ಮಂಗಳೂರು: ಹೊಸವರ್ಷದ ಪಾರ್ಟಿಯ ಗುಂಗಿನಲ್ಲಿ ಅತಿ ವೇಗವಾಗಿ ಚಲಾಯಿಸಿಕೊಂಡು ಹೋದ ಕಾರು ಪಲ್ಟಿಯಾದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ನಗರದ ವಿವಿಧೆಡೆ ಹೊಸವರ್ಷದ ಪಾರ್ಟಿ ನಡೆದಿದ್ದು, ಮದ್ಯಪಾನ ಮಾಡಿ ಕಾರು ಚಲಾಯಿಸಿಕೊಂಡು ಹೋಗುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಾರ್ ಪಂಪ್ ವೆಲ್ ಬಳಿ ಪಲ್ಟಿಯಾಗಿದೆ.
ಕಾರಿನಲ್ಲಿದ್ದ ಐದು ಜನರಿಗೂ ಸಣ್ಣಪುಟ್ಟ ಗಾಯಗಳಾಗಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಹೊಸ ವರ್ಷದ ಮೊದಲ ದಿನದ ಕೆಲವೇ ನಿಮಿಷಗಳಲ್ಲಿ ಅಪಘಾತ ನಡೆದಿರೋದು ವಿಪರ್ಯಾಸವಾಗಿದೆ.
ಸ್ಥಳಕ್ಕೆ ಕದ್ರಿ ಪೊಲೀಸರು ಆಗಮಿಸಿದ್ದು ಪರಿಶೀಲನೆ ನಡೆಸಿದ್ದಾರೆ. ಪಲ್ಟಿಯಾದ ಕಾರನ್ನು ಪೊಲೀಸರು ಕ್ರೇನ್ ಮೂಲಕ ಮೇಲಕ್ಕೆ ಎತ್ತಿದ್ದಾರೆ.