ಕೊಬ್ಬರಿ, ಮಾವಿನಕಾಯಿ, ಬೆಳ್ಳುಳ್ಳಿ, ಟೊಮೆಟೊ ಚಟ್ನಿ ಎಲ್ಲರ ಮನೆಯಲ್ಲಿ ತಯಾರಿಸುತ್ತೇವೆ. ಆದರೆ ಇವತ್ತು ನಾವು ಖಾರ ಮತ್ತು ರುಚಿಯಾಗಿರುವ ಕ್ಯಾರೆಟ್ ಚಟ್ನಿ ಮಾಡುವುದರ ಕುರಿತು ತಿಳಿಯೋಣ. ಈ ಮಿಶ್ರಣವನ್ನು ಶುದ್ಧವಾದ ಗಾಜಿನ ಡಬ್ಬದಲ್ಲಿ ಹಾಕಿ ಮುಚ್ಚಳವನ್ನು ಗಟ್ಟಿಯಾಗಿ ಮುಚ್ಚಿ 2 ದಿನಗಳವರೆಗೆ ಹಾಗೇ ಇಡಬಹುದಾಗಿದೆ, ಹಾಗಾದ್ರೆ ಬನ್ನಿ ಈ ಚಟ್ನಿಯನ್ನು ಹೇಗೆ ಮಾಡುವುದುಯ ಎನ್ನುವುದನ್ನು ಇಲ್ಲಿ ಬೇಕಾಗುವ ಸಾಮಗ್ರಿಗಳ ಪಟ್ಟಿ ಜೊತೆಗೆ ವಿವರಿಸಲಾಗಿದೆ. ಇದನ್ನೂ ಓದಿ: ಪಡಿತರ ಅಕ್ಕಿ ಅಕ್ರಮವಾಗಿ ಗುಜರಾತ್‍ಗೆ ಸಾಗಣೆ- 8.10 ಲಕ್ಷದ ಅಕ್ಕಿ ವಶಕ್ಕೆ
Advertisement
ಬೇಕಾಗುವ ಸಾಮಗ್ರಿಗಳು:
* ಕ್ಯಾರೆಟ್ 3-4
* ಕೆಂಪು ಮೆಣಸಿನ ಪುಡಿ- 2ಚಮಚ
* ಕರಿಮೆಣಸಿನ ಪುಡಿ- 1 ಚಮಚ
* ಶುಂಠಿ- ಸ್ವಲ್ಪ
* ಬೆಳ್ಳುಳ್ಳಿ-2
* ಬಾದಾಮಿ-2
* ಗಸೆಗಸೆ- 2 ಚಮಚ
* ಏಲಕ್ಕಿ-3
* ವಿನಿಗರ್- 1 ಚಮಚ
* ಚಮಚ ಸಕ್ಕರೆ- 1 ಚಮಚ
Advertisement
Advertisement
ಮಾಡುವ ವಿಧಾನ:
Advertisement
* ಚಿಕ್ಕ ತುಂಡಾಗಳಾಗಿ ಕ್ಯಾರೆಟ್‍ಗಳನ್ನು ಕತ್ತರಿಸಿ ಅದಕ್ಕೆ ಬೆಳ್ಳುಳ್ಳಿ ಮತ್ತು ಶುಂಠಿ, ಮೆಣಸಿನ ಪುಡಿ, ಕರಿಮೆಣಸಿನ ಪುಡಿ ಸೇರಿಸಬೇಕು.
* ಈ ಮಿಶ್ರಣಕ್ಕೆ ಒಂದು ಕಪ್ ನೀರು ಹಾಕಿ ಕ್ಯಾರೆಟ್ ಬೆಂದು ಆ ಮಿಶ್ರಣದಲ್ಲಿ ನೀರು ಬತ್ತಿ ಗಟ್ಟಿ ಮಿಶ್ರಣವಾಗುವವರೆಗೆ ಬೇಯಿಸಬೇಕು.
* ಈ ಮಿಶ್ರಣವನ್ನು ಸೌಟ್ ನಿಂದ ಕುಟ್ಟುತ್ತಾ ಪೇಸ್ಟ್ ರೀತಿ ಮಾಡಬೇಕು.
* ಈಗ ಆ ಮಿಶ್ರಣಕ್ಕೆ ವಿನಿಗರ್, ಸಕ್ಕರೆ, ಉಪ್ಪು, ಗಸೆಗಸೆ, ಬಾದಾಮಿ, ಗೋಡಂಬಿ, ಏಲಕ್ಕಿ ಹಾಕಿ ಮಿಶ್ರಣ ಗಟ್ಟಿಯಾಗುವವರೆಗೆ ಬೇಯಿಸಿ. ಇದನ್ನೂ ಓದಿ: ಅನಧಿಕೃತ ರೆಸಾರ್ಟ್ ತೆರವುಗೊಳಿಸದಿದ್ದರೆ ನೀವೇ ಹೊಣೆ- 4 ಅಧಿಕಾರಿಗಳಿಗೆ ಕೊಪ್ಪಳ ಡಿಸಿ ನೋಟಿಸ್