Bengaluru CityCrimeDistrictsKarnatakaLatestMain Post

ಹಿಮಾಲಯಕ್ಕೆ ಚಾರಣ ಹೋದ ಬೆಂಗ್ಳೂರಿನ ಮಣಿಪಾಲ್ ಆಸ್ಪತ್ರೆ ವೈದ್ಯ ನಾಪತ್ತೆ

Advertisements

ಬೆಂಗಳೂರು: ಹಿಮಾಲಯಕ್ಕೆ ಚಾರಣ ಹೋದ ಸರ್ಜಾಪುರ ರಸ್ತೆಯ ಮಣಿಪಾಲ್ ಆಸ್ಪತ್ರೆಯ ವೈದ್ಯರೊಬ್ಬರು ನಾಪತ್ತೆಯಾಗಿರುವ ಘಟನೆ ಬೆಳಕಿಗೆ ಬಂದಿದೆ.

ಚಂದ್ರಮೋಹನ್ (31) ನಾಪತ್ತೆಯಾಗಿರುವ ವೈದ್ಯ. ವಸಂತನಗರ ನಿವಾಸಿಯಾಗಿರುವ ಇವರು ಒಂಟಿಯಾಗಿ ಹಿಮಾಲಯ ಪರ್ವತಕ್ಕೆ ಚಾರಣ ಹೊಗಿದ್ದಾರೆ. ಹೀಗೆ ಹೋಗಿ ಜೂನ್ 20 ರ ನಂತರ ಮೊಬೈಲ್ ಸ್ವಿಚ್ ಆಫ್ ಆಗಿದ್ದು ಸಂಪರ್ಕಕ್ಕೆ ಸಿಕ್ಕಿಲ್ಲ. ಇದನ್ನೂ ಓದಿ: ವಿಧಾನಸೌಧದ ಆವರಣದಲ್ಲೇ ಕೆಂಪೇಗೌಡ ಪ್ರತಿಮೆ ಸ್ಥಾಪನೆ ಆಗಲಿದೆ: ಸಿಎಂ ಘೋಷಣೆ

ಚಂದ್ರಮೋಹನ್ ಅವರು ಒಂಟಿಯಾಗಿ ಚಾರಣ ಹೋಗುವ ಹವ್ಯಾಸ ಹೊಂದಿದ್ದಾರೆ. ಈ ಬಾರೀ ನೇಪಾಳಕ್ಕೆ ಚಾರಣ ಹೋಗಿದ್ದಾರೆ. ನೇಪಾಳದ ಮೂಲಕ ಹಿಮಾಲಯ ಹತ್ತಲು ಹೋಗಿದ್ದಾರೆ. ಶಿವನ ಅಪಾರ ಭಕ್ತನಾಗಿದ್ದ ಚಂದ್ರಮೋಹನ್, ಸಾಧು ಸಂತರ ಜೊತೆ ಪೂಜೆ, ಧ್ಯಾನದಲ್ಲಿ ತೊಡಗಿದ್ದರು. ಈ ಮೂಲಕ ಆಧ್ಯಾತ್ಮಿಕದ ಕಡೆ ಅತಿಯಾದ ಒಲವು ಹೊಂದಿದ್ದರು.

ಯಾವುದೇ ಪ್ರವಾಸಿ ಗೈಡೆನ್ಸ್ ತೆಗೆದುಕೊಳ್ಳದೇ ಹೋಗಿದ್ದಾರೆ. ಹೊಸ ಹೊಸ ಸ್ಥಳಗಳನ್ನ ಅನ್ವೇಷಣೆ ಮಾಡಲು ಒಂಟಿಯಾಗಿ ಹೋಗುವ ಹವ್ಯಾಸ ಹೊಂದಿದ್ದರು. ಇದೀಗ ನಾಪತ್ತೆಯಾಗಿರುವ ಬಗ್ಗೆ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ನಾಪತ್ತೆಯಾಗಿರುವ ವೈದ್ಯನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

Live Tv

Leave a Reply

Your email address will not be published.

Back to top button