CrimeLatestMain PostNational

5 ಸ್ಟಾರ್ ಹೋಟೆಲ್‌ಗೆ ಬಾಂಬ್ ಬೆದರಿಕೆ – ಪೊಲೀಸರಿಂದ ತೀವ್ರ ಶೋಧ

ಚಂಡೀಗಢ: 5 ಸ್ಟಾರ್ ಹೋಟೆಲ್(5 Star Hotel) ಒಂದಕ್ಕೆ ಬಾಂಬ್ ಬೆದರಿಕೆ(Bomb threat) ಬಂದಿರುವ ಘಟನೆ ಹರಿಯಾಣ(Haryana)ದ ಗುರುಗ್ರಾಮ(Gurugram)ದರಲ್ಲಿ ನಡೆದಿದೆ. ಬೆದರಿಕೆ ಹಿನ್ನೆಲೆ ಪೊಲೀಸರು ಹೋಟೆಲ್‌ನಲ್ಲಿ ತೀವ್ರ ಶೋಧ ನಡೆಸಿದ್ದಾರೆ.

ಗುರುಗ್ರಾಮದ ಆಂಬಿಯನ್ಸ್ ಮಾಲ್ ಕಾಂಪ್ಲೆಕ್ಸ್‌ನಲ್ಲಿರುವ ಲೀಲಾ ಹೋಟೆಲ್‌ಗೆ ಬೆಳಗ್ಗೆ 11:35ಕ್ಕೆ ದೂರವಾಣಿ ಮೂಲಕ ಬಾಂಬ್ ಬೆದರಿಕೆ ಕರೆ ಬಂದಿದೆ. ಬೆದರಿಕೆ ಕರೆಯನ್ನು ಸ್ವೀಕರಿಸುತ್ತಲೇ ಹೋಟೆಲ್‌ನಲ್ಲಿದ್ದವರು ಭಯಭೀತರಾಗಿದ್ದಾರೆ. ತಕ್ಷಣ ಪೊಲೀಸರಿಗೆ ಈ ಬಗ್ಗೆ ಮಾಹಿತಿ ನೀಡಲಾಗಿದ್ದು, ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳ ಹಾಗೂ ಶ್ವಾನ ದಳ ಆಗಮಿಸಿದೆ. ಹೋಟೆಲ್‌ನಲ್ಲಿದ್ದವರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಲಾಗಿದ್ದು, ಸ್ಥಳದಲ್ಲಿ ತೀವ್ರ ಶೋಧ ನಡೆಸಲಾಗುತ್ತಿದೆ ಎಂದು ವರದಿಗಳು ತಿಳಿಸಿವೆ. ಇದನ್ನೂ ಓದಿ: ಚಾರ್ಜ್‍ಗೆ ಹಾಕಿದ್ದ ಮೊಬೈಲ್ ಬ್ಯಾಟರಿ ಸ್ಫೋಟ – 8 ತಿಂಗಳ ಮಗು ಸಾವು

 5 ಸ್ಟಾರ್ ಹೋಟೆಲ್‌ಗೆ ಬಾಂಬ್ ಬೆದರಿಕೆ - ಪೊಲೀಸರಿಂದ ತೀವ್ರ ಶೋಧ

ಇದೀಗ ಬೆದರಿಕೆ ಬಂದಿರುವ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ. ಘಟನೆ ಬಗ್ಗೆ ಶೋಧಕಾರ್ಯ ನಡೆಯುತ್ತಿದ್ದು, ಬೆದರಿಕೆ ಕರೆ ನೀಡಿದವರನ್ನು ಗುರುತಿಸಲು ಪ್ರಯತ್ನಿಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಇದನ್ನೂ ಓದಿ: ಉಡುಪಿ ರೈಲ್ವೇ ಬ್ರಿಡ್ಜ್‌ನಲ್ಲಿ ನಿತ್ಯಾನಂದ ಬಾಬಾ ಉರುಳುಸೇವೆ

Live Tv

Leave a Reply

Your email address will not be published. Required fields are marked *

Back to top button