ಶಿವಮೊಗ್ಗ: ಡಬಲ್ ಎಂಜಿನ್ ಸರ್ಕಾರದ ಮೂಲಕ ಗ್ರಾಮೀಣ ಭಾಗದ ಜನರ ಕನಸು ನನಸಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ (BS Yediyurappa) ತಿಳಿಸಿದರು.
ಶಿವಮೊಗ್ಗ (Shivamogga) – ಶಿಕಾರಿಪುರ – ರಾಣೇಬೆನ್ನೂರು ಹೊಸ ರೈಲ್ವೆ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಶಂಕುಸ್ಥಾಪನೆ ನೆರವೇರಿಸಿದರು. ಈ ವೇಳೆ ಮಾತನಾಡಿದ ಅವರು, ಈ ದಿನ ನನಗೆ ವೈಶಿಷ್ಟ್ಯ ಪೂರ್ಣವಾಗಿದೆ. ನೇರವಾಗಿ ಪ್ರಧಾನಿಯವರು ಬಂದಿರುವುದು ಈ ಜಿಲ್ಲೆಗೆ ಅತ್ಯಂತ ಸಾರ್ಥಕ ದಿನವಾಗಿದೆ. ಇದು ವಿಮಾನ ನಿಲ್ದಾಣವಲ್ಲ ಮಲೆನಾಡಿಗರ ಕನಸು ನನಸಾದ ದಿನವಾಗಿದೆ. 60ನೇ ಹುಟ್ಟುಹಬ್ಬಕ್ಕೆ ವಾಜಪೇಯಿಯವರು ಬಂದಿದ್ದರು, 80ನೇ ಹುಟ್ಟುಹಬ್ಬಕ್ಕೆ ಇನ್ನಷ್ಟು ನೆನಪು ಉಳಿಯುತ್ತೆ, ನೀವು ಬಂದಿದ್ದೀರಿ, ವಿಮಾನ ನಿಲ್ದಾಣ ಉದ್ಘಾಟನೆ ಆಗಿದೆ ಎಂದರು.
ಶಿವಮೊಗ್ಗ ಜಿಲ್ಲೆಯ ವಿಮಾನ ನಿಲ್ದಾಣ, ರೈತ ಯೋಜನೆ, ನೀರಾವರಿ ಹೀಗೆ ಹತ್ತಾರು ಯೋಜನೆಗೆ ಚಾಲನೆ ನೀಡಲು ಮೋದಿಯವರು ಆಗಮಿಸಿದ್ದಾರೆ. ನಮ್ಮ ಶಿವಮೊಗ್ಗ ವಿಮಾನ ನಿಲ್ದಾಣವನ್ನು ಉದ್ಘಾಟಿಸಿದ್ದಾರೆ. ಈ ಜಿಲ್ಲೆಯ ಪಾಲಿಗೆ ಅತ್ಯಂತ ಸಾರ್ಥಕ ದಿನ ಎಂದು ಭಾವಿಸಿದ್ದೇನೆ ಎಂದು ಹೇಳಿದರು. ಇದನ್ನೂ ಓದಿ: ಪೊಲೀಸ್ ಠಾಣೆ ಮೆಟ್ಟಿಲೇರಿದ ಡಾ. ಜಿ. ಪರಮೇಶ್ವರ್!
ಮೇಕ್ ಇನ್ ಇಂಡಿಯಾಕ್ಕೆ ಪ್ರೇರಣೆ ನೀಡಿದ್ದು ಬಸವಣ್ಣನವರ ತತ್ವವಾಗಿದೆ. ಮೋದಿ ಅವರು ವಿಶ್ವದ ಯಾವುದೇ ದೇಶಕ್ಕೆ ಹೋದರೂ ಬಸವಣ್ಣನವರ ತತ್ವವನ್ನು ಉಲ್ಲೇಖಿಸುತ್ತಾರೆ. ಇದು ನಮ್ಮ ರಾಜ್ಯದ ಭಾಗ್ಯವಾಗಿದೆ ಎಂದು ಅಭಿಪ್ರಾಯ ಪಟ್ಟರು. ಇದನ್ನೂ ಓದಿ: ಗೆಲ್ಲುವುದು 123 ಸ್ಥಾನವಲ್ಲ ಜೆಡಿಎಸ್ ತಪ್ಪಾಗಿ ಮುಂದೆ 1 ಸೇರಿಸಿದೆ- ಜಮೀರ್ ಅಹಮ್ಮದ್ ವ್ಯಂಗ್ಯ