ನವದೆಹಲಿ: ಬ್ರಿಟನ್ ಪ್ರಧಾನಿಯಾಗಿ ರಿಷಿ ಸುನಾಕ್ (Rishi Sunak) ಅಧಿಕಾರ ವಹಿಸಿಕೊಂಡಿದ್ದಾರೆ. ಆದರೆ, ಇದೇ ಹೊತ್ತಲ್ಲಿ ಭಾರತದ ರಾಜಕಾರಣದಲ್ಲಿ ಸುನಾಕ್ ಬಿರುಗಾಳಿ ಎದ್ದಿದೆ. ಅದ್ರಲ್ಲೂ ಕಾಂಗ್ರೆಸ್ (Congress) ಮುಖಂಡ ಶಶಿ ತರೂರ್ ಮಾಡಿರುವ ಟ್ವೀಟ್ ಭಾರೀ ಚರ್ಚೆಗೆ ಕಾರಣವಾಗಿದೆ.
ಟ್ವೀಟ್‍ನಲ್ಲಿ ಏನಿದೆ?: ಕಣ್ಣಿಗೆ ಕಾಣುವ ರೀತಿಯಲ್ಲಿ ಅಲ್ಪಸಂಖ್ಯಾತರೊಬ್ಬರು ಬ್ರಿಟನ್‍ನ ಅತ್ಯುನ್ನತ ಸ್ಥಾನಕ್ಕೆ ಏರಿದ್ದಾರೆ. ಇದು ವಿಶ್ವದಲ್ಲೇ ಅಪರೂಪ. ಈ ಬಗ್ಗೆ ಭಾರತೀಯರು ಖುಷಿ ವ್ಯಕ್ತಪಡಿಸುತ್ತಿದ್ದಾರೆ. ಆದರೆ ಇಂಥಾದ್ದೇ ಭಾರತದಲ್ಲೂ ಘಟಿಸಲು ಸಾಧ್ಯವೇ ಎಂದು ಶಶಿ ತರೂರ್ ಪ್ರಶ್ನಿಸಿದ್ದಾರೆ.
Advertisement
If this does happen, I think all of us will have to acknowledge that theBrits have done something very rare in the world,to place a member of a visible minority in the most powerful office. As we Indians celebrate the ascent of @RishiSunak, let’s honestly ask: can it happen here? https://t.co/UrDg1Nngfv
— Shashi Tharoor (@ShashiTharoor) October 24, 2022
Advertisement
ಈ ಬೆನ್ನಲ್ಲೇ, ನೆಟ್ಟಿಗರು ಶಶಿ ತರೂರ್‌ರನ್ನು (Shashi Tharoor) ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ. ಮೋದಿಗಿಂತ ಮೊದಲು ಎರಡು ಅವಧಿಗೆ ಪ್ರಧಾನಿಯಾಗಿದ್ದ ಮನಮೋಹನ್ ಸಿಂಗ್ ಯಾರು. ಅಲ್ಪಸಂಖ್ಯಾತ ಸಿಖ್ ಅಲ್ಲವೇ. ದೇಶಕ್ಕೆ ಎಷ್ಟು ಮಂದಿ ಮುಸ್ಲಿಮರು ರಾಷ್ಟ್ರಪತಿ ಆಗಿದ್ದಾರೆ ಎಂಬುದು ತರೂರ್‌ಗೆ ಗೊತ್ತಿಲ್ಲವೇ. ಹಾಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಬುಡಕಟ್ಟು ಸಮುದಾಯಕ್ಕೆ ಸೇರಿದವರಲ್ಲವೇ ಎಂದು ತಿರುಗೇಟು ನೀಡಿದ್ದಾರೆ.
Advertisement
Advertisement
ತರೂರ್ ಬೆನ್ನಲ್ಲೇ ಚಿದಂಬರಂ (P Chidambaram) ಟ್ವೀಟ್ ಮಾಡಿ, ಅಮೆರಿಕ, ಬ್ರಿಟನ್‍ಗಳಲ್ಲಿ ಬಹುಸಂಖ್ಯಾತರದಲ್ಲದ ವ್ಯಕ್ತಿಗಳು ಉನ್ನತ ಹುದ್ದೆಗೇರಿದ್ದಾರೆ. ಇದರಿಂದ ಭಾರತ, ಅದರಲ್ಲೂ ಮುಖ್ಯವಾಗಿ ಬಹುಸಂಖ್ಯಾತ ಸಿದ್ಧಾಂತವನ್ನು ಅನುಸರಿಸುವ ಪಕ್ಷಗಳು ಪಾಠ ಕಲಿಯಬೇಕು ಎಂದು ಬಿಜೆಪಿ (BJP) ಉದ್ದೇಶಿಸಿ ಟ್ವೀಟ್ ಮಾಡಿದ್ದಾರೆ. ಆದರೆ, ಬೇರೆ ದೇಶವನ್ನು ನೋಡಿ ಕಲಿಯುವ ದರ್ದು ನಮಗೆ ಬಂದಿಲ್ಲ ಎಂದು ಬಿಜೆಪಿ ಗರಂ ಆಗಿದೆ.
