಂಶೋಧನಾ ಕೇಂದ್ರದಿಂದ ಹಸ್ತಾಂತರ ಮಾಡಲಾಗಿದೆ.

ಏಪ್ರಿಲ್ 25 ರಂದು ಎರಡು ಶ್ವಾನ ಹಸ್ತಾಂತರಿಸಲಾಗಿದೆ. ಪ್ರಧಾನಿ ಎಸ್‍ಪಿಜಿ ಭದ್ರತಾ ಪಡೆಯಿಂದ ವೆಟರ್ನರಿ ವೈದ್ಯ ಡಾ. ಬಿ.ಎಂ ಪಂಚಬುದ್ದೆ ಹಾಗೂ ಇಬ್ಬರು ಶ್ವಾನ ತರಬೇತುದಾರರು ಮುಧೋಳ ಶ್ವಾನ ಸಂವರ್ಧನಾ ಕೇಂದ್ರಕ್ಕೆ ಬಂದಿದ್ದರು. ಧಾರವಾಡ ಹಾಗೂ ಬಾಗಲಕೋಟೆ ಎಸ್‍ಪಿ, ಜಿಲ್ಲಾಡಳಿತ ಸಂಪರ್ಕದ ಮೂಲಕ ಅಧಿಕಾರಿಗಳು ಬಂದಿದ್ದರು. ಇದನ್ನೂ ಓದಿ: ಸಿದ್ದರಾಮಯ್ಯ- ಶ್ರೀರಾಮುಲು ಒಳ ಒಪ್ಪಂದ ನನಗೆ ಗೊತ್ತಿಲ್ಲ: ಡಿ.ಕೆ ಶಿವಕುಮಾರ್

ಸಂವರ್ಧನಾ ಕೇಂದ್ರದಲ್ಲಿ ಒಂದು ತಾಸು ಶ್ವಾನಗಳ ಪರೀಕ್ಷೆ ನಡೆಸಿದರು. ಆರೋಗ್ಯ, ಶ್ವಾನಗಳ ಲಕ್ಷಣ, ಓಟ, ಸಮಯಪ್ರಜ್ಞೆ, ಬುದ್ಧಿ ಹಾಗೂ ಚಾಕಚಕ್ಯತೆ ಬಗ್ಗೆ ತಿಳಿದುಕೊಂಡರು. ಬಳಿಕ ಶ್ವಾನಗಳನ್ನು ಕರೆದುಕೊಂಡು ಹೋಗಿದ್ದಾರೆ. ಎಸ್‍ಪಿಜಿ ಭದ್ರತಾ ಪಡೆಯಲ್ಲಿ ತರಬೇತಿ ನೀಡಿ ಬಳಿಕ ಅವುಗಳನ್ನು ಭದ್ರತೆಗೆ ಸೇರಿಸಿಕೊಳ್ಳಲಾಗುತ್ತದೆ.

ಭದ್ರತಾ ದೃಷ್ಟಿಯಿಂದ ಇಷ್ಟು ದಿನ ಗೌಪ್ಯವಾಗಿದ್ದ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ. ಹಿಂದೊಮ್ಮೆ ಮನ್ ಕಿ ಬಾತ್ ನಲ್ಲೂ ಮುಧೋಳ ಶ್ವಾನದ ಬಗ್ಗೆ ಮೋದಿ ಮಾತಾಡಿದ್ದರು. ಈಗಾಗಲೇ ಭಾರತೀಯ ಸೇನೆ, ಸಿಆರ್‍ಪಿಎಫ್, ಐಡಿಬಿಪಿ, ವಾಯುಸೇನೆಯಲ್ಲೂ ಮುಧೋಳ ಶ್ವಾನಗಳಿವೆ ಎಂದು ಶ್ವಾನ ಸಂಶೋಧನಾ ಕೇಂದ್ರದ ಸಹಾಯಕ ಪ್ರಾಧ್ಯಾಪಕ ಹಾಗೂ ಮುಖ್ಯಸ್ಥ ಸುಶಾಂತ್ ಹಂಡಗೆ ಹೇಳಿದ್ದಾರೆ.

Live Tv

Leave a Reply

Your email address will not be published.

Back to top button