ಭೋಪಾಲ್: ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಬುಲ್ಡೋಜರ್‌ನಲ್ಲಿ(Bulldozer) ಆಸ್ಪತ್ರೆಗೆ(Hospital) ಹೊತ್ತು ತಂದ ಘಟನೆ ಮಂಗಳವಾರ ಮಧ್ಯಪ್ರದೇಶದ(Madhya Pradesh) ಕಟ್ನಿಯಲ್ಲಿ ನಡೆದಿದೆ.
ವರದಿಗಳ ಪ್ರಕಾರ ರಸ್ತೆ ಅಪಘಾತದಲ್ಲಿ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ಸಾಗಿಸಲು ಅಂಬುಲೆನ್ಸ್‌ಗೆ(Ambulance) ಕರೆ ಮಾಡಲಾಗಿತ್ತು. ಆದರೆ ಅರ್ಧಗಂಟೆಯಾದರೂ ಅಂಬುಲೆನ್ಸ್‌ನ ಸುಳಿವಿಲ್ಲದ ಕಾರಣ ಕೊನೆಗೆ ಗಾಯಾಳನ್ನು ಆಸ್ಪತ್ರೆಗೆ ಬುಲ್ಡೋಜರ್ ಮೂಲಕ ಹೊತ್ತು ತರಬೇಕಾಯಿತು. ಇದನ್ನೂ ಓದಿ: ಕಾಂಗ್ರೆಸ್‌ನವರು ಚಡ್ಡಿ ಹಾಕಿ ಶಾಖೆಗೆ ಬರೋ ದಿನ ದೂರವಿಲ್ಲ – ಸಿಟಿ ರವಿ ವ್ಯಂಗ್ಯ
Advertisement
Advertisement
ಸಮೀಪದ ಗೈರ್ತಲೈ ನಿವಾಸಿ ಮಹೇಶ್ ಬರ್ಮನ್ ಅವರ ಬೈಕ್ ಇನ್ನೊಂದು ಬೈಕ್‌ಗೆ ಡಿಕ್ಕಿ ಹೊಡೆದ ಪರಿಣಾಮ ಗಾಯಗೊಂಡಿದ್ದರು. ಘಟನೆ ನಡೆದು 30 ನಿಮಿಷಗಳಾದರೂ ಅಂಬುಲೆನ್ಸ್ ಬರದ್ದನ್ನು ನೋಡಿ ಬುಲ್ಡೋಜರ್ ಚಾಲಕ ಪುಷ್ಪೆಂದ್ರ ವಿಶ್ವಕರ್ಮ ಅವರು ಸ್ವಯಂಪ್ರೇರಿತರಾಗಿ ಗಾಯಾಳನ್ನು ಆಸ್ಪತ್ರೆಗೆ ಕರೆತಂದಿದ್ದಾರೆ. ಇದನ್ನೂ ಓದಿ: 5 ಸ್ಟಾರ್ ಹೋಟೆಲ್‌ಗೆ ಬಾಂಬ್ ಬೆದರಿಕೆ – ಪೊಲೀಸರಿಂದ ತೀವ್ರ ಶೋಧ
Advertisement
ಬರ್ಮನ್ ಅವರ ಕಾಲಿಗೆ ಪೆಟ್ಟಾಗಿದ್ದು, ಅವರನ್ನು ಪ್ರಥಮ ಚಿಕಿತ್ಸೆ ನೀಡಿದ ಬಳಿಕ ಜಿಲ್ಲಾಸ್ಪತ್ರೆಗೆ ದಾಖಲಿಸಲಾಯಿತು.