ಶ್ರೀನಗರ: ಶನಿವಾರ ಮುಂಜಾನೆ ಜಮ್ಮುವಿನ ಅರಿನಾ ಸೆಕ್ಟರ್‌ನಲ್ಲಿನ ಅಂತಾರಾಷ್ಟ್ರೀಯ ಗಡಿಯಲ್ಲಿ ಪಾಕಿಸ್ತಾನಿ ನುಸುಳುಕೋರನನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಬಂಧಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಒಂದು ವಾರದಲ್ಲಿ ಇದು ಮೂರನೇ ಅತಿಕ್ರಮಣ ಪ್ರಯತ್ನವಾಗಿದೆ. ಅರಿನಾ ಸೆಕ್ಟರ್‌ನ ಆರ್‌ಎಸ್ ಪುರ ಪ್ರದೇಶದ ಅಂತಾರಾಷ್ಟ್ರೀಯ ಗಡಿಯಲ್ಲಿ ಒಬ್ಬ ಪಾಕಿಸ್ತಾನಿ ಪ್ರಜೆಯನ್ನು ಬಿಎಸ್‌ಎಫ್ ಬಂಧಿಸಿದೆ. ಇದನ್ನೂ ಓದಿ: ಅಗ್ನಿವೀರ್ ಪರೀಕ್ಷೆಯಲ್ಲಿ ಫೇಲ್- ಸೇನಾ ಆಕಾಂಕ್ಷಿ ಆತ್ಮಹತ್ಯೆ
Advertisement
Advertisement
ಇದಕ್ಕೂ ಮೊದಲು ಆಗಸ್ಟ್ 25 ರಂದು, ಜಮ್ಮುವಿನ ಸಾಂಬಾ ಪ್ರದೇಶದಲ್ಲಿ ಅಂತಾರಾಷ್ಟ್ರೀಯ ಗಡಿಯಲ್ಲಿ ಮಾದಕ ವಸ್ತುಗಳನ್ನು ಕಳ್ಳಸಾಗಣೆ ಮಾಡಲು ಯತ್ನಿಸಿದ ಪಾಕಿಸ್ತಾನಿ ನುಸುಳುಕೋರನ ಮೇಲೆ ಬಿಎಸ್ಎಫ್ ಗುಂಡು ಹಾರಿಸಿತ್ತು.
Advertisement
ಪಾಕಿಸ್ತಾನ ಕಡೆಯಿಂದ ಗಡಿ ದಾಟಲು ಯತ್ನಿಸಿದ ನುಸುಳುಕೋರನ ಅನುಮಾನಾಸ್ಪದ ಚಲನವಲನವನ್ನು ಗಮನಿಸಿದ ಬಿಎಸ್‌ಎಫ್ ಸಿಬ್ಬಂದಿ ಗುಂಡು ಹಾರಿಸಿದ್ದಾರೆ. ಇದನ್ನೂ ಓದಿ: ನೀಟ್ ಪರೀಕ್ಷೆ: ಒಳಉಡುಪು ಕಳಚಿಡುವಂತೆ ಒತ್ತಾಯಿಸಿದ್ದ ವಿದ್ಯಾರ್ಥಿನಿಯರಿಗೆ ಮರು ಪರೀಕ್ಷೆಗೆ ಅನುಮತಿ
Advertisement
BSF ಪಡೆಗಳು ತಕ್ಷಣ ನುಸುಳುಕೋರನ ಮೇಲೆ ಗುಂಡು ಹಾರಿಸಿತು. ಗಾಯಗೊಂಡವರು ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾದರು.
ಆಗಸ್ಟ್ 21 ರಂದು, ನೌಶೇರಾ ಪಟ್ಟಣದ ಸೆಹರ್ ಮಕ್ರಿ ಪ್ರದೇಶದಲ್ಲಿನ LOCಯಲ್ಲಿ ಭಾರತೀಯ ಸೇನಾ ಪಡೆಗಳು ಆತ್ಮಾಹುತಿ ದಾಳಿಗೆ ಮುಂದಾಗಿದ್ದ ಒಬ್ಬ ನುಸುಳುಕೋರನ ಮೇಲೆ ಗುಂಡು ಹಾರಿಸಿ ಬಂಧಿಸಿದ್ದರು.