ಬೆಂಗಳೂರು: ಜುಲೈ 7ರಂದು ಮಂಡನೆ ಆಗುವ ಬಜೆಟ್ (Budget) ಗಾತ್ರ ಈಗಿರುವ ಬಜೆಟ್‌ಗಿಂತ 30 ರಿಂದ 35 ಸಾವಿರ ಕೋಟಿ ಹೆಚ್ಚಾಗಲಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ತಿಳಿಸಿದ್ದಾರೆ.
ಕ್ಷೇಮವನದಲ್ಲಿ ನೂತನ ಶಾಸಕರಿಗೆ ನಡೆಯುತ್ತಿರುವ ಶಿಬಿರದಲ್ಲಿ ಮಾತನಾಡಿದ ಅವರು, ಅಂದಿನ ಕಾಲದ ಬಜೆಟ್ ಹಾಗೂ ಇಂದಿನ ಬಜೆಟ್ ಬಗ್ಗೆ ಶಾಸಕರಿಗೆ ಪಾಠ ಮಾಡಿದರು. ಕೆಂಗಲ್ ಹನುಮಂತಯ್ಯ ಕಾಲದಲ್ಲಿ ರಾಜ್ಯದ ಬಜೆಟ್ ಸುಮಾರು 21 ಕೋಟಿಗಳಷ್ಟು ಇತ್ತು. ಇಂದು 3.9 ಲಕ್ಷ ಕೋಟಿ ಬಜೆಟ್ ಗಾತ್ರ ಆಗಿದೆ. ಜುಲೈ 7ರಂದು ನಾನು ಮಂಡಿಸುವ ಬಜೆಟ್ ಗಾತ್ರ ಕೂಡಾ 30 ರಿಂದ 35 ಸಾವಿರ ಕೋಟಿ ಹೆಚ್ಚುವರಿ ಆಗಲಿದೆ ಎಂದು ತಿಳಿಸಿದರು. ಇದನ್ನೂ ಓದಿ: 10 ಕೆಜಿ ಅಕ್ಕಿ ಕೊಡದೇ ಇದ್ರೆ ಸಿದ್ದರಾಮಯ್ಯ ನಂ.1 ಸುಳ್ಳುಗಾರ ಎಂದು ತಿಳಿಸುತ್ತೇವೆ: ಎನ್ ರವಿಕುಮಾರ್
ಈಗಾಗಲೇ ಬಸವರಾಜ ಬೊಮ್ಮಾಯಿ (Basavaraj Bommai) 39 ಲಕ್ಷ ಕೋಟಿ ಬಜೆಟ್ ಮಂಡಿಸಿದ್ದಾರೆ. ನಾವು 5 ಗ್ಯಾರಂಟಿಗಳನ್ನು (Guarantee scheme) ಘೋಷಣೆ ಮಾಡಿದ್ದೇವೆ. ಇದಕ್ಕೆ ಹಣ ಇಡಬೇಕು. 5 ಗ್ಯಾರಂಟಿಗೆ ಸುಮಾರು 50-60 ಸಾವಿರ ಕೋಟಿಗಳಷ್ಟು ಹಣ ಬೇಕು. ಮುಂದಿನ ತಿಂಗಳಲ್ಲಿ ನಾನು ಮಂಡಿಸುವ ಬಜೆಟ್‌ನಲ್ಲಿ ಗ್ಯಾರಂಟಿಗಳ ಯೋಜನೆಗೆ ಹಣ ಇಡುತ್ತೇನೆ. ಆಗಸ್ಟ್ 1 ರಿಂದ ನಾನು ಮಂಡಿಸುವ ಬಜೆಟ್ ಜಾರಿಗೆ ಬರಲಿದೆ ಎಂದರು. ಇದನ್ನೂ ಓದಿ: ಪೊಲೀಸರು ನನ್ನನ್ನ ಒದ್ದು ಒಳಗೆ ಹಾಕಿದ್ರು – ಇಂಟರೆಸ್ಟಿಂಗ್ ಸಂಗತಿ ಹಂಚಿಕೊಂಡ ಸಿಎಂ