ಕೋಲಾರ: ನಿರ್ಮಾಣ ಹಂತದ ಅಂಡರ್ ಪಾಸ್ ಸರ್ವೀಸ್ ರಸ್ತೆ (Service Road) ಮೇಲಿಂದ ಕಾರೊಂದು (Car) ಬಿದ್ದ ಪರಿಣಾಮ 11 ತಿಂಗಳ ಮಗು ಸೇರಿ, ನಾಲ್ವರು ಗಂಭೀರ ಗಾಯಗೊಂಡಿರುವ ಘಟನೆ ಕೋಲಾರ (Kolar) ಜಿಲ್ಲೆಯ ಮುಳಬಾಗಿಲು (Mulabagilu) ತಾಲೂಕಿನ ನರಸಿಂಹತೀರ್ಥ ಅಂಡರ್ ಪಾಸ್‌ನಲ್ಲಿ ನಡೆದಿದೆ.
ಬೆಂಗಳೂರು – ಚೆನ್ನೈ ಮಾರ್ಗದ ರಾಷ್ಟ್ರೀಯ ಹೆದ್ದಾರಿ 75ರ ಅಂಡರ್ ಪಾಸ್ ಪಕ್ಕದ ಸರ್ವೀಸ್ ರಸ್ತೆ ಮೇಲಿಂದ ಕಾರು ಬಿದ್ದಿದೆ. ಕಾರಿನಲ್ಲಿದ್ದ ಕುಟುಂಬ ಇಂದು ಬೆಳಗ್ಗೆ 3 ಗಂಟೆಯ ವೇಳೆಗೆ ಬೆಂಗಳೂರಿನಿಂದ ತಿರುಪತಿಗೆ ಹೊರಟಿತ್ತು. ಈ ವೇಳೆ ಸರ್ವೀಸ್ ರಸ್ತೆಯಿಂದ ಆಯತಪ್ಪಿ ಕಾರು ಬಿದ್ದಿದೆ. ಇದನ್ನೂ ಓದಿ: ವಿಐಪಿ ಸಂಸ್ಕೃತಿಗೆ ಬ್ರೇಕ್ – ‘ಬಿಳಿ ಟವೆಲ್’ ಸಂಪ್ರದಾಯ ಕೈಬಿಟ್ಟ ಸಿಎಂ ವಿಜಯ್
ಘಟನೆಯಲ್ಲಿ ನಾಲ್ವರು ಗಂಭೀರ ಗಾಯಗೊಂಡಿದ್ದು, ಗಾಯಾಳುಗಳನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. ಅವೈಜ್ಞಾನಿಕ ಸರ್ವೀಸ್ ರಸ್ತೆಯಿಂದ ಅಪಘಾತಗಳು ಮರುಕಳಿಸುತ್ತಿದೆ ಎಂದು ಆರೋಪಿಸಲಾಗಿದೆ. ಘಟನೆ ಸಂಬಂಧ ಮುಳಬಾಗಿಲು ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಇದನ್ನೂ ಓದಿ: ರಷ್ಯಾ ಮೇಲೆ 550ಕ್ಕೂ ಹೆಚ್ಚು ಭೀಕರ ಡ್ರೋನ್ ದಾಳಿ- 4 ಮಂದಿ ಸಾವು