First Kamala Harris, now Rishi Sunak
The people of the U.S. and the U.K have embraced the non-majority citizens of their countries and elected them to high office in government
I think there is a lesson to learned by India and the parties that practise majoritarianism
— P. Chidambaram (@PChidambaram_IN) October 24, 2022
ಈ ನಡುವೆ ಎಂದಿನಂತೆ ತರೂರ್, ಚಿದಂಬರಂ ಹೇಳಿಕೆಗಳಿಂದ ಕಾಂಗ್ರೆಸ್ ಪಕ್ಷ ಅಂತರ ಕಾಯ್ದುಕೊಂಡಿದೆ. ಈ ಹಿಂದೆ ದೇಶದ ಉನ್ನತ ಹುದ್ದೆಗಳನ್ನು ಅಲ್ಪಸಂಖ್ಯಾತರು ಏರಿದ್ದಾರೆ. ಹೀಗಾಗಿ ಬೇರೆ ದೇಶಗಳಿಂದ ಪಾಠ ಕಲಿಯೋ ಅಗತ್ಯವೇನಿಲ್ಲ ಎಂದು ಜೈರಾಮ್ ರಮೇಶ್ ಹೇಳಿದ್ದಾರೆ. ಈ ಮಧ್ಯೆ, ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಟ್ವೀಟ್ ಕೂಡ ಆಕ್ರೋಶಕ್ಕೆ ಕಾರಣವಾಗಿದೆ. ಧಾರ್ಮಿಕ ಅಲ್ಪಸಂಖ್ಯಾತರೊಬ್ಬರನ್ನು ಬ್ರಿಟನ್ ಪ್ರಧಾನಿಯಾಗಿ ಒಪ್ಪಿಕೊಂಡಿದೆ. ಆದರೆ ನಾವು ಮಾತ್ರ ಎನ್‍ಆರ್‌ಸಿ, ಸಿಎಎಯಂತಹ ದ್ವೇಷಪೂರಿತ ಕಾಯ್ದೆಗಳಿಗೆ ಜೋತು ಬಿದ್ದಿದ್ದೇವೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆಯನ್ನು ಭೇಟಿಯಾದ ಸಿದ್ದರಾಮಯ್ಯ
ಇದಕ್ಕೆ ಬಿಜೆಪಿ ತಿರುಗೇಟು ನೀಡಿದೆ. ನೀವು ಕಾಶ್ಮೀರದಲ್ಲಿ ಅಲ್ಪಸಂಖ್ಯಾತರನ್ನು ಸಿಎಂ ಎಂದು ಒಪ್ಪಿಕೊಳ್ಳುವಿರಾ ಎಂದು ಚಾಲೆಂಜ್ ಮಾಡಿದೆ. ಮಮತಾ ಬ್ಯಾನರ್ಜಿ ಕೂಡ ಮೈನಾರಿಟಿ ಅಸ್ತ್ರ ಪ್ರಯೋಗಿಸಿದ್ದು, ಇದಕ್ಕೆ ಬಿಜೆಪಿ ಐಟಿ ಸೆಲ್ ಮುಖ್ಯಸ್ಥ ಅಮಿತ್ ಮಾಳವೀಯ ಕೌಂಟರ್ ನೀಡಿದ್ದಾರೆ. ನೀವು ಮೊದಲು ಸಿಎಂ ಗಾದಿಯಿಂದ ಇಳಿದು ಹಕೀಮ್‍ನನ್ನು ಸಿಎಂ ಮಾಡಿ ತೋರಿಸಿ ಎಂದು ಸವಾಲು ಹಾಕಿದ್ದಾರೆ. ಇದನ್ನೂ ಓದಿ: ನೆರೆಯ ಮಹಾರಾಷ್ಟ್ರದಲ್ಲಿ ಓಮಿಕ್ರಾನ್ ಉಪತಳಿ BQ.1 ಪತ್ತೆ – ಕರ್ನಾಟಕದಲ್ಲಿ ಕಟ್ಟೆಚ್ಚರ