ಮುಂಬೈ: ದಕ್ಷಿಣ ಮುಂಬೈನ ಲಾಲ್‍ಬಾಗ್ ಪ್ರದೇಶದಲ್ಲಿರುವ ಬಹುಮಹಡಿ ವಸತಿ ಕಟ್ಟಡದಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಈ ವೇಳೆ ಘಟನೆಯಿಂದ ಬಚಾವ್ ಆಗಲು ಯತ್ನಿಸಿದ ವ್ಯಕ್ತಿಯೊಬ್ಬರು ಕೆಳಕ್ಕೆ ಬಿದ್ದು ಸಾವನ್ನಪ್ಪಿದ್ದಾರೆ.
ಈ ಘಟನೆ ಮುಂಬೈನ ಐಷಾರಾಮಿ ಒನ್ ಅವಿಜ್ಞಾ ಪಾರ್ಕ್‍ನಲ್ಲಿ ನಡೆದಿದ್ದು, 60ನೇ ಮಹಡಿಯಲ್ಲಿ ಬೆಂಕಿ ಕಾಣಿಸಿಕೊಂಡಿದೆ. ಈ ವೇಳೆ ವ್ಯಕ್ತಿಯೊಬ್ಬರು ಅಪಾಯದಿಂದ ತಪ್ಪಿಸಿಕೊಳ್ಳಲು ಯತ್ನಿಸಿ ಕಟ್ಟಡದ 19ನೇ ಮಹಡಿಯಿಂದ ಕೆಳಗೆಬಿದ್ದಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದು, ವೀಡಿಯೋದಲ್ಲಿ ಕಟ್ಟದ ಬಳಿ ಬೆಂಕಿಯಿಂದಾಗಿ ಕಪ್ಪು ಹೊಗೆ ಆವರಿಸಿಕೊಂಡಿರುವುದನ್ನು ಕಾಣಬಹುದಾಗಿದೆ. ಇದನ್ನೂ ಓದಿ: 100 ಕೋಟಿ ಕೇವಲ ಅಂಕಿಯಲ್ಲ, ಇತಿಹಾಸದಲ್ಲಿ ದಾಖಲಾದ ಹೊಸ ಅಧ್ಯಾಯ: ಮೋದಿ
Mumbai | One person dead in fire at Avighna Park apartment building on Curry Road pic.twitter.com/pMdV4tNP7h
— ANI (@ANI) October 22, 2021
ಮೃತ ವ್ಯಕ್ತಿಯನ್ನು ಅರುಣ್ ತಿವಾರಿ(30) ಎಂದು ಗುರುತಿಸಲಾಗಿದ್ದು, ಮಧ್ಯಾಹ್ನ 12.45ರ ಸುಮಾರಿಗೆ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಅಷ್ಟೋತ್ತಿಗೆ ಅವರು ಕೊನೆಯುಸಿರೆಳೆದಿರುವುದಾಗಿ ಕೆಇಎಂ ಆಸ್ಪತ್ರೆಯ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಇದೀಗ ಮುಂಬೈ ಮೇಯರ್ ಕಿಶೋರ್ ಪೆಡ್ನೇಕರ್ ಮತ್ತು ಇತರ ಹಿರಿಯ ಜಿಲ್ಲಾಧಿಕಾರಿಗಳು ಘಟನಾ ಸ್ಥಳಕ್ಕೆ ಆಗಮಿಸಿ ಮೇಲ್ವಿಚಾರಣೆ ನಡೆಸುತ್ತಿದ್ದಾರೆ. ಇದನ್ನೂ ಓದಿ: 100 ಕೋಟಿ ಲಸಿಕೆ ವಿತರಣೆ – ಅನುಮಾನ ವ್ಯಕ್ತಪಡಿಸಿದ ಸಂಜಯ್ ರಾವತ್