5 ರಾಜ್ಯಗಳ ಉಪ ಚುನಾವಣೆ – ಕಾಂಗ್ರೆಸ್‌, ಬಿಜೆಪಿಗೆ ತಲಾ 2 ಸೀಟ್‌

Public TV
2 Min Read
BJP CONGRESS FLAG

ನವದೆಹಲಿ: ಗುಜರಾತ್‌ (Gujarat Election) ಹಾಗೂ ಹಿಮಾಚಲ ಪ್ರದೇಶ ವಿಧಾನಸಭಾ ಚುನಾವಣೆ (Himachal Pradesh Election) ಫಲಿತಾಂಶದ ಜೊತೆಗೆ 5 ರಾಜ್ಯಗಳ 6 ವಿಧಾನಸಭಾ ಕ್ಷೇತ್ರಗಳು ಮತ್ತು 1 ಲೋಕಸಭಾ ಕ್ಷೇತ್ರದ ಉಪಚುನಾವಣೆಯ ಮತ ಎಣಿಕೆ ನಡೆಯುತ್ತಿದೆ. ಇದರಲ್ಲಿ ಬಿಜೆಪಿ (BJP) ಮತ್ತು ಕಾಂಗ್ರೆಸ್‌ (Congress) ತಲಾ 2 ಸ್ಥಾನಗಳಲ್ಲಿ ಮುಂದಿವೆ ಎಂದು ಚುನಾವಣಾ ಆಯೋಗ ಮಾಹಿತಿಯಲ್ಲಿ ತಿಳಿಸಿದೆ.

ಉತ್ತರ ಪ್ರದೇಶ (Uttar Pradesh)
ಉತ್ತರ ಪ್ರದೇಶದ ಖತೌಲಿಯಲ್ಲಿ ರಾಷ್ಟ್ರೀಯ ಲೋಕದಳದ ಅಭ್ಯರ್ಥಿ ಮದನ್‌ ಬೈಯ್ಯಾ ಅವರು ಗೆಲುವು ಸಾಧಿಸಿದ್ದಾರೆ. ಪ್ರತಿಸ್ಪರ್ಧಿ ಬಿಜೆಪಿಯ ರಾಜಕುಮಾರಿ ಸೋಲನುಭವಿಸಿದ್ದಾರೆ. ಜೊತೆಗೆ ರಾಮಪುರದಲ್ಲಿ ಬಿಜೆಪಿಯ ಆಕಾಶ್‌ ಸಕ್ಸೇನಾ ಅವರು ಸಮಾಜವಾದಿ ಪಕ್ಷದ ಮೊಹಮದ್‌ ಅಸಿಮ್‌ ರಾಜಾ ವಿರುದ್ಧ ಜಯಗಳಿಸಿದ್ದಾರೆ. ಇದನ್ನೂ ಓದಿ: ಹಿಮಾಚಲ ಪ್ರದೇಶದ ಗೆಲುವಿಗೆ ಭಾರತ್ ಜೋಡೋ ಯಾತ್ರೆ ಸಹಾಯ ಮಾಡಿದೆ: ಖರ್ಗೆ

ರಾಜಸ್ಥಾನ (Rajasthan)
ಸರ್ದರ್ಶಹಾರದಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಅನಿಲ್‌ ಕುಮಾರ್‌ ಶರ್ಮಾ ಅವರು ಬಿಜೆಪಿಯ ಅಶೋಕ್‌ ಕುಮಾರ್‌ ವಿರುದ್ಧ ಗೆಲುವು ಸಾಧಿಸಿದ್ದಾರೆ.

ಬಿಹಾರ (Bihar)
ಕುರ್ಹಾನಿಯಲ್ಲಿ ಬಿಜೆಪಿಯ ಕೇದಾರ್‌ ಪ್ರಸಾದ್‌ಗುಪ್ತ ಅವರು ಜೆಡಿಯುನ ಮನೋಜ್‌ ಸಿಂಗ್‌ ವಿರುದ್ಧ ಜಯಗಳಿಸಿದ್ದಾರೆ. ಇದನ್ನೂ ಓದಿ: Gujarat Election Result: ಜಿಗ್ನೇಶ್‌ ಮೇವಾನಿಗೆ ಜಯ

ಒಡಿಶಾ (Odisha)
ಪದಮ್‌ಪುರದಲ್ಲಿ ಬಿಜೆಡಿಯ ಬರ್ಷ ಸಿಂಗ್‌ ಬರಿಹಾ ಅವರು ಬಿಜೆಪಿಯ ಪ್ರದೀಪ್‌ ಪುರೋಹಿತ್‌ ವಿರುದ್ಧ ಗೆಲುವು ದಾಖಲಿಸಿದ್ದಾರೆ.

ಛತ್ತೀಸಗಢ (Chattisgarh)
ಭಾನುಪ್ರತಾಪಪುರದಲ್ಲಿ ಕಾಂಗ್ರೆಸ್‌ನಿಂದ ಸ್ಪರ್ಧೆ ಮಾಡಿದ್ದ ಸಾವಿತ್ರಿ ಮನೋಜ್‌ ಮಾಂಡವೀಯ ಅವರು ಪ್ರತಿಸ್ಪರ್ಧಿ ಬಿಜೆಪಿಯ ಭ್ರಹ್ಮಾನಂದ ನೇತಾಮ್‌ ವಿರುದ್ಧ ಗೆಲುವಿನ ನಗೆ ಬೀರಿದ್ದಾರೆ. ಇದನ್ನೂ ಓದಿ: ಬಿಜೆಪಿ ಸೇರಿದ್ದ ಪಟೀದಾರ್ ಚಳುವಳಿಯ ನಾಯಕ ಹಾರ್ದಿಕ್ ಪಟೇಲ್‍ಗೆ ಗೆಲುವು

Dimple Yadav

ಉತ್ತರ ಪ್ರದೇಶ (ಲೋಕಸಭಾ ಕ್ಷೇತ್ರ)
ಮುಲಾಯಂ ಸಿಂಗ್‌ ಅವರ ನಿಧನದಿಂದ ತೆರವಾಗಿದ್ದ ಮೈನ್‌ಪುರಿ ಲೋಕಸಭಾ ಕ್ಷೇತ್ರದಲ್ಲಿ ಅಖಿಲೇಶ್‌ ಯಾದವ್‌ (Akhilesh Yadav) ಅವರ ಪತ್ನಿ ಡಿಂಪಲ್‌ (Dimple Yadav) 2,88,461 ಮತಗಳ ಭಾರಿ ಮುನ್ನಡೆ ಸಾಧಿಸಿದ್ದಾರೆ. ಇತ್ತೀಚಿನ ಮಾಹಿತಿಯ ಪ್ರಕಾರ ಡಿಂಪಲ್‌ 6,18,120 ಮತ ಗಳಿಸಿದ್ದರೆ, ಸಮೀಪ ಸ್ಪರ್ಧಿ ಬಿಜೆಪಿಯ ರಘುರಾಜ್ ಸಿಂಗ್ ಶಾಕ್ಯಾ 3,29,659 ಮತ ಪಡೆದಿದ್ದಾರೆ.

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *