ಗದಗ: ನಿರ್ವಾಹಕಿಯೊಬ್ಬರು ಲಕ್ಷಾಂತರ ರೂಪಾಯಿ ಮೌಲ್ಯದ ಬೆಳ್ಳಿ, ಬಂಗಾರ, ಹಣ, ಇರುವ ಬ್ಯಾಗ್ ಮರಳಿ ನೀಡಿ ಮಾನವೀಯತೆ ಮೆರೆದ ಘಟನೆ ಗದಗ (Gadaga) ಜಿಲ್ಲೆಯ ನಗರದ ಹೊಸ ಬಸ್ ನಿಲ್ದಾಣದಲ್ಲಿ ನಡೆದಿದೆ.
ಗದಗ ತಾಲೂಕಿನ ಮುಳಗುಂದ (Mulgund) ಮೂಲದ ಶಕಿಲಾಬಾನು ಎಂಬ ಮಹಿಳೆ, ಬಸ್ ನಲ್ಲಿ ತನ್ನ ಬ್ಯಾಗ್ ಮರೆತು ಹೋಗಿದ್ದಳು. ಹಾವೇರಿ (Haveri) ಜಿಲ್ಲೆ ಬ್ಯಾಡಗಿ ಡಿಪೋ ನಿರ್ವಾಹಕಿ ಅನಸೂಯಾ ಎಸ್.ಎಮ್ ಎಂಬುವರು ಬ್ಯಾಗ್ ಮರಳಿ ನೀಡಿ ಮಾನವೀಯತೆ ಮೆರೆದಿದ್ದಾರೆ. ಈ ಬಸ್ ಬ್ಯಾಡಗಿನಿಂದ ಗದಗ ಮಾರ್ಗವಾಗಿ ಬಾದಾಮಿಗೆ ಹೊರಟಿತ್ತು. ಮಹಿಳೆ ಮುಳಗುಂದದಲ್ಲಿ ಹತ್ತಿ ಗದಗ ಹೊಸ ಬಸ್ ನಿಲ್ದಾಣದಲ್ಲಿ ಇಳಿದುಕೊಂಡಿದ್ದಾಳೆ. ಇದನ್ನೂ ಓದಿ: ಗಂಡನಿಗೆ ಪ್ರತಿನಿತ್ಯ ಊಟದಲ್ಲಿ ವಿಷ ಬೆರೆಸಿ ಕೊಡ್ತಿದ್ದ ಖತರ್ನಾಕ್ ಸುಂದರಿ – ಸ್ಲೋ ಪಾಯ್ಸನ್ ಯಾವುದು?
ಈ ಬ್ಯಾಗ್‌ನಲ್ಲಿ ಸುಮಾರು 30 ಗ್ರಾಂ ಬಂಗಾರದ ಆಭರಣಗಳು, 100 ಗ್ರಾಂ ಬೆಳ್ಳಿ ಆಭರಣಗಳು ಹಾಗೂ 2,160 ರೂ. ಹಣ ಹಾಗೂ ಬ್ಲೂಟುತ್ ಸೇರಿದಂತೆ ಇತರೆ ವಸ್ತುಗಳು ಇದ್ದವು. ಇದನ್ನು ನೋಡಿದ ನಿರ್ವಾಹಕಿ ಅನಸೂಯಾ ನಯಾಪೈಸೆ ಮುಟ್ಟದೇ, ಗದಗ ಬಸ್ ನಿಲ್ದಾಣದ ಅಧಿಕಾರಿ ಶಿವಾನಂದ ಸಂಗಣ್ಣವರ್ ಹಾಗೂ ಇತರೆ ಅಧಿಕಾರಿ ಸಮ್ಮುಖದಲ್ಲಿ ಬಂಗಾರದ ಬ್ಯಾಗ್ ತಲುಪಿಸಿದ್ದಾರೆ. ನಂತರ ಬ್ಯಾಗ್‌ನಲ್ಲಿರುವ ಪಾನ್ ಕಾರ್ಡ್ ಗುರುತಿನ ಚೀಟಿ ಮೂಲಕ ಬ್ಯಾಗ್ ಕಳೆದುಕೊಂಡ ಮಹಿಳೆ ವಿಳಾಸ ಪತ್ತೆಹಚ್ಚಿದ್ದಾರೆ. ಇದನ್ನೂ ಓದಿ: `ಕರಿಮಣಿ ಮಾಲೀಕ ನೀನಲ್ಲ’ ಅಂತ ಆಸ್ತಿಗಾಗಿ ಗಂಡನ ಕೊಲೆ – ಇಬ್ಬರು ಪ್ರಿಯಕರರು ಸೇರಿ ಪತ್ನಿಯೂ ಅಂದರ್
ಬೆಟಗೇರಿ ಬಡಾವಣೆ ಪೊಲೀಸರು, ಗದಗ ಬಸ್ ನಿಲ್ದಾಣ ಅಧಿಕಾರಿಗಳ ಸಮ್ಮುಖದಲ್ಲಿ ಫಲಾನುಭವಿಗೆ ಬ್ಯಾಗ್ ಮರಳಿಸಿದರು. ಮರಳಿ ಸಿಕ್ಕ ಬಂಗಾರ, ಬೆಳ್ಳಿ, ಹಣ ಇರುವ ಬ್ಯಾಗ್ ಕಂಡು ಫಲಾನುಭವಿಗಳು ಸಂತೋಷ ಪಟ್ಟರು. ನಿರ್ವಾಹಕಿ ಅನಸೂಯಾ ಹಾಗೂ ಚಾಲಕ ಸೊಲಂಕಿ ಅವರ ಮಾನವೀಯತೆಯ ಶ್ಲಾಘನೀಯ ಕಾರ್ಯಕ್ಕೆ ಈಗ ಎಲ್ಲಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಗದಗ ಹಾಗೂ ಹಾವೇರಿ ಜಿಲ್ಲೆಯ ಸಾರಿಗೆ ಅಧಿಕಾರಿಗಳು ನಿರ್ವಾಹಕ, ನಿರ್ವಾಹಕಿಗೆ ಬೆನ್ನು ತಟ್ಟಿ ಪ್ರೋತ್ಸಾಹಿದ್ದಾರೆ. ಇದನ್ನೂ ಓದಿ: ಹೊನ್ನಾವಡದ 11 ಎಕರೆ ಮಾತ್ರ ವಕ್ಫ್ ಜಾಗ, ಗೆಜೆಟ್ ನೋಟಿಫಿಕೇಷನ್‌ನಲ್ಲಿ ತಪ್ಪಾಗಿ ನಮೂದಾಗಿದೆ: ಎಂ.ಬಿ ಪಾಟೀಲ್