ಬೆಂಗಳೂರು: ಈಗಾಗಲೇ ಎಲ್‌ಪಿಜಿ ಸಿಲಿಂಡರ್ (LPG cylinder) ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಬಳಲುತ್ತಿರುವ ಜನರಿಗೆ ಈಗ ಜಲಮಂಡಳಿ (BWSSB) ಶಾಕ್ ಕೊಟ್ಟಿದೆ. ಏಪ್ರಿಲ್ 1 ರಿಂದ ನೀರಿನ ದರ ಶೇ.3 ರಷ್ಟು ಏರಿಕೆ ಮಾಡುವುದಕ್ಕೆ ಮುಂದಾಗಿದೆ.
ಸಮಿತಿಯ ನಿರ್ಧಾರದಂತೆ ಸಾಂಪ್ರದಾಯಿಕವಾಗಿ ದರ ಹೆಚ್ಚಿಸಲು ಜಲಮಂಡಳಿ ಮುಂದಾಗಿದೆ. ಜನರಿಗೆ ಅನಾನುಕೂಲವೂ ಆಗದಂತೆ ನೋಡಿಕೊಂಡು ಶೇ.3 ರಷ್ಟು ಮಾತ್ರ ದರ ಏರಿಕೆ ಮಾಡಲು ನಿರ್ಧರಿಸಿದೆ. ಇದರಿಂದ ಪ್ರತಿ ಲೀಟರ್ ನೀರಿಗೆ 1 ಪೈಸೆ ಮತ್ತು ವಾಣಿಜ್ಯ ಬಳಕೆದಾರರಿಗೆ ಪ್ರತಿ ಲೀಟರ್ ನೀರಿಗೆ (Water) 1.9 ಪೈಸೆ ಹೆಚ್ಚಳವಾಗಲಿದೆ ಏರಿಕೆ ಆಗಲಿದೆ. ಇದನ್ನೂ ಓದಿ: ರಾಮನಗರದಲ್ಲಿ ಒಡೆಯರ್ ಎಕ್ಸ್‌ಪ್ರೆಸ್ ರೈಲು ನಿಲುಗಡೆಗೆ ಕೇಂದ್ರ ಅಸ್ತು

ಇದರೊಂದಿಗೆ ಸ್ಯಾನಿಟರಿ ಚಾರ್ಚ್ ಕೂಡ ಹೆಚ್ಚಾಗಲಿದೆ. ಬೋರ್ ವೆಲ್ ಇರೋ ಮನೆಗಳಿಗೆ 30 ರೂ ಮತ್ತು ಕೈಗಾರಿಕೆಗಳಿಗೆ 120 ರೂ. ಚಾರ್ಜ್ ಆಗಲಿದೆ.
ಜಲಮಂಡಳಿಯಿಂದ ಪ್ರತಿನಿತ್ಯ 12 ಲಕ್ಷ ಮನೆಗಳಿಗೆ ನೀರು ಸರಬರಾಜು ಆಗುತ್ತಿದ್ದು, ಮೇ ತಿಂಗಳ ಬಿಲ್ ನಲ್ಲಿ ಹೊಸ ದರ ಜಾರಿಗೆ ಬರಲಿದೆ. ಇದನ್ನೂ ಓದಿ: ರಾಜ್ಯದಲ್ಲಿ ಪೆಟ್ರೋಲ್, ಎಲ್‌ಪಿಜಿ ಸಿಲಿಂಡರ್‌ಗೆ ತೀವ್ರ ಅಭಾವನಾ? – ಕಲಬುರಗಿಯಲ್ಲಿ ರಾತ್ರಿಯಿಡೀ ಕ್ಯೂ ಕೂತ ಜನ

