ಗಾಂಧೀನಗರ: ಗುಜರಾತ್‌ನಲ್ಲಿ ಚುನಾವಣೆಗೂ (Gujarat elections) ಮುನ್ನ ಎಲ್ಲಾ ಪಕ್ಷಗಳು ಭರ್ಜರಿಯಾಗಿ ಪ್ರಚಾರ ಕಾರ್ಯಕ್ರಮ ನಡೆಸುತ್ತಿವೆ. ಈ ನಡುವೆ ಗುಜರಾತ್ ಚುನಾವಣೆಗೆ ಸಂಬಂಧಿಸಿದ ವೀಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡಿದೆ. ರಾಜಸ್ಥಾನದ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ (Ashok Gehlot) ಭಾಷಣ ಮಾಡುತ್ತಿದ್ದಾಗ ಗೂಳಿಯೊಂದು (Bull) ಸ್ಥಳಕ್ಕೆ ಪ್ರವೇಶಿಸಿದೆ. ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಸಭಿಕರು ಚೆಲ್ಲಾಪಿಲ್ಲಿಯಾಗಿ ಓಡಿರುವುದು ವೀಡಿಯೋದಲ್ಲಿ ಕಾಣಿಸಿಕೊಂಡಿದೆ.
Advertisement
ಸೋಮವಾರ ಗುಜರಾತ್‌ನ ಮೆಹ್ಸಾನಾದಲ್ಲಿ ರಾಜಸ್ಥಾನದ ಸಿಎಂ ಅಶೋಕ್ ಗೆಹ್ಲೋಟ್ ಅವರ ಚುನಾವಣಾ ರ‍್ಯಾಲಿ ನಡೆದಿದೆ. ಈ ವೇಳೆ ಗೂಳಿಯೊಂದು ಸಭೆಯ ಮಧ್ಯದಲ್ಲಿ ಪ್ರವೇಶಿಸಿದೆ. ಆದರೆ ಈ ಘಟನೆಯ ಬಗ್ಗೆ ಅಶೋಕ್ ಗೆಹ್ಲೋಟ್ ಬಿಜೆಪಿಗೆ (BJP) ಹಿಡಿಶಾಪ ಹಾಕಿದ್ದಾರೆ. ಈ ಹಿಂದಿನಿಂದಲೂ ಕಾಂಗ್ರೆಸ್ (Congress) ಸಭೆ ನಡೆಸಿದಾಗಲೆಲ್ಲ ಈ ಬಿಜೆಪಿಗರು ಗೂಳಿ, ಹಸು ಬಿಡುವುದನ್ನು ನಾನು ನೋಡಿದ್ದೇನೆ ಎಂದು ಕಿಡಿಕಾರಿದ್ದಾರೆ.
Advertisement
गुजरात मे @ashokgehlot51 की सभा में घुसा सांड!!
सीएम बोले…. मैं बचपन से देखता आ रहा हूं, ये भाजपा भेजती है मेरी सभा में सांडों को. pic.twitter.com/RkB8oSmowx
— Sharad (@DrSharadPurohit) November 28, 2022
Advertisement
ಸಭೆಯನ್ನು ಅಡ್ಡಿಪಡಿಸಲು ಬಿಜೆಪಿಯವರು ಈ ಗೂಳಿಯನ್ನು ಬಿಟ್ಟಿದ್ದಾರೆ. ಚುನಾವಣೆಗೂ ಮುನ್ನ ಬಿಜೆಪಿ ನಮ್ಮ ಸಭೆಗಳಿಗೆ ಅಡ್ಡಿಪಡಿಸಲು ಇಂತಹ ಇನ್ನಷ್ಟು ತಂತ್ರಗಳನ್ನು ಮಾಡಲಿದ್ದಾರೆ ಎಂದು ಗೆಹ್ಲೋಟ್ ಆರೋಪಿಸಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‌ನಲ್ಲಿ ಎಷ್ಟು ಜನ ರೌಡಿಶೀಟರ್‌ಗಳಿದ್ದಾರೆ ಅಂತ ಮೊದಲು ಲೆಕ್ಕ ಹಾಕಲಿ: ಸಿಎಂ
Advertisement
ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿರುವ ವೀಡಿಯೋದಲ್ಲಿ ಗೂಳಿ ಸಭೆಯನ್ನು ಪ್ರವೇಶಿಸಿದ ಸಂದರ್ಭ ಗೊಂದಲ ಉಂಟಾಗಿದೆ. ಗೂಳಿ ಅತ್ತಿಂದಿತ್ತ ಓಡಾಡಿದ್ದು, ಅದರಿಂದ ತಪ್ಪಿಸಿಕೊಳ್ಳಲು ಜನರು ಚೆಲ್ಲಾಪಿಲ್ಲಿಯಾಗಿ ಓಡಿದ್ದಾರೆ. ಇಷ್ಟೆಲ್ಲಾ ಗದ್ದಲದ ನಡುವೆ ಅಶೋಕ್ ಗೆಹ್ಲೋಟ್ ವೇದಿಕೆಯಿಂದ ಜನರನ್ನು ಶಾಂತವಾಗಿರುವಂತೆ ಸಲಹೆ ನೀಡುತ್ತಿರುವುದು ಕಂಡುಬಂದಿದೆ. ಇದನ್ನೂ ಓದಿ: ಹೈಕಮಾಂಡ್ ನಾಯಕರ ಭೇಟಿಗೆ ಮುಂದಾದ ಬೊಮ್ಮಾಯಿ – ಸಚಿವ ಸಂಪುಟ ವಿಸ್ತರಣೆ ಕುರಿತು ಚರ್ಚೆ?