ಬೆಂಗಳೂರು: ಕಾಂಗ್ರೆಸ್ ಗ್ಯಾರಂಟಿ (Congress Guarantee) ಗಳಲ್ಲಿ ಒಂದಾಗಿರುವ ಗೃಹಲಕ್ಷ್ಮಿ ಯೋಜನೆಯ ಪ್ರತ್ಯೇಕ ಆ್ಯಪ್‍ಗೆ ಸಚಿವ ಸಂಪುಟ (Cabinet Meeting) ದಲ್ಲಿ ಗ್ರೀನ್ ಸಿಗ್ನಲ್ ದೊರಕಿದೆ. ಈ ಮೂಲಕ ಆಗಸ್ಟ್ ನಲ್ಲಿ ಗೃಹಿಣಿಯರ ಅಕೌಂಟ್ 2 ಸಾವಿರ ಫಿಕ್ಸ್ ಆದಂತಿದೆ.
ಇಂದು (ಬುಧವಾರ) ನಡೆದ ಸಚಿವ ಸಂಪುಟ ಸಭೆಯಲ್ಲಿ ಗೃಹಲಕ್ಷ್ಮಿ ಆಪ್ (Gruhalakshmi App) ಬಗ್ಗೆ ಚರ್ಚೆ ನಡೆದಿದೆ. ಈ ವೇಳೆ ಸಭೆಯಲ್ಲಿ ಗೃಹಲಕ್ಷ್ಮಿ ಯೋಜನೆ ಅನುಷ್ಠಾನ ಕುರಿತು ಸರ್ಕಾರದ ನಿರ್ಧಾರ ತೆಗೆದುಕೊಂಡಿದೆ.
ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ (laxmi Hebbalkar) ಅವರು ಸಿಎಂ ಸಿದ್ದರಾಮಯ್ಯಗೆ ಆಪ್ ಬಗ್ಗೆ ವಿವರಣೆ ನೀಡಿದರು. ಅಲ್ಲದೆ ಪ್ರತ್ಯೇಕ ಆಪ್ ಬಗ್ಗೆ ಸಂಪುಟ ಸಹೋದ್ಯೋಗಿಗಳಿಗೂ ಮಾಹಿತಿ ನೀಡಿದರು. ಬಳಿಕ ಆಪ್ ಬಗ್ಗೆ ಗ್ರೀನ್ ಸಿಗ್ನಲ್ ನೀಡಲಾಯಿತು. ಅರ್ಜಿ ಸಲ್ಲಿಕೆ ಯಾವ ದಿನಾಂಕದಿಂದ ಆರಂಭವಾಗುತ್ತದೆ ಎಂಬುದರ ಬಗ್ಗೆ ಮಾಹಿತಿ ಸಿಕ್ಕಿಲ್ಲ. ಆದರೆ ಈ ಯೋಜನೆಗೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಕಲ ಸಿದ್ಧತೆ ನಡೆಸಿದೆ. ಇದನ್ನೂ ಓದಿ: ದೇಶದ ಹಲವು ರಾಜ್ಯಗಳಲ್ಲಿ ಭಾರೀ ಮಳೆಯ ಎಚ್ಚರಿಕೆ
ಗೃಹ ಲಕ್ಷ್ಮಿಗಾಗಿಯೇ ಪ್ರತ್ಯೇಕ ಆಪ್ ಬಳಕೆ: ಹೆಚ್ಚೆಚ್ಚು ಅರ್ಜಿ ಸಲ್ಲಿಕೆ ಆದರು ಸರ್ವರ್ ಬ್ಯುಸಿ ಆಗದಂತೆ ಪ್ಲಾನ್ ಮಾಡಲಾಗುತ್ತಿದೆ. ಬಾಪೂಜಿ ಸೇವಾ ಕೇಂದ್ರದ ಮೂಲಕವು ಅರ್ಜಿ ಸ್ವೀಕಾರ ಮಾಡುವ ಸಾಧ್ಯತೆಗಳಿವೆ. ಮಾಹಿತಿ ಸಂಗ್ರಹ, ನೋಂದಣಿಗೆ ಅಂಗನವಾಡಿ ಕಾರ್ಯಕರ್ತೆಯರನ್ನು ಬಳಕೆ ಮಾಡಬಹುದು. ಗ್ರಾಮಗಳಲ್ಲಿ ಪ್ರಜಾ ಪ್ರತಿನಿಧಿಗಳ ನೇಮಕದ ಮೂಲಕ ಅರಳವಾಗಿ ಅರ್ಜಿ ಸಲ್ಲಿಕೆಗೆ ಸಿದ್ಧತೆ ನಡೆಸಲಾಗುತ್ತಿದೆ. ಮೊಬೈಲ್‍ನಲ್ಲೇ ಆನ್‍ಲೈನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ಬೆಂಗಳೂರು ಒನ್, ಗ್ರಾಮ ಒನ್, ಹಾಗೂ ಸೇವಾ ಕೇಂದ್ರಗಳಲ್ಲು ಅರ್ಜಿ ಸಲ್ಲಿಕೆಗೆ ಅವಕಾಶ ನೀಡಬಹುದು. ಖಾಸಗಿ ಸೈಬರ್ ಗಳಲ್ಲೂ ನೋಂದಣಿಗೆ ಅವಕಾಶ ನೀಡುವ ಸಾಧ್ಯತೆಗಳಿವೆ.