– ವಯನಾಡಿನಲ್ಲಿ ಪ್ರವಾಹ ಸಂತ್ರಸ್ತರ ಸಮಾಗಮ
ಬೆಂಗಳೂರು: ದೊಡ್ಡ ಮಾತಿನ ಮತಾಪುಗಳಿಗೆ ಸಾಕ್ಷಿಯಾಗಿದ್ದ ರಾಜ್ಯದ ಮೂರು ಕ್ಷೇತ್ರಗಳ ಉಪಚುನಾವಣೆ (By Elections 2024) ಶಾಂತಿಯುತವಾಗಿ ನೆರವೇರಿದೆ.
ಯಾವುದೇ ಗದ್ದಲ ಗಲಾಟೆಗಳಿಲ್ಲದೇ ಚನ್ನಪಟ್ಟಣ (Channapatna) ಮತ್ತು ಶಿಗ್ಗಾಂವಿಯಲ್ಲಿ ಶೇ.80ಕ್ಕೂ ಹೆಚ್ಚು, ಸಂಡೂರಿನಲ್ಲಿ (Sandur) 75%ಗೂ ಹೆಚ್ಚು ವೋಟಿಂಗ್ ಆಗಿದೆ. ಆಡಳಿತ ಮತ್ತು ವಿಪಕ್ಷಗಳಿಗೆ ಪ್ರತಿಷ್ಠೆಯ ಕಣವಾಗಿರುವ ಚನ್ನಪಟ್ಟಣದಲ್ಲಿ ದಾಖಲೆಯ 88.80ರಷ್ಟು ಮತದಾನವಾಗಿದೆ. ಅದೇ ರೀತಿ ಶಿಗ್ಗಾಂವಿಯಲ್ಲಿ 80.48ರಷ್ಟು, ಸಂಡೂರಿನಲ್ಲಿ 76.24ರಷ್ಟು ವೋಟಿಂಗ್ ಆಗಿದೆ. ಇದನ್ನೂ ಓದಿ: ನಮ್ಮ ಪಕ್ಷದ 50 ಶಾಸಕರಿಗೆ ಬಿಜೆಪಿಯಿಂದ ತಲಾ 50 ಕೋಟಿ ಆಫರ್ ಬಂದಿತ್ತು: ಸಿಎಂ ಬಾಂಬ್
ಅಭ್ಯರ್ಥಿಗಳಾದ ನಿಖಿಲ್ ಕುಮಾರಸ್ವಾಮಿ (Nikhil Kumaraswamy), ಸಿಪಿ ಯೋಗೇಶ್ವರ್, ಭರತ್ ಬೊಮ್ಮಾಯಿ, ಯಾಸೀರ್ ಪಠಾಣ್, ಅನ್ನಪೂರ್ಣ ತುಕಾರಾಮ್, ಬಂಗಾರು ಹನುಮಂತು ಭವಿಷ್ಯ ಮತಯಂತ್ರ ಸೇರಿದೆ. ನವೆಂಬರ್ 23ಕ್ಕೆ ಫಲಿತಾಂಶ ಹೊರಬೀಳಲಿದೆ.
ಅಂದ ಹಾಗೆ, ಫಲಿತಾಂಶಕ್ಕೆ ಮೊದಲೇ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಗೆದ್ದಂತೆ ಸಂಭ್ರಮಾಚರಣೆ ನಡೆಸಿದ್ದಾರೆ. ಈ ವಿಡಿಯೋ ವೈರಲ್ ಆಗಿದೆ. ಚನ್ನಪಟ್ಟಣದ ಚಕ್ಕೆರೆಯಲ್ಲಿ ಯೋಗೇಶ್ವರ್, ಶಿಗ್ಗಾಂವಿಯಲ್ಲಿ ಭರತ್ ಬೊಮ್ಮಾಯಿ, ಬಸವರಾಜ ಬೊಮ್ಮಾಯಿ, ಯಾಸೀರ್, ಸಂಡೂರಿನಲ್ಲಿ ಅನ್ನಪೂರ್ಣ ತುಕಾರಾಮ್ ವೋಟ್ ಮಾಡಿದ್ರು. 90ರ ವೃದ್ಧರಿಂದ ಹಿಡಿದು ಹಸಿ ಬಾಣಂತಿವರೆಗೂ ಎಲ್ರೂ ಉತ್ಸಾಹದಿಂದ ಮತಗಟ್ಟೆಗೆ ಬಂದಿದ್ರು. ಅಮೆರಿಕದಿಂದ ಅನುಷಾ ಎಂಬಾಕೆ ಮತಹಾಕಲು ಶಿಗ್ಗಾಂವಿಗೆ ಬಂದು ಮತ ಚಲಾವಣೆ ಮಾಡಿದರು. ಇದನ್ನೂ ಓದಿ: ಬೆಂಗಳೂರಿನ ಪ್ರಸಿದ್ಧ ಬಸವನಗುಡಿ, ಮಲ್ಲೇಶ್ವರಂ ಕಡಲೆಕಾಯಿ ಪರಿಷೆಗೆ ದಿನಾಂಕ ನಿಗದಿ
ಎಲ್ಲೆಲ್ಲಿ ಎಷ್ಟೆಷ್ಟು ಮತದಾನ?
ಚನ್ನಪಟ್ಟಣ ಕ್ಷೇತ್ರ
ಒಟ್ಟು ಮತದಾನ: 88.80%
ಒಟ್ಟು ಮತದಾನ ಮಾಡಿದವರ ಸಂಖ್ಯೆ – 2,06,866.
ಪುರುಷ ಮತದಾರರು – 1,00,501
ಮಹಿಳಾ ಮತದಾರರು – 1,06,362
ತೃತೀಯಲಿಂಗಿಗಳು – 3
ಶಿಗ್ಗಾವಿ ಕ್ಷೇತ್ರ
ಒಟ್ಟು ಮತದಾನ: 80.48%
ಒಟ್ಟು ಮತದಾನ ಮಾಡಿದವರ ಸಂಖ್ಯೆ – 1,91,166
ಪುರುಷ ಮತದಾರರು- 98,642
ಮಹಿಳಾ ಮತದಾರರು- 92,522
ತೃತೀಯ ಲಿಂಗಿಗಳು – 2
ಸಂಡೂರು ಕ್ಷೇತ್ರ
ಒಟ್ಟು ಮತದಾನ – 76.24%
ಒಟ್ಟು ಮತದಾನ ಮಾಡಿದವರ ಸಂಖ್ಯೆ – 1,80,189
ಪುರುಷ ಮತದಾರರು – 90,922
ಮಹಿಳೆ ಮತದಾರರು – 89,252
ತೃತೀಯಲಿಂಗಿಗಳು -12