ಪರೀಕ್ಷೆ ಬರೆಯಲು ಬಾರದ ವಿದ್ಯಾರ್ಥಿಗಳು – ಕೊನೇ ಕ್ಷಣದಲ್ಲಿ ಎಂಬಿಬಿಎಸ್ ಎಕ್ಸಾಮ್ ಕ್ಯಾನ್ಸಲ್

Public TV
1 Min Read
TET EXAM 2

ಕೋಲ್ಕತ್ತಾ: ಕೊರೊನಾ ಕೇಸ್‌ಗಳ ಹೆಚ್ಚಳದಿಂದಾಗಿ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನಲ್ಲಿ ಸೋಮವಾರ ನಡೆಯಬೇಕಿದ್ದ ಪರೀಕ್ಷೆಯನ್ನು ಕೊನೆಯ ಕ್ಷಣದಲ್ಲಿ ರದ್ದುಗೊಳಿಸಲಾಗಿದೆ.

ಪರೀಕ್ಷಾ ಸಿಬ್ಬಂದಿ ಸೋಮವಾರ ಪರೀಕ್ಷಾ ಕೇಂದ್ರಗಳಲ್ಲಿ ಪ್ರಶ್ನಾಪತ್ರಿಕೆಯೊಂದಿಗೆ ಹಾಜರಿದ್ದರೂ ವೈದ್ಯಕೀಯ ವಿದ್ಯಾರ್ಥಿಗಳು ಮಾತ್ರ ಪರೀಕ್ಷೆ ಬರೆಯಲು ಬಂದಿರಲಿಲ್ಲ. ಪರೀಕ್ಷಾರ್ಥಿಗಳು ಅರ್ಧಗಂಟೆ ಕಾದ ಬಳಿಕ ಇಂದಿನ ಪರೀಕ್ಷೆಯನ್ನು ರದ್ದುಗೊಳಿಸಲಾಗಿದೆ. ಇದನ್ನೂ ಓದಿ: ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

Calcutta Medical College

ಕೋವಿಡ್ ಪ್ರಕರಣಗಳ ಸಂಖ್ಯೆ ಹೆಚ್ಚಿರುವ ಕಾರಣ ವಿದ್ಯಾರ್ಥಿಗಳು ಪರೀಕ್ಷೆಯನ್ನು ಮುಂದೂಡಬೇಕು ಇಲ್ಲವೇ ಆನ್‌ಲೈನ್‌ನಲ್ಲಿ ಪರೀಕ್ಷೆ ನಡೆಸಬೇಕು ಎಂದು ಒತ್ತಾಯಿಸಿದ್ದಾರೆ. ಪ್ರಸ್ತುತ ಕೋಲ್ಕತ್ತಾ ವೈದ್ಯಕೀಯ ಕಾಲೇಜಿನ 14 ವಿದ್ಯಾರ್ಥಿಗಳು ಕೋವಿಡ್‌ಗೆ ಒಳಗಾಗಿದ್ದಾರೆ. ಇದನ್ನೂ ಓದಿ: ಉದ್ಧವ್ ಠಾಕ್ರೆ ಸರ್ಕಾರ ಬಹುತೇಕ ಪತನ – ಸುಪ್ರೀಂ ಕೋರ್ಟ್‍ನಲ್ಲಿ ಬಹುಮತ ಕಳೆದುಕೊಂಡಿದೆ ಎಂದ ಬಂಡಾಯ ಶಾಸಕರು

ಮಂಗಳವಾರ 3ನೇ ಸೆಮಿಸ್ಟರ್‌ನ ಎಂಬಿಬಿಎಸ್ ಪರೀಕ್ಷೆ ನಡೆಯಲಿದ್ದು, ಕೊರೊನಾ ಪಾಸಿಟಿವ್ ಇರುವವರಿಗೆ ಪ್ರತ್ಯೇಕ ಕೊಠಡಿಯಲ್ಲಿ ವ್ಯವಸ್ಥೆ ಮಾಡಲಾಗಿದೆ. ಬಾಕಿ ವಿದ್ಯಾರ್ಥಿಗಳಿಗೆ ರ‍್ಯಾಪಿಡ್ ಆಂಟಿಜನ್ ಟೆಸ್ಟ್ ಬಳಿಕವೇ ಪರೀಕ್ಷಾ ಕೊಠಡಿಗೆ ಪ್ರವೇಶಿಸಲು ಅನುಮತಿ ನೀಡಲಾಗುವುದು ಎಂದು ಕಾಲೇಜು ಅಧಿಕಾರಿಗಳು ತಿಳಿಸಿದ್ದಾರೆ.

Live Tv

Share This Article