ಬೆಂಗಳೂರು: ಕೆಲ ತಿಂಗಳ ಹಿಂದಷ್ಟೇ 10 ಲಕ್ಷ ರೂ. ವೆಚ್ಚದಲ್ಲಿ ಕಟ್ಟಲಾಗಿದ್ದ ಬಸ್ ಸ್ಟ್ಯಾಂಡ್ (Bus Stand) ಅನ್ನು ಕಳವು ಮಾಡಿರುವ ಘಟನೆ ಬೆಂಗಳೂರಿನಲ್ಲಿ (Benagluru) ನಡೆದಿದೆ.
ವಿಧಾನಸೌಧದ ಬಳಿಯಿರುವ ಕನ್ನಿಂಗ್ ಹ್ಯಾಂ ರಸ್ತೆಯಲ್ಲಿ (Cunningham Road) ಇದ್ದ ಬಸ್ ಸ್ಟ್ಯಾಂಡ್ ಗಾಯಬ್ ಆಗಿದೆ. ಆಗಸ್ಟ್ ತಿಂಗಳಿನಲ್ಲಿ ಬಿಬಿಎಂಪಿಯಿಂದ ನಿರ್ಮಾಣವಾಗಿದ್ದ ಬಸ್ ಸ್ಟ್ಯಾಂಡ್ ಒಂದೇ ವಾರದಲ್ಲಿ ಕಳುವಾಗಿದೆ. ಈ ಬಗ್ಗೆ 4 ದಿನಗಳ ಹಿಂದೆ ಹೈಗ್ರೌಂಡ್ ಸ್ಟೇಷನ್‌ನಲ್ಲಿ ದೂರು ದಾಖಲಾಗಿದೆ. ಇದನ್ನೂ ಓದಿ: ಚುನಾವಣೆ ಬಂದರೆ ಬಿಜೆಪಿಯವರಿಗೆ ಮಸೀದಿ, ಪಾಕಿಸ್ತಾನ ನೆನಪಾಗುತ್ತದೆ: ಶಿವರಾಜ್ ತಂಗಡಗಿ
ಅತಿ ಹೆಚ್ಚು ಪ್ರಯಾಣಿಕರಿರುವ ಕಾರಣಕ್ಕೆ ಕನ್ನಿಂಗ್ ಹ್ಯಾಂ ರಸ್ತೆಯ ಬಳಿ 2 ಬಸ್ ಸ್ಟ್ಯಾಂಡ್‌ಗಳನ್ನು ನಿರ್ಮಿಸಲಾಗಿತ್ತು. ಆದರೆ ಅದರಲ್ಲಿ ಒಂದು ಬಸ್ ಸ್ಟ್ಯಾಂಡ್ ನಿರ್ಮಾಣವಾದ ವಾದರದಲ್ಲೇ ಅದರ ಸುಳಿವೇ ಇಲ್ಲದಂತೆ ಗಾಯಬ್ ಆಗಿದೆ. ಈ ಬಗ್ಗೆ 4 ದಿನಗಳ ಹಿಂದೆ ರವಿ ರೆಡ್ಡಿ ಎಂಬವರು ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಇದನ್ನೂ ಓದಿ: ಮಣಿಪುರದಲ್ಲಿ ಮತ್ತೆ ಸಂಘರ್ಷ – ಮನೆಗಳಿಗೆ ಹೊತ್ತಿದ ಬೆಂಕಿ
Web Stories