ಲಕ್ನೋ: ಉತ್ತರ ಪ್ರದೇಶದ ಚುನಾವಣೆಯ ಫಲಿತಾಂಶ ನಮಗೊಂದು ಪಾಠವಾಗಿದ್ದು, ಭವಿಷ್ಯದಲ್ಲಿ ಮತ್ತೆ ಗೆಲ್ಲುತ್ತೇವೆ ಎಂದು ಬಿಎಸ್‍ಪಿ ಮುಖ್ಯಸ್ಥೆ ಮಾಯಾವತಿ ಹೇಳಿದ್ದಾರೆ.
ಉತ್ತರ ಪ್ರದೇಶದ 403 ವಿಧಾನಸಭಾ ಸ್ಥಾನಗಳಲ್ಲಿ ಬಹುಜನ ಸಮಾಜ ಪಕ್ಷವು ಕೇವಲ ಒಂದು ಸ್ಥಾನವನ್ನು ಮಾತ್ರ ಗೆದ್ದಿದ್ದು, ಹೀನಾಯ ಸೋಲನ್ನು ಅನುಭವಿಸಿದೆ. ಇದೀಗ ಈ ಕುರಿತಂತೆ ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಮಾಯಾವತಿ ಅವರು, ಉತ್ತರ ಪ್ರದೇಶದ ಚುನಾವಣಾ ಫಲಿತಾಂಶಗಳು ಬಿಎಸ್‍ಪಿಯ ನಿರೀಕ್ಷೆಗಳಿಗೆ ವಿರುದ್ಧವಾಗಿವೆ. ಅದಕ್ಕೆ ನಾವು ಎದೆಗುಂದಬಾರದು. ಬದಲಾಗಿ ನಾವು ಅದರಿಂದ ಪಾಠ ಕಲಿಯಬೇಕು, ಆತ್ಮಾವಲೋಕನ ಮಾಡಿಕೊಳ್ಳಬೇಕು, ನಮ್ಮ ಪಕ್ಷದ ಚಳವಳಿಯನ್ನು ಮುಂದುವರಿಸಬೇಕು ಮತ್ತು ಮತ್ತೆ ಅಧಿಕಾರಕ್ಕೆ ಬರಬೇಕು. ಈ ಚುನಾವಣಾ ಫಲಿತಾಂಶಗಳು ಬಿಎಸ್‍ಪಿಗೆ ಭವಿಷ್ಯದ ಪಾಠವಾಗಿದೆ ಎಂದು ಹೇಳಿದ್ದಾರೆ.
Advertisement
Advertisement
2017ಕ್ಕೂ ಮುನ್ನ ಉತ್ತರ ಪ್ರದೇಶದಲ್ಲಿ ಬಿಜೆಪಿಗೆ ಉತ್ತಮ ಫಲಿತಾಂಶಗಳು ಸಿಕ್ಕಿರಲಿಲ್ಲ. ಇಂದು ಕಾಂಗ್ರೆಸ್ ಕೂಡ ಬಿಜೆಪಿಯಂತೆಯೇ ಅದೇ ಹಂತಕ್ಕೆ ಹೋಗುತ್ತಿದೆ. ಉತ್ತರಪ್ರದೇಶದ ಚುನಾವಣಾ ಫಲಿತಾಂಶವು ನಮ್ಮ ಪ್ರಯತ್ನಗಳನ್ನು ಮುಂದುವರಿಸಲು ಪಾಠವಾಗಿದೆ ಎಂದಿದ್ದಾರೆ. ಇದನ್ನೂ ಓದಿ: Bulldozer is Back – ಟ್ರೆಂಡ್ ಆಯ್ತು ಬುಲ್ಡೋಜರ್, ಬುಲ್ಡೋಜರ್ ಏರಿ ಬಿಜೆಪಿಯಿಂದ ಸಂಭ್ರಮಾಚರಣೆ
Advertisement
Advertisement
ಬಿಎಸ್‍ಪಿ ವಿರುದ್ಧದ ನಕಾರಾತ್ಮಕ ಪ್ರಚಾರಗಳು ಸಾರ್ವಜನಿಕರನ್ನು ದಾರಿತಪ್ಪಿಸುವಲ್ಲಿ ಯಶಸ್ವಿಯಾದವು. ಬಿಎಸ್‍ಪಿ ಬಿಜೆಪಿಯ ಬಿ-ಟೀಮ್. ಎಂಬುವುದಕ್ಕೆ ವಿರುದ್ಧವಾಗಿದೆ. ಬಿಜೆಪಿ ಮತ್ತು ಬಿಎಸ್‍ಪಿ ಯುದ್ಧವು ರಾಜಕೀಯ ಮಾತ್ರವಲ್ಲ. ಸೈದ್ಧಾಂತಿಕ ಮತ್ತು ಚುನಾವಣಾ ಸಹ ಆಗಿತ್ತು ಎಂದು ತಿಳಿದ್ದಾರೆ.
ಇದೇ ವೇಳೆ ಸಮಾಜವಾದಿ ಪಕ್ಷವು ಮತ್ತೆ ಅಧಿಕಾರಕ್ಕೆ ಬರುವುದು ಇಷ್ಟವಿಲ್ಲದ ಕಾರಣ ಸಾರ್ವಜನಿಕರು ಬಿಜೆಪಿಗೆ ಮತ ಹಾಕಿದ್ದಾರೆ. ರಾಜಕೀಯದಲ್ಲಿ ನಿಮಗೆ ಈ ಏರಿಳಿತಗಳಿರುತ್ತದೆ. ಪಕ್ಷದ ನಾಯಕರು ಇಂತಹ ಸಂದರ್ಭಗಳನ್ನು ಎದುರಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ರಾಶಿ ಯಂತ್ರದಲ್ಲಿ ಸಿಲುಕಿ ಮಹಿಳೆ ದುರಂತ ಸಾವು